ಮೋದಿ ಸರ್ಕಾರದ ಮೊದಲ 100 ದಿನಗಳ ಕಾರ್ಯ ಯೋಜನೆ ರೆಡಿ!

By Kannadaprabha News  |  First Published Jun 11, 2024, 12:57 PM IST

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಅವರ ಸರ್ಕಾರದ ಮೊದಲ 100 ದಿನಗಳ ಕಾರ್ಯ ಯೋಜನೆ ಸಿದ್ಧವಾಗಿದೆ.


ನವದೆಹಲಿ (ಜೂ.11): ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಅವರ ಸರ್ಕಾರದ ಮೊದಲ 100 ದಿನಗಳ ಕಾರ್ಯ ಯೋಜನೆ ಸಿದ್ಧವಾಗಿದೆ.

ಕೇಂದ್ರದ ಎಲ್ಲ ಸಚಿವಾಲಯಗಳು ಹಾಗೂ ಇಲಾಖೆಗಳು ತಮ್ಮ ವರದಿಯನ್ನು ತಯಾರು ಮಾಡಿದ್ದು, ಅದನ್ನು ಮುಂದಿನ ವಾರ ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ಹಾಗೂ ಕೇಂದ್ರ ಮಂತ್ರಿ ಪರಿಷತ್‌ ಮುಂದೆ ಮಂಡನೆ ಮಾಡುವ ನಿರೀಕ್ಷೆ ಇದೆ.

Tap to resize

Latest Videos

ಮಿತ್ರಪಕ್ಷಗಳ ಮರ್ಜಿಯೊಂದಿಗೆ 3ನೇ ಬಾರಿ ಪ್ರಧಾನಿಯಾದ ಮೋದಿ ಎಂದು ವಿದೇಶಿ ಮಾಧ್ಯಮಗಳ ವರದಿ

ಸರ್ಕಾರಿ ಕಾರ್ಯದರ್ಶಿಗಳ 10 ವಲಯವಾರು ಗುಂಪುಗಳು ಈಗಾಗಲೇ 100 ದಿನಗಳ ಕಾರ್ಯಯೋಜನೆಯನ್ನು ಸಂಪುಟ ಕಾರ್ಯದರ್ಶಿ ಹಾಗೂ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳ ಮುಂದೆ ಮಂಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಇಟಲಿಯಲ್ಲಿ ನಡೆಯುವ ಜಿ-7 ಶೃಂಗದಲ್ಲಿ ಮುಂದಿನ ವಾರ ಪಾಲ್ಗೊಂಡು ವಾಪಸಾಗಲಿದ್ದಾರೆ. ಆ ವೇಳೆ 100 ದಿನಗಳ ಕಾರ್ಯಯೋಜನೆಯನ್ನು ಪಿಎಂಒ ಹಾಗೂ ಸಂಪುಟದ ಮುಂದೆ ಮಂಡಿಸಲಾಗುತ್ತದೆ. ಜೂ.17 ಅಥವಾ 18ರ ವೇಳೆ ಇದು ಮಂಡನೆಯಾಗಲಿದೆ ಎಂದು ವರದಿಗಳು ತಿಳಿಸಿವೆ.

ಈಗಾಗಲೇ ವರದಿಯನ್ನು ಸಿದ್ಧಪಡಿಸಿದ್ದೇವೆ. ಕೆಲವೊಂದು ಅಂಶಗಳ ಸೇರ್ಪಡೆ ಅಥವಾ ಬದಲಾವಣೆಗಳ ಕುರಿತು ಚರ್ಚೆ ನಡೆಯುತ್ತಿದೆ. ಅಂತಿಮ ಪ್ರಾತ್ಯಕ್ಷಿಕೆ ವರದಿಯನ್ನು ಸಜ್ಜಾಗಿಟ್ಟುಕೊಳ್ಳಲು ನಮಗೆ ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದನ್ನು ಮಂಡನೆ ಮಾಡಲು ಅವಕಾಶ ನೀಡಲಾಗುತ್ತದೆ. ಪ್ರಾಯಶಃ ಜೂ.17 ಅಥವಾ 18ರ ವೇಳೆಗೆ ಮಂಡಿಸಬೇಕಾಗಿ ಬರಬಹುದು ಎಂಬ ಸೂಚನೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದೇಶಿ ಮಾಧ್ಯಮಗಳು ಯುರೋಪ್ ದೇಶಗಳನ್ನೇಕೆ ಕ್ರಿಶ್ಚಿಯನ್ ನ್ಯಾಷನಲಿಸ್ಟ್ ಸರ್ಕಾರ ಎಂದು ಕರೆಯಲ್ಲ?

ಭಾನುವಾರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಭಾವಿ ಸಚಿವರ ಸಭೆ ನಡೆಸಿದ್ದ ಮೋದಿ ಅವರು, 100 ದಿನಗಳ ಕಾರ್ಯ ಯೋಜನೆ ಜಾರಿ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದರು.

ಚುನಾವಣೆ ಘೋಷಣೆಯಾಗುವ ಮೊದಲೇ ಅಂದರೆ, ಮಾ.3ರಂದು ಪ್ರಧಾನಿ ಮೋದಿ ಅವರು ಎಲ್ಲ ಸಚಿವಾಲಯಗಳ ಜತೆಗೆ ಸಭೆ ನಡೆಸಿ, 100 ದಿನಗಳ ಕಾರ್ಯಯೋಜನೆ ಸಿದ್ಧಪಡಿಸಲು ಸೂಚಿಸಿದ್ದರು. ದೊಡ್ಡದಾಗಿ ಹಾಗೂ ಮಹತ್ವಾಕಾಂಕ್ಷೆಯಿಂದ ಯೋಚನೆ ಮಾಡುವಂತೆಯೂ ನಿರ್ದೇಶಿಸಿದ್ದರು. ಮಾಮೂಲಿ ಕೆಲಸ ಕಾರ್ಯಗಳು ಹಾಗೂ ಸುಲಭವಾಗಿ ಮಾಡಬಹುದಾದ ಯೋಜನೆಗಳನ್ನಷ್ಟೇ ಸೂಚಿಸದಂತೆಯೂ ಸಲಹೆ ಮಾಡಿದ್ದರು.

click me!