ಅಮರಾವತಿ ಮುಂಬೈ ರೈಲಿಗೆ ಟ್ರಕ್ ಡಿಕ್ಕಿ: ನಜ್ಜುಗುಜ್ಜಾದ ಟ್ರಕ್ ವೀಡಿಯೋ ವೈರಲ್

Published : Mar 14, 2025, 03:42 PM ISTUpdated : Mar 14, 2025, 09:14 PM IST
ಅಮರಾವತಿ ಮುಂಬೈ ರೈಲಿಗೆ ಟ್ರಕ್ ಡಿಕ್ಕಿ: ನಜ್ಜುಗುಜ್ಜಾದ ಟ್ರಕ್ ವೀಡಿಯೋ ವೈರಲ್

ಸಾರಾಂಶ

ಮಹಾರಾಷ್ಟ್ರದ ಬೊಡ್ವಾಡದಲ್ಲಿ ಮುಂಬೈ ಅಮರಾವತಿ ಎಕ್ಸ್‌ಪ್ರೆಸ್ ರೈಲಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ರೈಲು ಪ್ರಯಾಣಿಕರು ಮತ್ತು ಟ್ರಕ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಬೊಡ್ವಾಡ: ಟ್ರಕ್ಕೊಂದು ಮುಂಬೈ ಅಮರಾವತಿ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿದ್ದು ಟ್ರಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ರೈಲು ಪ್ರಯಾಣಿಕರಿಗಾಗಲಿ ಟ್ರಕ್ ಚಾಲಕನಿಗಾಗಲಿ ಯಾವುದೇ ಹಾನಿಯಾಗಿಲ್ಲ. ಆದರೆ ಈ ಅವಘಡದಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಹಾರಾಷ್ಟ್ರದ ಬೊಡ್ವಾಡ ರೈಲು ನಿಲ್ದಾಣದ ಸಮೀಪ ಇರುವ ರೈಲ್ವೆ ಕ್ರಾಸಿಂಗ್‌ನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಇದರಿಂದ ಅಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದರೆ ರೈಲಿನ ಪ್ರಯಾಣಿಕರಿಗಾಗಲಿ ಟ್ರಕ್ ಚಾಲಕನಿಗಾಗಲಿ ಯಾವುದೇ ಗಾಯಗಳಾಗದೇ ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಅಪಘಾತದಿಂದಾಗಿ ರೈಲು ಸಂಚಾರದಲ್ಲಿಯೂ ಕೆಲ ಹೊತ್ತು ತೀವ್ರ ವ್ಯತ್ಯಯವಾಗಿತ್ತು.  ಜೊತೆಗೆ ಘಟನೆಯಲ್ಲಿ ಟ್ರಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಪಘಾತದ ಪರಿಣಾಮವಾಗಿ ರೈಲ್ವೆ ಮೂಲಸೌಕರ್ಯಕ್ಕೆ ಹಾನಿಯಾಗಿದ್ದು, ಅದರಲ್ಲಿ ಓವರ್‌ಹೆಡ್ ವಿದ್ಯುತ್ ತಂತಿಗಳು ಸೇರಿವೆ ಎಂದು ವರದಿಯಾಗಿದೆ.

ಮುಚ್ಚಿದ್ದ ಕ್ರಾಸಿಂಗ್‌ನಲ್ಲಿ ಮುನ್ನುಗಿದ್ದ ಟ್ರಕ್ 

ರೈಲು ಗುದ್ದಿದ್ದ ರಭಸಕ್ಕೆ ಟ್ರಕ್ ಎರಡು ಭಾಗ ಆಗಿದೆ ಅಲ್ಲದೇ ಇಂಜಿನ್‌ನಿಂದ ಹೊಗೆ ಬರಲು ಶುರುವಾಗಿದೆ. ಟ್ರಕ್‌ನ ಮುಂಭಾಗ ರೈಲಿನ ಇಂಜಿನ್‌ ಜೊತೆ ಸಿಲುಕಿಕೊಂಡಿರುವುದು ಕಂಡು ಬಂದಿದೆ. ಆದರೆ ಅದೃಷ್ಟವಶಾತ್ ರೈಲಿನ ಇಂಜಿನ್‌ಗೆ ಯಾವುದೇ ಹಾನಿಯಾಗಿಲ್ಲ. ಅಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಗೋಧಿ ಸಾಗಿಸುತ್ತಿದ್ದ ಟ್ರಕ್ ಅನಧಿಕೃತ ಮಾರ್ಗದ ಮೂಲಕ ರೈಲ್ವೆ ಹಳಿಗಳನ್ನು ದಾಟಲು ಪ್ರಯತ್ನಿಸಿದಾಗ ಬೆಳಗಿನ ಜಾವ 4:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಲೆವೆಲ್ ಕ್ರಾಸಿಂಗ್ ಅನ್ನು ಬಹಳ ಹಿಂದೆಯೇ ಮುಚ್ಚಲಾಗಿತ್ತು ಮತ್ತು ಅದನ್ನು ರೈಲ್ವೆ ಓವರ್ ಬ್ರಿಡ್ಜ್ ಮೂಲಕ ಬದಲಾಯಿಸಲಾಗಿತ್ತು. ಆದರೆ ಈ ಟ್ರಕ್‌ ಹೀಗಿದ್ದೂ ಕೂಡ ಹಳೆಯ ರೈಲ್ವೆ ಕ್ರಾಸಿಂಗ್‌ನಲ್ಲಿ ಮುನ್ನುಗಲು ಯತ್ನಿಸಿದ ವೇಳೆ ಈ ಅನಾಹುತ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Jaffar Express Train Hijack: ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ ರೈಲ್ವೆ ಚಾಲಕರ ಸಂಬಳ ಎಷ್ಟಿದೆ ಗೊತ್ತಾ ?

ಈ ಅಪಘಾತದಿಂದಾಗಿ ರೈಲ್ವೆ ಮೂಲಸೌಕರ್ಯಕ್ಕೆ ಹಾನಿಯಾಗಿದೆ.  ಅದರಲ್ಲಿ ಓವರ್‌ಹೆಡ್‌ ವಿದ್ಯುತ್ ತಂತಿಗಳು ಸೇರಿವೆ. ಇದರಿಂದಾಗಿ ರೈಲ್ವೆ ಸಂಚಾರಕ್ಕೆ ಸ್ವಲ್ಪ ಸಮಯ ಅಡಚಣೆ ಉಂಟಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಾಕ್‌ನಲ್ಲಿ ರೈಲು ಅಪಹರಣ ಪ್ರಕರಣ: ಬಲೂಚಿಸ್ತಾನದಲ್ಲಿ ಗರಿಗೆದರಿದ ಬಿಕ್ಕಟ್ಟು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್