
ರಾಂಚಿ(ಆ.20) ರಕ್ಷಾ ಬಂಧನ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬ ಇದ್ದ ಏಕೈಕ ಮಗನ ಕಳೆದುಕೊಂಡು ಕಂಗಾಲಾಗಿದೆ. ಸಂಬಂಧಿಕರು ಆಗಮಿಸಿದಾಗ ತಂದಿದ್ದ ರಸಗುಲ್ಲಾ ತಿಂದ 17 ವರ್ಷದ ಬಾಲಕ ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಘಟನೆ ಜಾರ್ಖಂಡ್‌ನ ಪತಮ್ಹುಲಿಯಾ ಗ್ರಾಮದಲ್ಲಿ ನಡೆದಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಮಲಗಿಕೊಂಡು ತಿಂದ ರಸಗುಲ್ಲಾ ಗಂಟಲಿನಲ್ಲಿ ಸಿಲುಕಿದೆ. ಪರಿಣಾಮ ತೀವ್ರ ಅಸ್ವಸ್ಥಗೊಂಡ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಭಾನುವಾರ ಪತಮ್ಹುಲಿಯಾ ಗ್ರಾಮದ ನಿವಾಸಿ ಸುಜಿತ್ ಸಿಂಗ್ ಮನೆಗೆ ಕುಟುಂಬಸ್ಥರು ಆಗಮಿಸಿದ್ದರು. ಮರುದಿನ ರಕ್ಷಾ ಬಂಧನ ಕಾರಣ ಸಂಬಂಧಿ ರೋಹಿಣಿ ಸಿಂಗ್ ಆಗಮಿಸಿದ್ದಾರೆ. ಈ ವೇಳೆ ವಿಶೇಷ ರಸಗುಲ್ಲಾ ತಂದಿದ್ದಾರೆ. ಭಾನುವಾರ ಎಲ್ಲರು ಮಾತುಕತೆ ಹರಟೆ ನಡೆಸಿದ್ದಾರೆ. ಈ ವೇಳೆ ಸುಜಿತ್ ಸಿಂಗ್ ಪುತ್ರ ಅಮಿತ್ ಸಿಂಗ್ ಕೂಡ ಮನೆಯಲ್ಲಿ ಕುಟುಂಬಸ್ಥರ ಜೊತೆ ಕಾಲ ಕಳೆದಿದ್ದಾನೆ. ಇದೇ ವೇಳೆ ಅಂಕಲ್ ತಂದಿದ್ದ ವಿಶೇಷ ರಸಗುಲ್ಲಾ ಸವಿಯಲು ಮುಂದಾಗಿದ್ದಾರೆ.
ಮಗನ ಮೇಲೆ ಮಚ್ಚಿನಿಂದ ದಾಳಿ ಮಾಡಿದ ರೌಡಿಗಳನ್ನು ಕಲ್ಲಿನಿಂದ ಓಡಿಸಿದ ತಾಯಿ, ವಿಡಿಯೋ ಸೆರೆ!
ಮಲಗಿಕೊಂಡು ಮೊಬೈಲ್ ನೋಡುತ್ತಿದ್ದ ಅಮಿತ್ ಸಿಂಗ್, ಹಾಗೇ ರಸಗುಲ್ಲಾ ಬಾಯಿಗೆ ಹಾಕಿದ್ದಾನೆ. ಆದರೆ ಮಲಗಿದ್ದ ಕಾರಣ ರಸಗುಲ್ಲಾ ಗಂಟಲಿಗೆ ಸಿಲುಕಿ ಕೊಂಡಿದೆ. ತಕ್ಷಣವೇ ಬಾಲಕ ಅಸ್ವಸ್ಥನಾಗಿದ್ದಾನೆ. ಸಂಬಂಧಿ ರೋಹಿಣಿ ಸಿಂಗ್ ಕೆಲ ಪ್ರಯತ್ನ ನಡೆಸಿದರೂ ಗಂಟಲಿನಿಂದ ರಸಗುಲ್ಲಾ ಅಲ್ಲೆ ಬಾಕಿಯಾಗಿದೆ. ಅಷ್ಟರಲ್ಲೇ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕುಸಿದು ಬಿದ್ದ ಬಾಲಕ ವಾಂತಿ ಮಾಡಿದ್ದಾನೆ.
ತಕ್ಷಣವೇ ಬಾಲಕನ ಎತ್ತಿಕೊಂಡು ಆಸ್ಪತ್ರೆ ದಾಖಲಿಸಿದ್ದಾರೆ. ಅಷ್ಟರೊಳಗೆ ಬಾಲಕ ಮೃತಪಟ್ಟಿದ್ದಾನೆ. ವೈದ್ಯರು ಬಾಲಕ ಮೃತಪಟ್ಟಿರುವುದು ಖಚಿತಪಡಿಸಿದ್ದಾರೆ. ಕೇವಲ 10 ರಿಂದ 15 ನಿಮಿಷದಲ್ಲಿ ಬಾಲಕ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ. ಸುಜಿತ್ ಸಿಂಗ್ ದಂಪತಿಯ ಏಕೈಕ ಮಗ ದುರಂತ ಅಂತ್ಯಕಂಡಿದ್ದಾನೆ. ಮಗನ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ. ಪೋಷಕರು ಆಕ್ರಂದನ ನಿಲ್ಲುತ್ತಿಲ್ಲ. ಸಂಭ್ರಮದ ಸಿಹಿ ವಿಷವಾಗಿ ಪರಿಣಿಸಿ ಜೀವವನ್ನೇ ಬಲಿ ಪಡೆದಿದೆ.
ಈ ಘಟನೆ ಕುಟುಂಬದಲ್ಲಿ ಆಘಾತ ತಂದಿದೆ. 17 ವರ್ಷದ ಬಾಲಕ ಈ ರೀತಿ ದುರಂತ ಅಂತ್ಯವನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಐಎಎಸ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದ ಅಮಿತ್ ಸಿಂಗ್ ದುರಂತ ಅಂತ್ಯ ಗ್ರಾಮಸ್ಥರಿಗೂ ತೀವ್ರ ನೋವು ತರಿಸಿದೆ. ಇಡೀ ಗ್ರಾಮವೇ ಶೋಕಾಚರಣೆಯಲ್ಲಿದೆ.
ದಂಪತಿ ಜಗಳ ಬಿಡಿಸಲು ಬಂದ ಪೊಲೀಸಪ್ಪನೇ ವಿಲನ್, ಪತ್ನಿ ಜೊತೆ ಕಾನ್ಸ್‌ಸ್ಟೇಬಲ್ ಕಳ್ಳಾಟ ಸೆರೆ ಹಿಡಿದ ಪತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ