ಕೇದಾರನಾಥ ದೇಗುಲದ ಅವರಣದಲ್ಲಿ ಮೊಬೈಲ್‌ ಬ್ಯಾನ್‌: ಫೋಟೋಗ್ರಫಿ, ವಿಡಿಯೋಗ್ರಫಿಗೂ ನಿಷೇಧ

By BK Ashwin  |  First Published Jul 17, 2023, 12:17 PM IST

ಕೇದಾರನಾಥ ದೇವಾಲಯದ ಆವರಣದಲ್ಲಿ ವಿವಿಧೆಡೆ ಮೊಬೈಲ್ ಫೋನ್‌ಗಳೊಂದಿಗೆ ದೇವಾಲಯದ ಆವರಣವನ್ನು ಪ್ರವೇಶಿಸಬೇಡಿ; ದೇವಾಲಯದ ಒಳಗೆ ಯಾವುದೇ ರೀತಿಯ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ನೀವು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತೀರಿ ಎಂದು ಎಚ್ಚರಿಕೆ ಬೋರ್ಡ್‌ಗಳನ್ನು ಹಾಕಲಾಗಿದೆ.


ನವದೆಹಲಿ (ಜುಲೈ 17, 2023): ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಸೋಮವಾರ ಕೇದಾರನಾಥ ದೇವಾಲಯದ ಆವರಣದಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯನ್ನು ಸಂಪೂರ್ಣ ನಿಷೇಧಿಸಿದೆ. ಕೇದಾರನಾಥ ದೇಗುಲದ ಆವರಣದೊಳಗೆ ಹಲವು ಎಚ್ಚರಿಕೆ ಫಲಕಗಳನ್ನು ಹಾಕಿರುವ ದೇವಾಲಯ ಸಮಿತಿ, ಯಾರೇ ಆಗಲಿ ಫೋಟೋ ತೆಗೆಯುವ ಅಥವಾ ವಿಡಿಯೋ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಅಲ್ಲದೆ, ದೇವಾಲಯದ ಆವರಣದಲ್ಲಿ ವಿವಿಧೆಡೆ ಬೋರ್ಡ್‌ಗಳನ್ನು ಹಾಕಿದ್ದು, 'ಮೊಬೈಲ್ ಫೋನ್‌ಗಳೊಂದಿಗೆ ದೇವಾಲಯದ ಆವರಣವನ್ನು ಪ್ರವೇಶಿಸಬೇಡಿ; ದೇವಾಲಯದ ಒಳಗೆ ಯಾವುದೇ ರೀತಿಯ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ನೀವು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತೀರಿ’’ ಎಂದು ಎಚ್ಚರಿಕೆ ನೀಡಲಾಗಿದೆ. 

Tap to resize

Latest Videos

ಇದನ್ನು ಓದಿ: ಕೇದಾರನಾಥ ದೇಗುಲದ ಮುಂದೆ ತಬ್ಬಿ ಪ್ರೊಪೋಸ್‌ ಮಾಡಿದ ಯುವತಿ: ಇನ್ಮುಂದೆ ಮೊಬೈಲ್‌ ಫೋನ್‌ ಬ್ಯಾನ್‌?

ಹಾಗೆ, ದೇವಾಲಯವು ಜನರಿಗೆ ಸಭ್ಯ ಉಡುಪುಗಳನ್ನು ಧರಿಸಲು ಮತ್ತು ದೇವಾಲಯದ ಆವರಣದಲ್ಲಿ ಡೇರೆಗಳು ಅಥವಾ ಶಿಬಿರಗಳನ್ನು ಸ್ಥಾಪಿಸುವುದನ್ನು ನಿಲ್ಲಿಸುವಂತೆಯೂ ಕೇಳಿಕೊಂಡಿದೆ. ಆದೇಶವನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರುವ ಬೋರ್ಡ್‌ಗಳಲ್ಲಿ ತಿಳಿಸಲಾಗಿದೆ. 

ಇನ್ನು, ಈ ಬಗ್ಗೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜಯ್‌ ಅಜೇಂದ್ರ ಮಾತನಾಡಿದ್ದು, ಧಾರ್ಮಿಕ ಸ್ಥಳವು ನಂಬಿಕೆಯ ವ್ಯವಸ್ಥೆಯನ್ನು ಅನುಸರಿಸುತ್ತದೆ ಮತ್ತು ಭಕ್ತರು ಅದನ್ನು ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು. ಹಾಗೆ, ಎಎನ್‌ಐ ಜೊತೆ ಮಾತನಾಡಿದ ಇವರು, “ಹಿಂದೆ ಕೆಲವು ಯಾತ್ರಾರ್ಥಿಗಳು ದೇವಸ್ಥಾನದೊಳಗೆ ಅಸಭ್ಯವಾಗಿ ವಿಡಿಯೋ ಮತ್ತು ರೀಲ್ಸ್‌ ಮಾಡುವುದರ ಜೊತೆಗೆ ಫೋಟೋ ಕ್ಲಿಕ್ ಮಾಡುತ್ತಿದ್ದರು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು, ಅದಕ್ಕಾಗಿಯೇ ಕೇದಾರನಾಥದಲ್ಲಿ ಎಚ್ಚರಿಕೆ ಫಲಕಗಳನ್ನು ಸಹ ಅಳವಡಿಸಲಾಗಿದೆ’’ ಎಂದು ಮಾಹಿತಿ ನೀಡಿದ್ದಾರೆ.

| Uttarakhand | Shri Badrinath-Kedarnath Temple Committee bans photography and videography inside Kedarnath Temple. The Temple committee puts up warning boards at various places on the Kedarnath temple premises, that if anyone is caught taking photos or making videos,… pic.twitter.com/c4AXVbRrtj

— ANI UP/Uttarakhand (@ANINewsUP)

ಇದನ್ನೂ ಓದಿ: ಡೆಲ್ಲಿ ಮೆಟ್ರೋ ಹಾಗೂ ಪ್ಲಾಟ್‌ಫಾರ್ಮ್‌ ಮೇಲೆ ಬಾಲಿವುಡ್‌ ಹಾಡಿಗೆ ಕುಣಿದ ಯುವತಿ: ದಯವಿಟ್ಟು ನಿಲ್ಲಿಸಿ ಎಂದ ನೆಟ್ಟಿಗರು!

ದೇವಾಲಯದ ಹೊರಗೆ ಚಿತ್ರೀಕರಿಸಲಾದ ವೈರಲ್ ಪ್ರೊಪೋಸ್‌ ವಿಡಿಯೋವನ್ನು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯು ಭಕ್ತರ ಭಾವನೆಗಳಿಗೆ ನೋವುಂಟುಮಾಡುವ ಕಾರಣ ಆವರಣದಲ್ಲಿ ವಿಡಿಯೋಗಳನ್ನು ಮಾಡುವ ಜನರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ಪೊಲೀಸರನ್ನು ಕೇಳಲು ಪ್ರೇರೇಪಿಸಿದ ಕೆಲವು ದಿನಗಳ ನಂತರ ನಿಷೇಧ ಜಾರಿಗೆ ಬಂದಿದೆ.

ಪೊಲೀಸರಿಗೆ ಬರೆದ ಪತ್ರದಲ್ಲಿ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯು, “ಕೆಲವು ಯೂಟ್ಯೂಬರ್‌ಗಳು, ಇನ್‌ಸ್ಟಾಗ್ರಾಮ್ ಇನ್ಪ್ಲುಯೆನ್ಸರ್‌ ಜನರ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿ ವಿಡಿಯೋಗಳು, ಯೂಟ್ಯೂಬ್ ಶಾರ್ಟ್ಸ್‌ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್‌ ಮಾಡುತ್ತಿದ್ದಾರೆ. ಇದರಿಂದಾಗಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಭಾವನೆಗಳು, ಜೊತೆಗೆ. ದೇಶಾದ್ಯಂತ ಅನೇಕರು ಬೇಸರಗೊಂಡಿದ್ದಾರೆ’’ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಕಾರಲ್ಲೂ ಹಾರಾಡ್ಬೋದು: ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕ ಸರ್ಕಾರ ಅನುಮತಿ! ಬೆಲೆ ಎಷ್ಟು ನೋಡಿ..

ದೇವಸ್ಥಾನದ ಹೊರಗೆ ಯುವತಿಯೊಬ್ಬಳು ತನ್ನ ಗೆಳೆಯನಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ, ದೇವಾಲಯದ ಆವರಣಕ್ಕೆ ಪ್ರವೇಶಿಸುವ ಮೊದಲು ಭಕ್ತರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಲು ಕೇಳಿಕೊಂಡಿದ್ದಾರೆ ಎಂದೂ ವರದಿಗಳು ಹೇಳುತ್ತಿವೆ. 

ಇದನ್ನೂ ಓದಿ: ಕೆಲಸದ ಸಮಯ ಮುಗಿಯಿತೆಂದು ದಿಲ್ಲಿ ತಲುಪಬೇಕಿದ್ದ 300 ಜನರ ಜೈಪುರದಲ್ಲೇ ಇಳಿಸಿ ಹೋದ ಏರ್‌ ಇಂಡಿಯಾ ಪೈಲಟ್‌!

click me!