10 ಲಕ್ಷ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಗೌರವ!

By Santosh NaikFirst Published May 23, 2022, 3:28 PM IST
Highlights

ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಅವರ ನಿರ್ಣಾಯಕ ಪಾತ್ರ ವಹಿಸಿದ ಕಾರಣಕ್ಕಾಗಿ ಮತ್ತು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳಿಗಾಗಿ ಭಾರತದ ಎಲ್ಲಾ ಮಹಿಳಾ ಆಶಾ ಸ್ವಯಂಸೇವಕರನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಗೌರವಿಸಲಾಗಿದೆ.
 

ಜಿನೇವಾ (ಮೇ. 23): ಕೋವಿಡ್ (Covid-19) ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗೆ ಆರೋಗ್ಯ ವ್ಯವಸ್ಥೆಗಳನ್ನು ತಲುಪಿಸುವ ಮೂಲಕ, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಪಟ್ಟ ಆಶಾ ಕಾರ್ಯಕರ್ತೆಯರ (ASHA volunteers ) ಶ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ಗುರುತಿಸಿ ಗೌರವಿಸಿದೆ.

ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ಅಕ್ರಿಡಿಯೇಟೆಡ್ ಸೋಷಿಯಲ್ ಹೆಲ್ತ್ ಆಕ್ಟಿವಿಸ್ಟ್-ASHA) ಅಥವಾ ,  ಭಾರತ ಸರ್ಕಾರದ ಅಂಗಸಂಸ್ಥೆ ಆರೋಗ್ಯ ರಕ್ಷಣಾ ಕಾರ್ಯಕರ್ತರು ಗ್ರಾಮೀಣ ಭಾರತ ಜನರವನ್ನು ಸಂಪರ್ಕ ಮಾಡುವ ಕೇಂದ್ರಬಿಂದುವಾಗಿದ್ದರು. ಕರೋನವೈರಸ್ ರೋಗಿಗಳನ್ನು (Coronavirus) ಪತ್ತೆಹಚ್ಚಲು ಮನೆ-ಮನೆಗೆ ತಪಾಸಣೆ ನಡೆಸಲು ಭಾರತದಲ್ಲಿ ಸಾಂಕ್ರಾಮಿಕ ರೋಗದ ಉತ್ತುಂಗದಲ್ಲಿ ಹೆಚ್ಚಿನವರು ಗಮನ ಸೆಳೆದರು.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಜಾಗತಿಕ ಆರೋಗ್ಯವನ್ನು ಸುಧಾರಿಸಲು ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ಪ್ರಾದೇಶಿಕ ಆರೋಗ್ಯ ಸಮಸ್ಯೆಗಳಿಗೆ ನಾಯಕತ್ವ ಮತ್ತು ಬದ್ಧತೆಯನ್ನು ಪ್ರದರ್ಶನ ಮಾಡಿದವರಿಗೆ ಆರು ಪ್ರಶಸ್ತಿಗಳನ್ನು ಭಾನುವಾರ ಘೋಷಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರಾಗಿರುವ ಕಾರಣ ಸ್ವತಃ ಟೆಡ್ರೊಸ್ ಅವರು ಡಬ್ಲ್ಯುಎಚ್ ಓ  ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿಗಳಿಗೆ (WHO Director Generals Global Health Leaders Award) ಪ್ರಶಸ್ತಿ ಪುರಸ್ಕೃತರನ್ನು ನಿರ್ಧರಿಸುತ್ತಾರೆ. 2019 ರಲ್ಲಿ ಸ್ಥಾಪಿಸಲಾದ ಪ್ರಶಸ್ತಿಗಳ ಸಮಾರಂಭವು 75 ನೇ ವಿಶ್ವ ಆರೋಗ್ಯ ಅಸೆಂಬ್ಲಿಯ ಲೈವ್-ಸ್ಟ್ರೀಮ್ ಉನ್ನತ ಮಟ್ಟದ ಆರಂಭಿಕ ಅಧಿವೇಶನದ ಭಾಗವಾಗಿತ್ತು.

"ಆಶಾ ಎಂದರೆ ಹಿಂದಿಯಲ್ಲಿ ಭರವಸೆ ಎಂದರ್ಥ. ಇಡೀ ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡಿದ್ದ ಸಂದರ್ಭದಲ್ಲಿ ಗ್ರಾಮೀಣ ಭಾರತದಲ್ಲಿರುವವರಿಗೆ ಮತ್ತು ಬಡ ಜನತೆಗೆ ಪ್ರಾಥಮಿಕ ಆರೋಗ್ಯ ಸೇವೆ ದೊರೆಯುವಂತೆ ಮಾಡುವಲ್ಲಿ, ಸಮುದಾಯವನ್ನು ಆರೋಗ್ಯ ವ್ಯವಸ್ಥೆಯೊಂದಿಗೆ ಜೋಡಿಸುವಲ್ಲಿ ಅವರ ನಿರ್ಣಾಯಕ ಪಾತ್ರಕ್ಕಾಗಿ ಭಾರತದಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಮಹಿಳಾ ಸ್ವಯಂಸೇವಕರನ್ನು ಗೌರವಿಸಲಾಗುತ್ತಿದೆ' ಎಂದು ಹೇಳಿದ್ದಾರೆ.

"ಆಶಾ ಕಾರ್ಯಕರ್ತೆಯರು ಸಮುದಾಯದ ಗರ್ಭಿಣಿಯರ ಕಾಳಜಿ ವಹಿಸುವುದರ ಜೊತೆಗೆ ಮಕ್ಕಳಿಗೆ ರೋಗ ನಿರೋಧಕ ಲಸಿಕೆ ದೊರೆಯುವಂತೆ ಮಾಡುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತಾರೆ. ಸಮುದಾಯ ಆರೋಗ್ಯ ರಕ್ಷಣೆ, ಅಧಿಕ ರಕ್ತದೊತ್ತಡ, ಕ್ಷಯರೋಗಕ್ಕೆ ಚಿಕಿತ್ಸೆ ಸಿಗುವಂತೆ ಮಾಡುವಲ್ಲೂ ಆಶಾ ಕಾರ್ಯಕರ್ತೆಯರ ಶ್ರಮವಿದೆ. ಪೋಷಣೆ, ನೈರ್ಮಲ್ಯ, ಆರೋಗ್ಯಕರ ಜೀವನಕ್ಕಾಗಿ ಅರಿವು ಮೂಡಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.

Kudligi: ಕಾರ್ಯಕರ್ತೆಯರಿಗೆ 13 ಸಾವಿರ ವೇತನ ನಿಗದಿ ಮಾಡಲಿ: ಸಂತೋಷ ಲಾಡ್‌!

ಆಶಾ ಕಾರ್ಯಕರ್ತೆಯರು  ಕೆಳ ಸಮುದಾಯದ ಗರ್ಭಿಣಿಯರ ಕಾಳಜಿ ವಹಿಸುವುದರ ಜೊತೆಗೆ ಮಕ್ಕಳಿಗೆ ರೋಗನಿರೋಧಕ ಲಸಿಕೆ ದೊರೆಯುವಂತೆ ಮಾಡುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿದ್ದಾರೆ. ಸಮುದಾಯದ ಆರೋಗ್ಯ ರಕ್ಷಣೆ, ಅಧಿಕ ರಕ್ತದೊತ್ತಡ ಮತ್ತು ಕ್ಷಯರೋಗಕ್ಕೆ ಚಿಕಿತ್ಸೆ; ಮತ್ತು ಪೋಷಣೆ, ನೈರ್ಮಲ್ಯ ಮತ್ತು ಆರೋಗ್ಯಕರ ಜೀವನಕ್ಕಾಗಿ ಇವರು ಸಮುದಾಯದ ಜನರಲ್ಲಿ ತಿಳಿಹೇಳುವ ಕೆಲಸವನ್ನು ಮಾಡುತ್ತಾರೆ' ಎಂದು ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯರಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

"ಜಗತ್ತು ಅಸಮಾನತೆ, ಸಂಘರ್ಷ, ಆಹಾರ ಅಭದ್ರತೆ, ಹವಾಮಾನ ಬಿಕ್ಕಟ್ಟು ಮತ್ತು ಸಾಂಕ್ರಾಮಿಕ ರೋಗಗಳಿಂದ ಸಮಸ್ಯೆಯನ್ನು ಎದುರಿಸುತ್ತಿರುವ ಸಮಯದಲ್ಲಿ, ಈ ಪ್ರಶಸ್ತಿಯು ಪ್ರಪಂಚದಾದ್ಯಂತ ಆರೋಗ್ಯವನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಅತ್ಯುತ್ತಮ ಕೊಡುಗೆ ನೀಡಿದವರನ್ನು ಗುರುತಿಸುತ್ತದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ದೇಶದ ತಖರ್ ಮತ್ತು ಕುಂದುಜ್ ಪ್ರಾಂತ್ಯಗಳಲ್ಲಿ ಶಸ್ತ್ರಸಜ್ಜಿತ ಬಂದೂಕುಧಾರಿಗಳಿಂದ ಕೊಲ್ಲಲ್ಪಟ್ಟ ಅಫ್ಘಾನಿಸ್ತಾನದ ಪೋಲಿಯೊ ಲಸಿಕೆ ಕಾರ್ಮಿಕರ ತಂಡವು ಇತರ ಗಮನಾರ್ಹ ಗೌರವಾನ್ವಿತರಲ್ಲಿ ಸೇರಿದೆ.

click me!