Asianet Suvarna News Asianet Suvarna News

Murder Case ಆರ್‌ಎಸ್ಎಸ್ ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣ,ನಾಲ್ವರು ಪಿಎಫ್ಐ ಕಾರ್ಯಕರ್ತರ ಬಂಧನ!

  • ಕೇರಳದಲ್ಲಿ ಆರ್‌ಎಸ್ಎಸ್ ನಾಯಕನ ಹತ್ಯೆ ಪ್ರಕರಣ ತನಿಖೆ
  • ಹತ್ಯೆಗೆ ಸಂಬಂಧಿಸಿ ನಾಲ್ವರು ಪಿಎಫ್ಐ ಕಾರ್ಯಕರು ಅರೆಸ್ಟ್
  • ಪಾಲಕ್ಕಾಡ್‌ನಲ್ಲಿ ನಡೆದ ಘಟನೆ, ಒಟ್ಟು 23 ಆರ್‌ಎಸ್ಎಸ್ ನಾಯಕರ ಹತ್ಯೆ
RSS leader Sreenivasan murder case Police arrest four PFI activists Palakkad kerala ckm
Author
Bengaluru, First Published Apr 22, 2022, 6:44 PM IST

ಪಾಲಕ್ಕಾಡ್(ಏ.23): ಕೇರಳದ ಪಾಲಕ್ಕಾಡ್‌ನಲ್ಲಿ ಇತ್ತೀಚೆಗೆ ಆರ್‌ಎಸ್ಎಸ್ ಮುಖಂಡ ಶ್ರೀನಿವಾಸನ್ ಹತ್ಯೆ ದೇಶದಲ್ಲಿ ಭಾರಿ ಸದ್ದು ಮಾಡಿದೆ. ಈ ಪ್ರಕರಣದ ತನಿಖೆ ಚುರುಕುಗೊಳಿಸಿದ ಕೇರಳ ಪೊಲೀಸರು ಹತ್ಯೆಗೆ ಸಂಬಂಧಿಸಿ ನಾಲ್ವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಕಾರ್ಯಕರ್ತರನ್ನು ಅರೆಸ್ಟ್ ಮಾಡಿದೆ.

ಇದೇ ವೇಳೆ ಪೊಲೀಸರು ಈ ಹತ್ಯೆಯಲ್ಲಿ 10 ಮಂದಿ ಭಾಗಿಯಾಗಿದ್ದಾರೆ. ಸಿಸಿಟಿವಿ ದೃಶ್ಯ ಹಾಗೂ ಇತರ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ನಾಲ್ವರನ್ನು ಬಂಧಿಸಿ, ಇತರರಿಗೆ ಬಲೆ ಬೀಸಿದೆ. ಹತ್ಯೆಯಾದ ಬೆನ್ನಲ್ಲೇ ಈ ಪ್ರಕರಣ ಹಿಂದೆ ಪಿಎಫ್ಐ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಆರ್‌ಎಸ್ಎಸ್ ಹಾಗೂ ಕೇರಳ ಬಿಜೆಪಿ ನೇರವಾಗಿ ಪಿಎಫ್ಐ ಮೇಲೆ ಆರೋಪ ಮಾಡಿತ್ತು. ಇದೀಗ ಅನುಮಾನ, ಆರೋಪಗಳು ನಿಜವಾಗತೊಡಗಿದೆ.

ಕೇರಳದಲ್ಲಿ ಮತ್ತೊರ್ವ RSS ನಾಯಕ ಹತ್ಯೆ, ಪಿಣರಾಯಿ ಆಡಳಿತದಲ್ಲಿ 23 ಕಾರ್ಯಕರ್ತರ ಕೊಲೆ!

ಏಪ್ರಿಲ್ 14 ರಂದು  ಪಿಎಫ್‌ಐ ಕಾರ‍್ಯಕರ್ತ ಸುಬೇರ್‌ ಹತ್ಯೆಗೆ ಪ್ರತೀಕಾರವಾಗಿ ಆರ್‌ಎಸ್ಎಸ್ ಮುಖಂಡ ಶ್ರೀನಿವಾಸನ್ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಸುಬೇರ್ ಹತ್ಯೆ 2021ರಲ್ಲಿ ಸಂಜೀತ್ ಅನ್ನೋ ಹಿಂದೂ ಯುವಕನ ಹತ್ಯೆಗೆ ಪ್ರತೀಕಾರವಾಗಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಶ್ರೀನಿವಾಸನ್ ಹತ್ಯೆ ವಿವರ:
ಪಿಎಫ್‌ಐ ಕಾರ‍್ಯಕರ್ತನೋರ್ವ ಕೊಲೆಯಾದ 24 ಗಂಟೆಯೊಳಗೆ ಕೇರಳದಲ್ಲಿ ಪಾಲಕ್ಕಾಡ್‌ ನಗರದಲ್ಲಿ ಆರೆಸ್ಸೆಸ್‌ ಕಾರ್ಯಕರ್ತನೊಬ್ಬನನ್ನು ಹತ್ಯೆಗೈಯಲಾಗಿದೆ. ಆರೆಸ್ಸೆಸ್‌ ಕಾರ‍್ಯಕರ್ತ ಶ್ರೀನಿವಾಸನ್‌(45) ಅವರನ್ನು ಅವರ ಅಂಗಡಿಯ ಎದುರೇ ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದಾರೆ.

ಆರೋಪಿಗಳು ಮೋಟರ್‌ ಬೈಕಿನಲ್ಲಿ ಬಂದು ಶ್ರೀನಿವಾಸನ್‌ ಮೇಲೆ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಶ್ರೀನಿವಾಸನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಿವಾಸನ್‌ ಹತ್ಯೆಯ ಹಿಂದೆ ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದೆ.ಶುಕ್ರವಾರ ಸಾಯಂಕಾಲ ಪಿಎಫ್‌ಐ ಕಾರ‍್ಯಕರ್ತ ಸುಬೇರ್‌ ಎಂಬುವವರನ್ನು ಅವರ ಊರಿನಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಹೀಗಾಗಿ ಇದು ರಾಜಕೀಯ ಸೇಡಿನ ಹತ್ಯೆ ಇರಬಹುದು ಎಂದು ಶಂಕಿಸಲಾಗಿದೆ.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇರಳದ ಪಿಎಫ್ಐ ನಾಯಕನ ಬಂಧನ!

ಪಿಎಫ್‌ಐಗೆ ಶೀಘ್ರ ಕೇಂದ್ರ ನಿಷೇಧ?
ಇತ್ತೀಚೆಗೆ ದೇಶದ ಹಲವು ರಾಜ್ಯಗಳಲ್ಲಿ ರಾಮ ನವಮಿ ವೇಳೆ ನಡೆದ ಹಿಂಸಾಚಾರದಲ್ಲಿ ವಿವಾದಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕೈವಾಡದ ಶಂಕೆ ವ್ಯಕ್ತವಾಗಿರುವಾಗಲೇ, ದೇಶವ್ಯಾಪಿ ಸಂಘಟನೆಯನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಮುಂದಿನ ವಾರವೇ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.ಕೆಲವು ರಾಜ್ಯಗಳಲ್ಲಿ ಈಗಾಗಲೇ ಪಿಎಫ್‌ಐಗೆ ನಿಷೇಧ ಹೇರಲಾಗಿದೆಯಾದರೂ, ದೇಶವ್ಯಾಪಿ ನಿಷೇಧ ಜಾರಿಯಾದರೆ ಸಂಘಟನೆಯ ಚಟುವಟಿಕೆಗಳಿಗೆ ಹೊಡೆತ ಬೀಳಲಿದೆ.

ಪಿಎಫ್‌ಐ ಹಾದಿ:
1993ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಸಂಘಟನೆ ಆರಂಭವಾಗಿತ್ತು. ಇದೊಂದು ಇಸ್ಲಾಮಿಕ್‌ ಸಂಘಟನೆಯಾಗಿದ್ದು, ನಿಷೇಧಿತ ಇಸ್ಲಾಮಿಕ್‌ ವಿದ್ಯಾರ್ಥಿ ಉಗ್ರ ಸಂಘಟನೆಯಾದ ಸಿಮಿ ಜೊತೆ ನಂಟು ಹೊಂದಿದೆ ಎಂದು ಗುಪ್ತಚರ ಸಂಸ್ಥೆಗಳು ಇದರ ಬಗ್ಗೆ ಪ್ರಾರಂಭಿಕ ದಾಖಲೆಗಳನ್ನು ಸಂಗ್ರಹಿಸಿದ್ದವು. 2006ರಲ್ಲಿ ಕರ್ನಾಟಕದ ಕೆಎಫ್‌ಡಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಸಂಘಟನೆಗಳನ್ನು ವಿಲೀನಗೊಳಿಸಿ ಪಿಎಫ್‌ಐ ಎಂಬ ಅಧಿಕೃತ ಹೆಸರಿನಲ್ಲಿ ಸಂಘಟನೆ ಸ್ಥಾಪನೆಗೊಂಡಿತ್ತು. 2017ರಲ್ಲಿ ಎನ್‌ಐಎ ಸಿದ್ಧಪಡಿಸಿದ ಪರಿಷ್ಕೃತ ವರದಿಯಲ್ಲಿ, ಹಲವು ಭಯೋತ್ಪಾದನಾ ಪ್ರಕರಣಗಳ ಜೊತೆ ಸಂಘಟನೆಗೆ ನಂಟು ಇರುವ ವಿಷಯ ಪ್ರಸ್ತಾಪಿಸಿತ್ತು.

Follow Us:
Download App:
  • android
  • ios