ಶನಿವಾರ ಕೇರಳದ ಅಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಯೋಜಿಸಿದ್ದ ಮೆರವಣಿಗೆಯಲ್ಲಿ ಯುವಕನೊಬ್ಬ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾನೆ. ಕೇರಳ ಪೊಲೀಸರು ಈ ಕುರಿತಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ತಿರುವನಂತಪುರ (ಮೇ.23): ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಯುವಕನೊಬ್ಬ ಹಿಂದೂಗಳು (Hindu) ಹಾಗೂ ಕ್ರಿಶ್ಚಿಯನ್ನರ ವಿರುದ್ಧ ದ್ವೇಷಪೂರಿತ ಘೋಷಣೆಗಳನ್ನು ಕೂಗಿದ್ದಾನೆ. ಈ ಕುರಿತಂತೆ ಕೇರಳ ಪೊಲೀಸರು (Kerala Police) ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಶನಿವಾರ ಕೇರಳದ ಅಲಪ್ಪುಳದಲ್ಲಿ ಮುಸ್ಲಿಂ ಗುಂಪು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) (PFI)ಆಯೋಜಿಸಿದ್ದ ಮೆರವಣಿಗೆಯ ವೀಡಿಯೊ ಎನ್ನುವುದು ಇದರಲ್ಲಿ ಸ್ಪಷ್ಟವಾಗಿದೆ.
ವೀಡಿಯೋದಲ್ಲಿ, ಒಬ್ಬ ವ್ಯಕ್ತಿಯ ಹೆಗಲ ಮೇಲೆ ಹೊತ್ತಿರುವ ಹುಡುಗ, “ಅಕ್ಕಿಯನ್ನು ಸಿದ್ಧವಾಗಿಡಿ. ಯಮ [ಸಾವಿನ ದೇವರು] ನಿಮ್ಮ ಮನೆಗೆ ಭೇಟಿ ನೀಡುತ್ತಾನೆ. ಗೌರವಯುತವಾಗಿ ಬದುಕಿದರೆ ನಮ್ಮ ಜಾಗದಲ್ಲಿ ಬದುಕಬಹುದು. ಇಲ್ಲದಿದ್ದರೆ, ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ” ಎಂದು ಹೇಳಿರುವ ವಿಡಿಯೋ ಇದಾಗಿದೆ.
⚠️TA⚠️
"Hindus should buy rice & flowers for their last rites, Christians buy incense for their last rites. If you want to live here, live 'decently'; otherwise, we know how to implement 'Azadi'." -Slogans are from the PFI rally in .
pic.twitter.com/PZfD6LdrdL
"ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಬಾಲಾಪರಾಧಿ ಕಾಯಿದೆಗೆ ವಿರುದ್ಧವಾಗಿದೆ. ನಾವು ಎಫ್‌ಐಆರ್ ದಾಖಲಿಸಲು ಸಂಬಂಧಿಸಿದ ಜಿಲ್ಲೆಗೆ ಪತ್ರ ಬರೆಯುತ್ತಿದ್ದೇವೆ. ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ಅರಿಯಬಹುದಾದ ಅಪರಾಧವಾಗಿದೆ" ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥ ಪ್ರಿಯಾಂಕ್ ಕನೂಂಗೊ ಈ ವಿಷಯದ ಕುರಿತಾಗಿ ಹೇಳಿದ್ದಾರೆ.
Murder Case ಆರ್‌ಎಸ್ಎಸ್ ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣ,ನಾಲ್ವರು ಪಿಎಫ್ಐ ಕಾರ್ಯಕರ್ತರ ಬಂಧನ!
ಪಿಎಫ್ಐ ಹೇಳಿಕೆ: ವೀಡಿಯೊ ಹೊರಬಿದ್ದ ನಂತರ, ಪಿಎಫ್‌ಐ ವಕ್ತಾರ ರೌಫ್ ಪಟ್ಟಾಂಬಿ ಅವರು ಸಂಘಟನೆಯ ಸಮಾವೇಶದಲ್ಲಿ ಘೋಷಣೆಗಳನ್ನು ಕೂಗಲಾಗಿಲ್ಲ. ಆದರೆ ಸಾವಿರಾರು ಜನರು ಭಾಗವಹಿಸಿದ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗದ್ದಾರೆ ಎಂದು ಹೇಳಿದರು.
ಎಸ್‌ಡಿಪಿಐ, ಪಿಎಫ್‌ಐ, ಆರ್‌ಎಸ್‌ಎಸ್ ಸಂಘಟನೆಗಳನ್ನು ನಿಷೇಧಿಸಿ: ಸಿದ್ದರಾಮಯ್ಯ ಸವಾಲ್
ಇದಲ್ಲದೆ, ಘೋಷಣೆಗಳು ಹಿಂದೂ ಅಥವಾ ಕ್ರಿಶ್ಚಿಯನ್ನರ ವಿರುದ್ಧವಲ್ಲ, ಆದರೆ ಹಿಂದುತ್ವ ಭಯೋತ್ಪಾದಕರು ಮತ್ತು ಫ್ಯಾಸಿಸ್ಟ್‌ಗಳ ವಿರುದ್ಧ ಎಂದು ಅವರು ಹೇಳಿದರು. ಅನೇಕರು ಹಿಂದುತ್ವ ಭಯೋತ್ಪಾದನೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಹುಡುಗ ಕೂಡ ಘೋಷಣೆಗಳನ್ನು ಕೂಗಿದ. ಘೋಷಣೆಗಳ ಕೆಲವು ಸಾಲುಗಳಿಗಾಗಿ ನಾವು ವಿಷಾದಿಸುತ್ತೇವೆ ಮತ್ತು ಅದನ್ನು ಪರಿಶೀಲಿಸುತ್ತೇವೆ. ಅವರ ಘೋಷಣೆಗಳು ಹಿಂದೂ ಅಥವಾ ಕ್ರಿಶ್ಚಿಯನ್ನರ ವಿರುದ್ಧ ಅಲ್ಲ, ಆದರೆ ನರಮೇಧವನ್ನು ಆಯೋಜಿಸುತ್ತಿರುವ ಹಿಂದುತ್ವ ಭಯೋತ್ಪಾದಕರ ವಿರುದ್ಧ' ಎಂದು ರೌಫ್ ಪಟ್ಟಾಂಬಿ ಹೇಳಿದರು.
"ಗಣರಾಜ್ಯವನ್ನು ರಕ್ಷಿಸಿ" ಎಂಬ ನಮ್ಮ ಈವೆಂಟ್‌ನ ಮುಖ್ಯ ಘೋಷಣೆಯನ್ನು ಯಾವುದೇ ಮಾಧ್ಯಮಗಳು ಪ್ರಚಾರ ಮಾಡಿಲ್ಲ" ಎಂದು ಅವರು ಹೇಳಿದರು. ಅಲಪ್ಪುಳ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.