2020ರ ಕೆಸಿಆರ್ ಮನವಿ ಸೀಕ್ರೆಟ್ ಬಹಿರಂಗಪಡಿಸಿದ ಮೋದಿ, ತೆಲಂಗಾಣ ಸಿಎಂಗೆ ಮತ್ತೆ ಮುಖಭಂಗ!

Published : Oct 03, 2023, 06:40 PM ISTUpdated : Oct 03, 2023, 06:53 PM IST
2020ರ ಕೆಸಿಆರ್ ಮನವಿ ಸೀಕ್ರೆಟ್ ಬಹಿರಂಗಪಡಿಸಿದ ಮೋದಿ, ತೆಲಂಗಾಣ ಸಿಎಂಗೆ ಮತ್ತೆ ಮುಖಭಂಗ!

ಸಾರಾಂಶ

ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ 42 ಸ್ಥಾನ ಗೆದ್ದ ಬೆನ್ನಲ್ಲೇ ತೆಲಂಗಾಣ ಸಿಎಂ ಕೆಸಿಆರ್ ಎನ್‌ಡಿಎ ಒಕ್ಕೂಟ ಸೇರಲು ಬಯಸಿದ್ದರು. ಆದರೆ ನಿಮ್ಮ ಅಧಿಕಾರದ ಆಸೆ, ರಾಜಕೀಯ ಉದ್ದೇಶಕ್ಕಾಗಿ ತೆಲಂಗಾಣ ಜನತೆಗೆ ಮೋಸ ಮಾಡಲಾರೆ ಎಂದು ಕೆಸಿಆರ್ ಮನವಿ ತಿರಸ್ಕರಿಸಿದ ಸೀಕ್ರೆಟನ್ನು ಮೋದಿ ಬಹಿರಂಗ ಪಡಿಸಿದ್ದಾರೆ. 

ಹೈದರಾಬಾದ್(ಅ.03) ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಇದೀಗ ಬಾರಿ ವೈರಲ್ ಆಗಿದೆ. 2020ರಲ್ಲಿ ನಡೆದ ಘಟೆನೆ ವಿವರಿಸಿದ ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ನಡೆ ಬಹಿರಂಗಪಡಿಸಿದ್ದಾರೆ. 2020ರಲ್ಲಿ ಹೈದರಾಬಾದ್ ಮುನ್ಸಿಪಲ್ ಚುನಾವಣೆ ನಡೆದಿತ್ತು. ಬಿಜೆಪಿ 48 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿತ್ತು. ಆದರೆ ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ಫಲಿತಾಂಶದ ಬೆನ್ನಲ್ಲೇ ಕೆಸಿಆರ್ ದೆಹಲಿಗೆ ಆಗಮಿಸಿ ನನ್ನ ಭೇಟಿಯಾಗಿದ್ದರು. ಈ ವೇಳೆ ಹೈದರಾಬಾದ್ ಮುನ್ಸಿಪಲ್‌ನಲ್ಲಿ ಬಿಆರ್‌ಎಸ್ ಪಕ್ಷಕ್ಕೆ ಬೆಂಬಲ ನೀಡಿ, ನಾವು ಎನ್‌ಡಿಎ ಒಕ್ಕೂಟ ಸೇರಿಕೊಳ್ಳುತ್ತೇವೆ ಎಂಬ ಮನವಿ ಮಾಡಿದ್ದರು. ಆದರೆ ಕೆಸಿಆರ್ ಈ ಮನವಿಯನ್ನು ನಾನು ತಿರಸ್ಕರಿಸಿದ್ದೆ. ನಿಮ್ಮ ರಾಜಕೀಯ ಉದ್ದೇಶ, ಅಧಿಕಾರಕ್ಕಾಗಿ ತೆಲಂಗಾಣ ಜನತೆಗೆ ಮೋಸ ಮಾಡಲಾರೆ ಎಂದು ಉತ್ತರ ನೀಡಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ತೆಲಂಗಾಣದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಇಂದು ನಿಮಗೆ ಒಂದು ಸೀಕ್ರೆಟ್ ಬಹಿರಂಗಪಡಿಸುತ್ತೇನೆ ಎಂದು ಕೆಸಿಆರ್ ಹಾಗೂ ಮೋದಿ ನಡುವಿನ 2020ರ ಮಾತುಕತೆಯನ್ನು ಬಹಿರಂಗಪಡಿಸಿದ್ದಾರೆ. ಈ ವಿಚಾರ ನಾನು ಇದುವರೆಗೂ ಎಲ್ಲೂ ಹೇಳಿಲ್ಲ. ಇಂದು ಬಹಿರಂಗಪಡಿಸುತ್ತೇನೆ. ನಾನು ಹೇಳುವ ಮಾತನ್ನು ಇಲ್ಲಿರುವ ಮಾಧ್ಯಮದವರು ಪರೀಶೀಲನೆ ಮಾಡಿ. ದಿನಾಂಕ ಸೇರಿದಂತೆ ಎಲ್ಲಾ ವಿಚಾರವನ್ನು ಕೂಲಂಕೂಷವಾಗಿ ಪರಿಶೀಲಿಸಿ ಎಂದು ಮಾಧ್ಯಮ ಮಿತ್ರರಿಗೆ ಸವಾಲು ಹಾಕಿ ಮಾತು ಮುಂದುವರಿಸಿದರು.

ಮುಸ್ಲಿಂ ಅಗಸರಿಗೆ ಮಾತ್ರ ಉಚಿತ ವಿದ್ಯುತ್‌: ಕೆಸಿಆರ್‌ ವಿರುದ್ಧ ಬಿಜೆಪಿ ಕಿಡಿ

2020ರಲ್ಲಿ ಹೈದರಾಬಾದ್ ಮುನ್ಸಿಪಲ್ ಚುನಾವಣೆ ನಡೆದಿತ್ತು. ಬಿಜೆಪಿ 48 ಸ್ಥಾನ ಗೆದ್ದಿತ್ತು. ಆದರೆ ಯಾರಿಗೂ ಬಹುಮತ ಬರಲಿಲ್ಲ. ಇತ್ತ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್ ಪಕ್ಷ ಹೈದರಾಬಾದ್ ಮುನ್ಸಿಪಲ್ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸಿಗೆ ಅಡ್ಡಿಯಾಗಿತ್ತು. ಹೀಗಾಗಿ ಫಲಿತಾಂಶದ ಬೆನ್ನಲ್ಲೇ ಕೆ ಚಂದ್ರಶೇಖರ್ ರಾವ್ ನೇರವಾಗಿ ದೆಹಲಿಗೆ ಆಗಮಿಸಿ ನನ್ನನ್ನು ಭೇಟಿಯಾಗಿದ್ದರು.

 

 

ನನಗೆ ದೊಡ್ಡ ಶಾಲು ಹಾಕಿ ಸನ್ಮಾನ ಮಾಡಿದ್ದರು. ಪ್ರೀತಿಯಿಂದ, ಆತ್ಮೀಯದಿಂದ ವಿನಯದಿಂದ ಮಾತನಾಡಿಸಿದ್ದರು. ನಿಮ್ಮ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯಾಗುತ್ತಿದೆ ಎಂದು ಹಲವು ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಕೆಸಿಆರ್ ವ್ಯಕ್ತಿತ್ವವೇ ಹೀಗಲ್ಲ. ಆದರೂ ಬಿಜೆಪಿ ಹಾಗೂ ಮೋದಿಯನ್ನು ಹೊಗಳಿದರು. ಬಳಿಕ ಒಂದು ಮಾತು ಹೇಳಿದರು.ಹೈದರಾಬಾದ್ ಮುನ್ಸಿಪಲ್‌ನಲ್ಲಿ ಬಿಆರ್‌ಎಸ್ ಪಕ್ಷ ಅಧಿಕಾರ ಹಿಡಿಯಲು ಬಿಜೆಪಿ ನಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಬಿಆರ್‌ಎಸ್ ಪಕ್ಷವನ್ನು ಎನ್‌ಡಿಎ ಒಕ್ಕೂಟಕ್ಕೆ ಸೇರ್ಪಡೆ ಮಾಡಿ ಎಂದು ಮನವಿ ಮಾಡಿದರು.ಈ ವೇಳೆ ನಾನು ಒಂದು ಮಾತು ಹೇಳಿದ್ದೆ. ನಿಮ್ಮ ರಾಜಕೀಯ ಕಾರಣಕ್ಕಾಗಿ ನಿಮ್ಮ ಜೊತೆ ಸೇರಲು ಸಾಧ್ಯವಿಲ್ಲ. ನಾವು ತೆಲಂಗಾಣದಲ್ಲಿ ವಿಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ದ. ನಮ್ಮ ಕಾರ್ಯಕರ್ತ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿ ಹಿಂಸೆ ನೀಡಿದರೂ ಮತ್ತೆ ಜನರತ್ತ ತೆರಳಿ ಕೆಲಸ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ತೆಲಂಗಾಣ ಜನತೆ ಮೋಸ ಮಾಡಲ್ಲ ಎಂದು ಉತ್ತರ ನೀಡಿದ್ದೆ ಎಂದರು.

ಪೇಸಿಎಂ ಬಳಿಕ ಬುಕ್ ಮೈ ಸಿಎಂ ಅಭಿಯಾನ ಆರಂಭಿಸಿದ ಕಾಂಗ್ರೆಸ್, ತೆಲಂಗಾಣದಲ್ಲಿ ಸಂಚಲನ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ