ಆಗಸ್ಟ್ 21ಕ್ಕೆ ಭಾರತ್ ಬಂದ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಈಗಾಗಲೇ ಕೆಲ ಶಾಲಾ ಕಾಲೇಜಿಗೆ ರಜೆ ಘೋಷಿಸಿಸಲು ತಯಾರಿ ನಡೆದದೆ. ಭಾರಿ ಬಂದೋಬಸ್ತ್‌ಗೆ ಪೊಲೀಸರು ಸನ್ನದ್ಧರಾಗಿದ್ದಾರೆ. ಇದರ ನಡುವೆ ನಾಳೆ ಏನಿರುತ್ತೆ, ಏನಿರಲ್ಲ?
ನವೆಹಲಿ(ಆ.20) ಸ್ವಾತಂತ್ರ್ಯ ದಿನಾಚರಣೆ, ವರಮಹಾ ಲಕ್ಷ್ಮಿ, ರಕ್ಷಾ ಬಂಧನ ಹಬ್ಬಗಳಿಂದ ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ರಜೆ ಅನುಭವಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ದೇಶಾದ್ಯಂತ ಭಾರತ್ ಬಂದ್ ಬಿಸಿ ತಟ್ಟಿದೆ. ಆಗಸ್ಟ್ 21ರಂದು ದೇಶಾದ್ಯಂತ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ಆಗಸ್ಟ್ 21ಕ್ಕೆ ಭಾರತ್ ಬಂದ್‌ಗೆ ಕರೆ ನೀಡಿದೆ. ಸುಪ್ರೀಂ ಕೋರ್ಟ್ ಆಗಸ್ಟ್ ತಿಂಗಳ ಆರಂಭದಲ್ಲಿ ನೀಡಿದ ಮೀಸಲಾತಿ ಕುರಿತ ತೀರ್ಪು ವಿರೋಧಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಬಿಗಿ ಬಂದೋಬಸ್ತ್ ಕೈಗೊಳ್ಳುವಂತೆ ಆಯಾ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಇದೀಗ ಆಗಸ್ಟ್ 21ರ ಭಾರತ್ ಬಂದಗೆ ಯಾವ ಸೌಲಭ್ಯಗಳು ಬಂದ್ ಆಗಲಿದೆ? ಯಾವ ಸೇವೆ ಲಭ್ಯವಿರಲಿದೆ ಅನ್ನೋ ಆತಂಕ ಜನರಲ್ಲಿ ಹೆಚ್ಚಾಗಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೀಸಲಾತಿ ವಿಚಾರದಲ್ಲಿ ಆಯಾ ರಾಜ್ಯಗಳು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಬುಡಕಟ್ಟು ಸಮುದಾಯ ಮೀಸಲಾತಿಯಲ್ಲಿ ಉಪ ವಿಭಾಗಗಳನ್ನು ಸೃಷ್ಟಿಸಿ ನಿಜಕ್ಕೂ ಅಗತ್ಯವಿರುವ ಸಮುದಾಯದ ಜನರಿಗೆ ಮೀಸಲಾತಿ ಕಲ್ಪಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದು ಹಲವು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಎಸ್‌ಸಿ, ಎಸ್‌ಟಿ ಮೀಸಲಾತಿ ಸಾಕಾಗುತ್ತಿಲ್ಲ, ಇದರ ನಡುವೆ ಸಬ್ ಕೆಟಗರಿ ಸೃಷ್ಟಿಸಿ ಮೀಸಲಾತಿ ಹಂಚಿದರೆ ಅನ್ಯಾಯವಾಗಲಿದೆ. ನಮ್ಮಿಂದ ಕಿತ್ತುಕೊಂಡು ಇತರರಿಗೆ ನೀಡಿದರೆ ನಮ್ಮ ಸಮುದಾಯಕ್ಕೆ ವಂಚನೆಯಾಗಲಿದೆ ಎಂದು ಆಕ್ರೋಶಗಳು ಆರಂಭಗೊಂಡಿತ್ತು. ಇದೀಗ ಈ ತೀರ್ಪಿನ ವಿರೋಧಿಸಿ ದೇಶಾದ್ಯಂತ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.
ಆಗಸ್ಟ್ 21ಕ್ಕೆ ಭಾರತ್ ಬಂದ್‌ಗೆ ಕರೆ, ದೇಶಾದ್ಯಂತ ಪ್ರತಿಭಟನೆ ಕಾರಣ ಯಾವ ಸೇವೆ ಅಲಭ್ಯ?
ಭಾರತ್ ಬಂದ್ ಪ್ರತಿಭಟನೆಯಿಂದ ಮುನ್ನಚರಿಕಾ ಕ್ರಮವಾಗಿ ಹೈದರಾಬಾದ್ ಸೇರಿದಂತೆ ಕೆಲ ಪ್ರದೇಶದಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆಗೆ ಚಿಂತನೆ ನಡೆಸಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ರಾಜ್ಯಗಳಲ್ಲಿ ಈಗಾಗಲೇ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗುತ್ತಿದೆ. ಇದರ ಜೊತೆಗೆ ಕೆಲ ಸಂಸ್ಥೆಗಳು ರಜೆ ಘೋಷಣೆಗೆ ತಯಾರಿ ನಡೆಸಿದೆ.
ಸಾರಿಗೆ ಸಂಪರ್ಕ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ಹೊಟೆಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಚ್ಚುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ತುರ್ತು ಅವಶ್ಯಕತೆಗಳನ್ನು ಹೊರತುಪಡಿಸಿ ಇತರ ಸೇವೆಗಳು ಬಂದ್ ಆಗುವ ಸಾಧ್ಯತೆ ಇದೆ. ಆದರೆ ಇದೇ ದೇಶಾದ್ಯಂತ ಚಿತ್ರಣ ಪ್ರತಿಭಟನೆ ಆರಂಭದ ಬಳಿಕವಷ್ಟೇ ತಿಳಿಯಲಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಬಂದ್ ತೀವ್ರತೆ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಶಾಲಾ ಕಾಲೇಜು, ಬ್ಯಾಂಕ್ ಸೇರಿದಂತೆ ಕೆಲ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಎಲ್ಲಾ ರಾಜ್ಯಗಳ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಈಗಾಗಲೇ ತುರ್ತು ಸಭೆ ನಡೆಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಬಾಗಲಕೋಟೆ: ಕಾಂಗ್ರೆಸ್ ಪ್ರತಿಭಟನೆ ವೇಳೆ ಬೆಂಕಿ, ಇಬ್ಬರಿಗೆ ಗಾಯ