ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ, ಹುಬ್ಬಳ್ಳಿಯಿಂದ ದಿಬ್ರುಗಢಕ್ಕೆ ನೂತನ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. ಈ ರೈಲು ಅಕ್ಟೋಬರ್ 5, 2024 ರಂದು ದಿಬ್ರುಗಢದಿಂದ ಹೊರಟು, ಅಕ್ಟೋಬರ್ 8, 2024 ರಂದು ಹುಬ್ಬಳ್ಳಿಗೆ ಆಗಮಿಸುತ್ತದೆ.
ಹುಬ್ಬಳ್ಳಿ/ ಅಸ್ಸಾಂ (ಅ.03): ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ಈಶಾನ್ಯ ಗಡಿನಾಡು ರೈಲ್ವೆಯು ಅಸ್ಸಾಂ ರಾಜ್ಯದ ದಿಬ್ರುಗಢ ನಿಲ್ದಾಣದಿಂದ ಹುಬ್ಬಳ್ಳಿಗೆ ಏಕಮುಖ ವಿಶೇಷ ಎಕ್ಸ್ ಪ್ರೆಸ್ ರೈಲನ್ನು (07359) ಹೊಸದಾಗಿ ಬಿಡಲಾಗಿದೆ.
ರೈಲು ಸಂಖ್ಯೆ 07359 ಅಕ್ಟೋಬರ್ 5, 2024 ರಂದು (ಶನಿವಾರ) ಮಧ್ಯಾಹ್ನ 01:30 ಕ್ಕೆ ಅಸ್ಸಾಂ ರಾಜ್ಯದ ದಿಬ್ರುಗಢದಿಂದ ಹೊರಟು, ಅಕ್ಟೋಬರ್ 8, 2024 ರಂದು ಬೆಳಿಗ್ಗೆ 09:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಮಾರ್ಗಮಧ್ಯೆ, ಈ ರೈಲು ನ್ಯೂ ಟಿನ್ಸುಕಿಯಾ, ಮಹರ್ಕಟಿಯಾ, ಸಿಮಲುಗುರಿ ಜಂ., ಮರಿಯಾನಿ ಜಂ., ಫರ್ಕಟಿಂಗ್ ಜಂ., ದಿಮಾಪುರ್, ದಿಫು, ಲುಮ್ಡಿಂಗ್ಜಂ., ಹೊಜಾಯಿ, ಚಾಪರ್ಮುಖ್ ಜಂ., ಜಾಗಿ ರೋಡ್, ಗುವಾಹಟಿ, ಕಾಮಾಖ್ಯ, ರಂಗಿಯಾ ಜಂ., ನ್ಯೂ ಬೊಂಗೈಗಾಂವ್, ನ್ಯೂ ಕೂಚ್ ಬೆಹಾರ್, ಧೂಪ್ಗುರಿ, ನ್ಯೂ ಜಲ್ಪೈಗುರಿ, ಖಿಶನ್ಗಂಜ್, ಮಾಲ್ಡಾ ಟೌನ್, ರಾಂಪುರ್ ಹಟ್, ಬೋಲ್ಪುರ್ ಶಾಂತಿನಿಕೇತನ, ದಂಕುನಿ, ಖರಗ್ಪುರ ಜಂಕ್ಷನ್‌ಗಳಲ್ಲಿ ನಿಲುಗಡೆ ಆಗಲಿದೆ.
ಇದನ್ನೂ ಓದಿ: "ಸ್ವಲ್ಪ ನೋಡ್ಕೊಂಡು ಕೊಡಿ ಅಣ್ಣಾ" ರೈಲು ಮಾರಾಟಕ್ಕೆ ಮುಂದಾದ ವ್ಯಕ್ತಿ; ವಿಡಿಯೋ ವೈರಲ್
ಮುಂದುವರೆದು ಬಾಲಸೋರ್, ಭದ್ರಖ್, ಕಟಕ್, ಭುವನೇಶ್ವರ್, ಖುರ್ದಾ ರೋಡ್ ಜಂ., ಬೆರಹಂಪುರ್, ಪಾಲಸಾ, ಶ್ರೀಕಾಕುಳಂ ರೋಡ್, ವಿಜಯನಗರಂ ಜಂ., ಕೊತ್ತವಲಸಾ, ಸಿಂಹಾಚಲಂ ನಾರ್ತ್, ದುವ್ವಾಡ, ಸಾಮಲ್ಕೋಟ್ ಜಂ., ರಾಜಮಂಡ್ರಿ, ಏಲೂರು, ವಿಜಯವಾಡ ಜಂ., ಗುಂಟೂರು ಜಂ., ನರಸರಾವ್ಪೇಟೆ, ವಿನುಕೊಂಡ, ಮಾರ್ಕಾಪುರ ರೋಡ್, ಗಿಡ್ಡಲೂರು, ದಿಗುವಮೆಟ್ಟಾ, ನಂದ್ಯಾಲ್, ಧೋಣೆ ಜಂ., ಗುಂತಕಲ್ ಜಂ.,. ಬಳ್ಳಾರಿ ಜಂ., ತೋರಣಗಲ್ಲು, ಹೊಸಪೇಟೆ ಜಂಕ್ಷನ್, ಕೊಪ್ಪಳ ಮತ್ತು ಗದಗ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ನಂತರ ಕೊನೆಯ ನಿಲ್ದಾಣ ಹುಬ್ಬಳ್ಳಿಗೆ ತಲುಪಲಿದೆ.
ಈ ರೈಲು 10 ಸ್ಲೀಪರ್ ಕ್ಲಾಸ್ ಬೋಗಿ, 2 ಜನರಲ್ ಸೆಕೆಂಡ್ ಕ್ಲಾಸ್ ಬೋಗಿ, ಮತ್ತು ಎಸ್ಎಲ್ಆರ್/ಡಿ-2 ಸೇರಿದಂತೆ ಒಟ್ಟು 14 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಸಿಬ್ಬಂದಿ ಡಾ. ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.