Gyanvapi Mosque ಮಂದಿರವೋ, ಮಸೀದಿಯೋ? ಆದೇಶ ಕಾಯ್ದಿರಿಸಿದ ವಾರಾಣಸಿ ಕೋರ್ಟ್!

Published : May 23, 2022, 03:27 PM ISTUpdated : May 23, 2022, 03:38 PM IST
Gyanvapi Mosque  ಮಂದಿರವೋ, ಮಸೀದಿಯೋ? ಆದೇಶ ಕಾಯ್ದಿರಿಸಿದ ವಾರಾಣಸಿ ಕೋರ್ಟ್!

ಸಾರಾಂಶ

ಭಾರಿ ಕುತೂಹಲ ಕೆರಳಿಸಿರುವ ಗ್ಯಾನವಾಪಿ ಮಸೀದಿ ಪ್ರಕರಣ ವಾರಾಣಸಿ ಕೋರ್ಟ್‌ನಲ್ಲಿ ವಿಚಾರಣೆ ಅಂತ್ಯ 23 ಮಂದಿಗೆ ಪ್ರವೇಶ ನೀಡಿದ್ದ ಕೋರ್ಟ್, ಅಜಯ್ ಮಿಶ್ರಾಗೆ ನೋ ಎಂಟ್ರಿ  

ವಾರಾಣಸಿ(ಮೇ.23); ಗ್ಯಾನವಾಪಿ ಮಸೀದಿ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಮಸೀದಿಯೊಳಗೆ ದೇವಾಯಲದ ಕುರುಹುಗಳಿದೆಯೇ? ದೇಗುವವಾಗಿತ್ತೇ? ಅನ್ನೋ ಸರ್ವೆ ವರದಿ ಈಗಾಗಲೇ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಇಂದು ವಿಚಾರಣೆ ನಡೆಸಿದ ವಾರಾಣಸಿ ಕೋರ್ಟ್ ಆದೇಶಿ ಕಾಯ್ದಿರಿಸಿದೆ. 

ಗ್ಯಾನವಾಪಿ ಮಸೀದಿಯೋ ಮಂದಿರವೋ ಅನ್ನೋ ವಾದ ವಿವಾದ ವಿಚಾರಣೆ ಪೂರ್ಣಗೊಂಡಿದೆ. ಕೋರ್ಟ್, ಆದೇಶವನ್ನು ಕಾಯ್ದಿರಿಸಲಾಗಿದೆ. ನಾಳೆ ತೀರ್ಪು ನೀಡುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಜ್ಞಾನವ್ಯಾಪಿನೂ ಇಲ್ಲ, ಜ್ಞಾನಬಾಪಿನೂ ಇಲ್ಲ: ಸಿ.ಎಂ. ಇಬ್ರಾಹಿಂ

ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಡಾ. ಎಕೆ ವಿಶ್ವೇಶ ವಿಚಾರಣೆ ನಡೆಸಿದರು. ಈ ವೇಳೆ  23 ಮಂದಿಗೆ ಕೋರ್ಟ್ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.  ಇದರಲ್ಲಿ 19 ವಕೀಲರು ಹಾಗೂ ನಾಲ್ವರು ಅರ್ಜಿದಾರರು ಸೇರಿದ್ದಾರೆ. ಆದರೆ ಕೋರ್ಟ್ ಕಮಿಷನರ್ ಅಜಯ್ ಮಿಶ್ರಾಗೆ ಅವಕಾಶ ನಿರಾಕರಿಸಲಾಗಿತ್ತು.ಅಜಯ್ ಮಿಶ್ರಾ ಕೂಡ ಕೋರ್ಟ್ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಈ ವೇಳೆ ಕೋರ್ಟ್ ಸಿಬ್ಬಂದಿ ಮಿಶ್ರಾ ಅವರಿಗೆ ಕೋರ್ಟ್ ನಿರ್ಧಾರ ತಿಳಿಸಿದರು.

ಮಸೀದಿಯೊಳಗೆ ಸರ್ವೆ ಕಾರ್ಯ ರದ್ದು ಮಾಡಲು ಹಾಗೂ ಯಥಾ ಸ್ಥಿತಿ ಕಾಪಾಡುವಂತೆ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಅರ್ಜಿದಾರರ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಮಸೀದಿಯೊಳಗಿನ ಸರ್ವೆ ಕಾರ್ಯಕ್ಕೆ 1991ರ ಪೂಜಾ ಕಾಯ್ದೆ ಅಡ್ಡಿಯಾಗುವುದಿಲ್ಲ.  ಹೀಗಾಗಿ  ಜಿಲ್ಲಾ ಸಿವಿಲ್ ನ್ಯಾಯಾಲಯ ಆದೇಶ ಸರಿದಾಯಾಗಿದೆ ಎಂದಿತ್ತು.

ಅರ್ಜಿ ವರ್ಗ:
ಕಾಶಿ ವಿಶ್ವನಾಥ ಮಂದಿರದ ಭಾಗವನ್ನು ಬೀಳಿಸಿ ಮೊಘಲ್‌ ದೊರೆ ಔರಂಗಜೇಬ್‌ ಗ್ಯಾನವಾಪಿ ಮಸೀದಿ ಕಟ್ಟಿಸಿದ್ದ ಎನ್ನಲಾಗಿದೆ ಹಾಗೂ ಈ ಮಸೀದಿಯಲ್ಲಿ ಶೃಂಗಾರಗೌರಿ, ಶಿವಲಿಂಗ ಸೇರಿ ಹಲವು ದೇವರ ವಿಗ್ರಹಗಳಿವೆ ಎಂದು ಹೇಳಲಾಗಿದೆ. ಹೀಗಾಗಿ, ‘ಈ ವಿಗ್ರಹಗಳ ಪೂಜೆ, ಹಾಗೂ ಮಸೀದಿ ಸಮೀಕ್ಷೆಗೆ ಕೋರಿ ಸಲ್ಲಿಸಲಾಗಿದ್ದ ಕೆಲವು ಹಿಂದೂ ಮಹಿಳೆಯರ ಅರ್ಜಿಯು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದೆ. ಆದ್ದರಿಂದ ಅತ್ಯಂತ ಅನುಭವಿ ಹಾಗೂ ಹಿರಿಯ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟನ್ಯಾಡಿ.ವೈ. ಚಂದ್ರಚೂಡ ಅವರ ನೇತೃತ್ವದ ತ್ರಿಸದಸ್ಯ ಪೀಠ, ವಾರಾಣಸಿ ಜಿಲ್ಲಾ ಕೋರ್ಚ್‌ಗೆ ವಿಚಾರಣೆಗೆ ಸೂಚಿಸಿದೆ.

ಜ್ಞಾನವಾಪಿ ಗದ್ದಲದ ಬೆನ್ನಲ್ಲೇ ಕುತುಬ್ ಮಿನಾರ್ ವಿವಾದ, ಉತ್ಖನನ ನಡೆಸಲು ASIಗೆ ಸರ್ಕಾರದ ಆದೇಶ!
 
ನಂದಿ- ಶಿವನ ನಡುವಿನ ಗೋಡೆ ತೆರವಿಗೆ ಅರ್ಜಿ
ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಸ್ಥಳೀಯ ನ್ಯಾಯಾಲಯದಲ್ಲಿ ಮಂಗಳವಾರ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಮಸೀದಿಯ ವಿಡಿಯೋ ಸಮೀಕ್ಷೆ ಕೋರಿದ್ದ ಐವರು ಮಹಿಳೆಯರೇ ಈ ಹೊಸ ಅರ್ಜಿ ಸಲ್ಲಿಸಿದ್ದಾರೆ.

ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಸ್ಥಳಕ್ಕೆ ಅಭಿಮುಖವಾಗಿ, ಕಾಶಿ ವಿಶ್ವನಾಥ ಮಂದಿರದಲ್ಲಿ ನಂದಿ ವಿಗ್ರಹವಿದೆ. ಅಂದರೆ ಶಿವಲಿಂಗಕ್ಕೆ ಅಭಿಮುಖವಾಗಿ ನಂದಿ ವಿಗ್ರಹವಾಗಿದೆ. ಈ ಎರಡು ವಿಗ್ರಹಗಳ ನಡುವೆ ತಾತ್ಕಾಲಿಕ ಗೋಡೆಯೊಂದನ್ನು ನಿರ್ಮಿಸಲಾಗಿದೆ. ಇದನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.

ಈ ಗೋಡೆ ಒಡೆದುಹಾಕಿ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಹಿಳೆಯರು ಕೋರಿದ್ದಾರೆ. ಇವರ ಪರವಾಗಿ ವಕೀಲ ವಿಷ್ಣು ಜೈನ್‌ ಕೋರ್ಚ್‌ಗೆ ಮನವಿ ಸಲ್ಲಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ