ಮದ್ವೆಯಾಗಿ ಒಂದೇ ವರ್ಷಕ್ಕೆ ನಾಪತ್ತೆಯಾದ ಗಂಡ: ಇನ್ಸ್ಟಾ ರೀಲ್ಸ್‌ನಲ್ಲಿ ಮತ್ತೊಬ್ಬ ಮಹಿಳೆಯ ಜೊತೆ ಪತ್ತೆ

Published : Sep 01, 2025, 07:02 PM IST
Missing Husband Spotted with Another Woman

ಸಾರಾಂಶ

ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಎಲ್ಲರಂತೆ ಯುವತಿಯೊಬ್ಬಳನ್ನು  ಮದ್ವೆಯಾಗಿದ್ದ. ಮದುವೆಯ ನಂತರ ದಂಪತಿಗೆ ಮಗುವೂ ಆಗಿದೆ. ಇದಾದ ಒಂದು ವರ್ಷದ ನಂತರ ಈ ಖತರ್ನಾಕ್ ಕಿಲಾಡಿ ಮನೆಯಿಂದಲೇ ನಾಪತ್ತೆಯಾಗಿದ್ದ ಈಗ ಮತ್ತೊಬ್ಬ ಮಹಿಳೆ ಜೊತೆ ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಆತ ಕಾಣಿಸಿಕೊಂಡಿದ್ದಾನೆ.

ಮದ್ವೆಯಾಗಿ ಒಂದೇ ವರ್ಷಕ್ಕೆ ಮಗು ಕೊಟ್ಟು ನಾಪತ್ತೆಯಾದ ಗಂಡ

ಪ್ರಪಂಚದಲ್ಲಿ ಎಂತೆಂಥಾ ಜನಗಳಿರ್ತಾರೆ ನೋಡಿ. ಇಂತಹವರನ್ನು ನೋಡಿಯೇ ಇಂದಿನ ಯುವ ಸಮೂಹ ಮದ್ವೆ ಆಗೋದಿಕೆ ಹೆದರ್ತಿದೆ. ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಎಲ್ಲರಂತೆ ಯುವತಿಯೊಬ್ಬಳನ್ನು ಎಲ್ಲಾ ಶಾಸ್ತ್ರ ಸಂಪ್ರದಾಯ ಬದ್ಧವಾಗಿ ಮದ್ವೆಯಾಗಿದ್ದಾನೆ. ಮದುವೆಯ ನಂತರ ದಂಪತಿಗೆ ಮಗುವೂ ಆಗಿದೆ. ಇದಾದ ಒಂದು ವರ್ಷದ ನಂತರ ಈ ಖತರ್ನಾಕ್ ಕಿಲಾಡಿ ಮನೆಯಿಂದಲೇ ನಾಪತ್ತೆಯಾಗಿದ್ದ. ಘಟನೆಯ ಬಗ್ಗೆ ಹೆಂಡತಿ ಪೊಲೀಸರಿಗೂ ದೂರು ನೀಡಿದ್ದರು. ಪೊಲೀಸರು ಮಾಮೂಲಿನಂತೆ ಕೆಲ ದಿನ ಹುಡುಕುವಂತೆ ಮಾಡಿ ಸುಮ್ಮನಾಗಿದ್ದರು. ಆದರೆ ಈಗ ಆ ಕಾಣೆಯಾಗಿದ್ದ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್‌ವೊಂದರಲ್ಲಿ ಮತ್ತೊಬ್ಬ ಯುವತಿ ಜೊತೆ ಪತ್ತೆಯಾಗಿದ್ದು, ಇದನ್ನು ನೋಡಿ ಪತ್ನಿಗೆ ಆಘಾತವಾಗಿದೆ. ಉತ್ತರ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಮತ್ತೊಬ್ಬ ಮಹಿಳೆಯ ಜೊತೆ ಪತ್ತೆ

2017ರಲ್ಲಿ ಉತ್ತರ ಪ್ರದೇಶ ಮುರ್ರಾನಗರದ ನಿವಾಸಿ ಶೀಲು ಎಂಬ ಮಹಿಳೆಯ ಜೊತೆ ಹರ್ದೋಯಿ ಜಿಲ್ಲೆಯ ಅತಮೌ ಗ್ರಾಮದ ಜೀತೇಂದ್ರ ಕುಮಾರ್ ಎಂಬಾತನ ಮದ್ವೆ ನಡೆದಿತ್ತು. ಮದ್ವೆಯಾದ ನಂತರ ದಂಪತಿಗೆ ಮಗೂವೂ ಆಗಿತ್ತು. ಇದಾದ ನಂತರ 2018ರಲ್ಲಿ ಅಂದರೆ ಕೇವಲ ಒಂದು ವರ್ಷದಲ್ಲೇ ಆತ ಪತ್ನಿ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದ. ಆದರೆ ಈಗ ಆತ ಇನ್ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಮತ್ತೊಬ್ಬ ಮಹಿಳೆಯ ಜೊತೆ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಹೆಂಡ್ತಿಗೆ ಶಾಕ್‌ ಆಗಿದೆ.

ಬೇರೆ ಯುವತಿಯ ಜೊತೆ ಮದ್ವೆಯಾಗಿ ಆಕೆಯ ಜೊತೆ ವಾಸಿಸುತ್ತಿರುವ ಪತಿ:

ಗಂಡ ನಾಪತ್ತೆಯಾದ ನಂತರ ಶೀಲು ಪೊಲೀಸರಿಗೂ ದೂರು ನೀಡಿದ್ದು, ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾಳೆ. ಆದರೆ ಆತ ಸಿಕ್ಕಿರಲಿಲ್ಲ, ಇತ್ತ ಜೀತೇಂದ್ರ ಕುಮಾರ್‌ನ ಕುಟುಂಬದವರು ಆತನ್ನು ಶೀಲುವಿನ ಕುಟುಂಬದವರೇ ಆತನ ನಾಪತ್ತೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದರು. ಗಂಡನ ನಾಪತ್ತೆಯ ನಂತರ ಶೀಲು ತನ್ನ ಪುಟ್ಟ ಮಗುವನ್ನು ಕರೆದುಕೊಂಡು ತನ್ನ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಈ ಮಧ್ಯೆ ಆಕೆಯ ಗಂಡ ಲೂಧಿಯಾನದಲ್ಲಿ ಬೇರೊಬ್ಬ ಮಹಿಳೆಯ ಜೊತೆ ರೀಲ್ಸ್‌ನಲ್ಲಿ ಇರುವುದನ್ನು ಪತ್ನಿ ಗುರುತಿಸಿದ್ದು, ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.

ನನ್ನ ಪತಿ ಮರು ಮದುವೆಯಾಗಿದ್ದು, ಬೇರೆ ಮಹಿಳೆಯ ಜೊತೆ ವಾಸ ಮಾಡ್ತಿದ್ದಾರೆ. ಈ ವಿಚಾರ ಆತನ ಕುಟುಂಬದವರಿಗೂ ತಿಳಿದಿತ್ತು. ಆದರೆ ಅವರು ಈ ವಿಚಾರವನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ, ನಾನು 2017 ರಲ್ಲಿ ಎಲ್ಲಾ ವಿಧಿವಿಧಾನಗಳು ಮತ್ತು ಪದ್ಧತಿಗಳ ಪ್ರಕಾರ ವಿವಾಹವಾದೆ. ನನಗೆ ಒಬ್ಬ ಮಗನಿದ್ದಾನೆ, ನನ್ನ ಪತಿ ನಾಪತ್ತೆಯಾದ ನಂತರ ಆತನ ಕುಟುಂಬದವರು ಎಫ್ಐಆರ್ ದಾಖಲಿಸಿದರು. ಆದರೆ ಅದರ ಬಗ್ಗೆ ನಮ್ಮ ಮನೆಯವರಿಗಾಗಲಿ ನಮ್ಮ ಕುಟುಂಬದವರಿಗಾಗಿಲಿ ತಿಳಿದಿರಲಿಲ್ಲ, ಆದರೆ ಈಗ ಆತನನ್ನು ನಾನು ಮತ್ತೊಂದು ಮಹಿಳೆಯ ಜೊತೆ ರೀಲ್ಸ್‌ನಲ್ಲಿ ನೋಡಿದ್ದೇನೆ. ಅವನು ಆಕೆಯನ್ನು ಮದ್ವೆಯೂ ಆಗಿದ್ದಾನೆ.

ಶೀಲುವಿನ ಕುಟುಂಬದವರ ವಿರುದ್ಧವೇ ಕೊಲೆ ಆರೋಪ ಮಾಡಿದ್ದ ಜೀತೇಂದ್ರನ ಕುಟುಂಬದವರು:

ಅತ್ತ ಅವರ ಕುಟುಂಬದವರು ಅವರ ಮಗನನ್ನು ನಮ್ಮ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ನಿಜ ಎಂದರೆ ಅವನ ಕುಟುಂಬದವರೇ ಸೇರಿ ಪಿತೂರಿ ಮಾಡಿದ್ದಾರೆ. ಅವರು ನನ್ನೊಂದಿಗೆ ಆಟವಾಡಿದರು ಹಾಗೂ ಈಗಲೂ ಅವರು ನನ್ನ ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶೀಲು ದೂರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಎಸ್‌ಪಿ ನೃಪೇಂದ್ರ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಜೀತೇಂದ್ರಕುಮಾರ್ ಅವರು ವಿವಾಹವಾದರು. ಮದುವೆಯಾದ ಒಂದು ವರ್ಷದ ನಂತರ, ಅವರು ಯಾರಿಗೂ ತಿಳಿಸದೆ ಮನೆಯಿಂದ ಹೊರಟುಹೋದರು ನಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು ಎಂದು ಹೇಳಿದ್ದಾರೆ.

ಈಗ ವೀಡಿಯೊಗಳ ಮೂಲಕ ತನ್ನ ಪತಿ ಜೀವಂತವಾಗಿದ್ದಾನೆ ಎಂದು ಶೀಲು ದೃಢಪಡಿಸಿದ ನಂತರ ಶೀಲು ಅವರು ಇತ್ತೀಚೆಗೆ ಸ್ಯಾಂಡಿಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲಿಯೇ ಜಿತೇಂದ್ರ ಕುಮಾರ್‌ ಕಾಣೆಯಾದ ಬಗ್ಗೆ ಮೂಲ ದೂರು ದಾಖಲಾಗಿತ್ತು ಎಂದು ಅವರು ಹೇಳಿದರು. ತನಿಖೆ ನಡೆಯುತ್ತಿದೆ ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: ನೋ ಹೆಲ್ಮೆಟ್ ನೋ ಪೆಟ್ರೋಲ್ ಎಂದ ಬಂಕ್ ಸಿಬ್ಬಂದಿಗೆ ಗುಂಡಿಕ್ಕಿದ ಬೈಕ್ ಸವಾರರು

ಇದನ್ನೂ ಓದಿ: ಹೇಮಾವತಿ ನದಿಯ ನೀರಿನ ಮಟ್ಟ ಹಠಾತ್ ಏರಿಕೆ: ಮೇಯಲು ಬಿಟ್ಟ ಹಸುಗಳ ಸೊಂಟಕ್ಕೆ ಬೆಲ್ಟ್ ಕಟ್ಟಿ ಏರ್‌ಲಿಫ್ಟ್

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?