ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪ್ರತ್ಯಕ್ಷ: ರಕ್ಷಣೆ ಕೋರಿ ಮನವಿ

Published : Feb 16, 2026, 08:11 PM IST
Missing Muslim Sisters found Married with Hindu Cousins

ಸಾರಾಂಶ

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಸೋದರಿಯರು, ಹಿಂದೂ ಸೋದರ ಸಂಬಂಧಿಗಳನ್ನು ವಿವಾಹವಾಗಿ ಪ್ರತ್ಯಕ್ಷರಾಗಿದ್ದಾರೆ. ತಮ್ಮ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ಅವರು ಪೊಲೀಸ್ ರಕ್ಷಣೆ ಕೋರಿ ವೀಡಿಯೋ ಬಿಡುಗಡೆ ಮಾಡಿದ್ದಾರೆ. 

ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಸೋದರಿಯರು ಮದುವೆಯಾಗಿ ಪ್ರತ್ಯಕ್ಷ

ಭೋಪಾಲ್: ಫೆಬ್ರವರಿ 9 ರಿಂದ ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಸೋದರಿಯರು ವಾರದ ನಂತರ ಇಬ್ಬರು ಹಿಂದೂ ಸೋದರ ಸಂಬಂಧಿಗಳನ್ನು ಮದುವೆಯಾಗಿ ಕಾಣಿಸಿಕೊಂಡಿದ್ದಾರೆ. ವಾರದ ಹಿಂದೆ ನಾಪತ್ತೆಯಾಗಿದ್ದ ಈ ಇಬ್ಬರು ಮುಸ್ಲಿಂ ಹೆಣ್ಣು ಮಕ್ಕಳು ಮದುವೆಯಾಗಿ ಪ್ರತ್ಯಕ್ಷವಾಗಿದ್ದು, ತಮಗೆ ಪೊಲೀಸ್ ರಕ್ಷಣೆ ಕೋರಿ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಭಾನುವಾರ ಇಬ್ಬರು ಮಹಿಳೆಯರು ತಮ್ಮ ಗಂಡಂದಿರೊಂದಿಗೆ ವೀಡಿಯೋ ಮಾಡಿ ಪೊಲೀಸ್ ರಕ್ಷಣೆ ನೀಡುವಂತೆ ಕೋರಿದ್ದಾರೆ. ವೀಡಿಯೊ ಬಿಡುಗಡೆ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಕುಟುಂಬಗಳು ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿವೆ ಎಂದು ಆ ಮುಸ್ಲಿಂ ಸೋದರಿಯರು ಆರೋಪಿಸಿದ್ದಾರೆ.

ಕೆಲ ಮೂಲಗಳ ಪ್ರಕಾರ ಈ ಘಟನೆ ಛತ್ತರ್‌ಪುರದ ನೌಗಾಂವ್ ಪ್ರದೇಶದಲ್ಲಿ ನಡೆದಿದೆ. ಇಬ್ಬರು ಮಹಿಳೆಯರು ಎಟಿಎಂನಿಂದ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಂದಿರಲಿಲ್ಲ, ನಂತರ ಅವರ ಕುಟುಂಬದವರು ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕುಟುಂಬದವರು ಆರೋಪಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಯನ್ನು ನಡೆಸಿದ್ದರು. ಇಬ್ಬರೂ ಅಪ್ರಾಪ್ತರು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಡಿವೋರ್ಸ್‌ ಕೇಸಲ್ಲಿ ಗಂಡನ ಬದಲು ಆತನ ಗೆಳತಿ ನೀಡಿದಳು ಹೆಂಡತಿಗೆ ದುಬಾರಿ 1.5 ಕೋಟಿ ಪರಿಹಾರ

ಪ್ರತಿಭಟನೆಯ ಸಮಯದಲ್ಲಿ, ಒಬ್ಬ ಮಹಿಳೆ ಪೊಲೀಸರ ಮೇಲೆ ಪಕ್ಷಪಾತದ ಆರೋಪ ಹೊರಿಸಿದ್ದು, ತನ್ನ ಮಗನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದರು ಪೊಲೀಸರು ತಮ್ಮ ದೂರಿನ ಮೇರೆಗೆ ಕ್ರಮ ಕೈಗೊಳ್ಳುವ ಬದಲು ಇನ್ನೊಂದು ಕಡೆಯವರ ಆಗಮನಕ್ಕಾಗಿ ಕಾಯುತ್ತಿದ್ದರು, ಇದು ಠಾಣೆಯಲ್ಲಿ ಕೋಪ ಮತ್ತು ಅವ್ಯವಸ್ಥೆಗೆ ಕಾರಣವಾಯಿತು ಎಂದು ಅವರು ದೂರಿದ್ದಾರೆ.

ಇತ್ತ ವೀಡಿಯೊದಲ್ಲಿ, ಇಬ್ಬರೂ ಮಹಿಳೆಯರು ತಾವು ವಯಸ್ಕರು ಎಂದು ಹೇಳಿಕೊಂಡಿದ್ದು, ತಾವಿಬ್ಬರು ತಮ್ಮ ಸ್ವಂತ ಇಚ್ಛೆಯಂತೆ ವಿವಾಹವಾಗಿದ್ದು, ಅವರು ಸ್ವಇಚ್ಛೆಯಿಂದ ಮನೆ ತೊರೆದಿದ್ದೇವೆ ಮತ್ತು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಮದುವೆಯ ಬಳಿಕ ತಮ್ಮ ಅತ್ತೆ ಮಾವಂದಿರಿಗೆ ಯಾರು ಕಿರುಕುಳ ನೀಡದಂತೆ ರಕ್ಷಣೆ ಒದಗಿಸುವಂತೆ ಅವರು ಛತ್ತರ್ಪುರದ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರು. ತಮಗೆ ಅಥವಾ ತಮ್ಮ ಗಂಡನ ಕುಟುಂಬಗಳಿಗೆ ಏನಾದರೂ ಸಂಭವಿಸಿದರೆ, ಅದಕ್ಕೆ ನಮ್ಮ ಕುಟುಂಬ ಸದಸ್ಯರೇ ಕಾರಣವಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ಶಿವನ ದರ್ಶನಕ್ಕಾಗಿ ಜನ ಕ್ಯೂ ನಿಂತಿರುವ ಈ ನೆಲ ಭಾರತದಲ್ಲ: ಶಿವನ ಆರಾಧಕರಿರುವ ಆ ವಿದೇಶಿ ನೆಲ ಯಾವುದು?

ಘಟನೆಗೆ ಸಂಬಂಧಿಸಿದಂತೆ ನೌಗಾಂವ್ ಪೊಲೀಸ್ ಠಾಣೆಯ ಉಸ್ತುವಾರಿ ಬಾಲ್ಮಿಕ್ ಚೌಬೆ ಮಾತನಾಡಿ, ಯುವತಿಯರ ನಾಪತ್ತೆ ದೂರು ದಾಖಲಾಗಿದ್ದು, ಕುಟುಂಬವು ಅಪಹರಣದ ಶಂಕೆಯನ್ನು ವ್ಯಕ್ತಪಡಿಸಿದೆ. ಆದರೆ ಇಬ್ಬರೂ ಮಹಿಳೆಯರು ವಯಸ್ಕರು ಮತ್ತು ಸೋದರ ಸಂಬಂಧಿಗಳು. ವಿಡಿಯೋ ವೈರಲ್ ಆದ ನಂತರ ಪೊಲೀಸರು ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ಈ ಖ್ಯಾತಿಗೆ 1.4 M ಫಾಲೋವರ್ಸ್ ಇದ್ರೂ ಕಾಮನ್ ಸೆನ್ಸ್ ಇಲ್ಲ; ಕಬ್ಬನ್ ಪಾರ್ಕ್ ನೋ-ಕಿಸ್ ಬೋರ್ಡ್ ಮುಂದೆ ಲಿಪ್‌ಲಾಕ್!