ನಿಯಮ ಮೀರಿ ಮಕ್ಕಳು ಫೇಸ್‌ಬುಕ್‌ನಲ್ಲಿ: ಆತಂಕ

Published : Jul 26, 2021, 11:05 AM ISTUpdated : Jul 26, 2021, 11:45 AM IST
ನಿಯಮ ಮೀರಿ ಮಕ್ಕಳು ಫೇಸ್‌ಬುಕ್‌ನಲ್ಲಿ: ಆತಂಕ

ಸಾರಾಂಶ

* 10 ವರ್ಷ ಕೆಳಗಿನ ಶೇ.37 ಮಕ್ಕಳಿಂದ ಫೇಸ್‌ಬುಕ್‌ ಬಳಕೆ * ನಿಯಮ ಮೀರಿ ಮಕ್ಕಳು ಫೇಸ್‌ಬುಕ್‌ನಲ್ಲಿ: ಆತಂಕ * 10ರ ಒಳಗಿನ ಶೇ.24 ಮಕ್ಕಳಿಂದ ಇನ್‌ಸ್ಟಾಗ್ರಾಂ ಬಳಕೆ * ಇದು ನಿಯಮದ ಉಲ್ಲಂಘನೆ: ಮಕ್ಕಳ ಹಕ್ಕು ಆಯೋಗ * ಸೋಷಿಯಲ್‌ ಮೀಡಿಯಾ ಬಳಕೆಯ ನಿಗದಿತ ಕನಿಷ್ಠ ವಯಸ್ಸು 13

ನವದೆಹಲಿ(ಜು.26): ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿರುವ ಸಮೀಕ್ಷೆಯಲ್ಲಿ ಶೇ.36.8ರಷ್ಟು10 ವಯಸ್ಸಿಗಿಂತ ಕಡಿಮೆ ಮಕ್ಕಳು ಫೇಸ್‌ಬುಕ್‌ ಬಳಸುತ್ತಿದ್ದಾರೆ ಮತ್ತು ಶೇ.24.3ರಷ್ಟುಮಕ್ಕಳು ಇನ್‌ಸ್ಟಾಗ್ರಾಂ ಅಕೌಂಟ್‌ ಹೊಂದಿದ್ದಾರೆ ಎಂದು ಗೊತ್ತಾಗಿದೆ. ಇದು ನಿಯಮ ಮೀರಿದ್ದು ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ಏಕೆಂದರೆ ಕಾನೂನಿನ ಪ್ರಕಾರ ಫೇಸ್‌ಬುಕ್‌ ಮತ್ತು ಇತರೆ ಸಾಮಾಜಿಕ ಜಾಲತಾಣಗಳನ್ನು ಬಳಸಲು ಕನಿಷ್ಠ 13 ವರ್ಷ ತುಂಬಿರಬೇಕು.

3400 ಶಾಲಾಮಕ್ಕಳ ಸಮೀಕ್ಷೆ ನಡೆಸಿರುವ ಆಯೋಗ 10 ರಿಂದ 17 ವಯಸ್ಸಿನ ಶೇ.42.9 ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳು ಎಲ್ಲಾ ರೀತಿಯ ವಿಷಯಗಳನ್ನು ಒಳಗೊಂಡಿರುತ್ತದೆ. ಅಶ್ಲೀಲ ಮತ್ತು ಕೌರ್ಯದಿಂದ ತುಂಬಿರುವ ವಿಷಯಗಳು ಹೆಚ್ಚು ಆಕರ್ಷಣೆ ಮಾಡುತ್ತವೆ. ಇವು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಬಹುದು. ಕನಿಷ್ಠ ವಯಸ್ಸು ತುಂಬಿರದ ಮಕ್ಕಳಲ್ಲಿ ಶೇ. 36.8 ಮಕ್ಕಳು ಫೇಸ್‌ಬುಕ್‌ ಹಾಗೂ ಶೇ45.5 ಮಕ್ಕಳು ಇನ್ಸಾ$್ಟಗ್ರಾಮ್‌ ಬಳಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಈ ಸಾಮಾಜಿಕ ಜಾಲತಾಣಗಳನ್ನು ’ಚಾಟಿಂಗ್‌’ಗಾಗಿ ಮಕ್ಕಳು ಹೆಚ್ಚಿನ ಬಳಕೆ ಮಾಡುತ್ತಿದ್ದಾರೆ. ಆನ್‌ಲೈನ್‌ ಶಿಕ್ಷಣದ ಕಾರಣದಿಂದಾಗಿ ಶೇ.94.8 ಮಕ್ಕಳ ಕೈಯಲ್ಲಿ ಮೊಬೈಲ್‌ ಫೋನ್‌ ಇರುತ್ತದೆ. ಹಾಗಾಗಿ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ಆಯೋಗ ಹೇಳಿದೆ. ಓದುವಾಗಲೂ ಮೊಬೈಲ್‌ ಬಳಸುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಶೇ. 13 ಮಕ್ಕಳು ಓದುವಾಗಲು ಮೊಬೈಲ್‌ನ್ನು ಕೈಯಲ್ಲಿ ಹಿಡಿದೇ ಇರುತ್ತಾರೆ. ಶೇ.23.3 ಮಕ್ಕಳು ಪÜದೇ ಪದೇ ಮೊಬೈಲ್‌ ನೋಡುತ್ತಿರುತ್ತಾರೆ ಹಾಗಾಗಿ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಉಂಟಾಗುತ್ತಿದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್