ಗಡಿ ಸಂಘರ್ಷದ ಬೆನ್ನಲ್ಲೇ ಜೈಶಂಕರ್ ಭದ್ರತೆ ಹೆಚ್ಚಳ, 2 ಬುಲೆಟ್ ಪ್ರೂಫ್ ಕಾರಿನ ಜೊತೆ Z ಸೆಕ್ಯೂರಿಟಿ

Published : May 14, 2025, 06:02 PM IST
ಗಡಿ ಸಂಘರ್ಷದ ಬೆನ್ನಲ್ಲೇ ಜೈಶಂಕರ್ ಭದ್ರತೆ ಹೆಚ್ಚಳ, 2 ಬುಲೆಟ್ ಪ್ರೂಫ್ ಕಾರಿನ ಜೊತೆ Z ಸೆಕ್ಯೂರಿಟಿ

ಸಾರಾಂಶ

ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ ಟೆನ್ಶನ್ ಮುಗಿದಿಲ್ಲ. ಪಾಕಿಸ್ತಾನ ಬೆದರಿಕೆ, ಅಂತಾರಾಷ್ಟ್ರೀಯ ಮಟ್ಟದ ಒತ್ತಡವನ್ನು ಸಮರ್ಥವಾಗಿ ಎದುರಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್‌ಗೆ ಭದ್ರತೆ ಹೆಚ್ಚಿಸಲಾಗಿದೆ.

ನವದೆಹಲಿ(ಮೇ.14) ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಪಾಕಿಸ್ತಾನದ ನ್ಯೂಕ್ಲೀಯರ್ ಎಚ್ಚರಿಕೆ, ಅಂತಾರಾಷ್ಟ್ರೀಯ ಮಟ್ಟದ ಒತ್ತಡ, ಬೆದರಿಕೆಗಳನ್ನು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ದಿಟ್ಟವಾಗಿ ಎದುರಿಸಿದ್ದಾರೆ. ಮಾತಿನ ಮೂಲಕ, ಕಾರ್ಯದ ಮೂಲಕ ಜೈಶಂಕರ್ ತಿರುಗೇಟು ನೀಡಿದ್ದಾರೆ. ಯಾವುದೇ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದೇ ಪಾಕಿಸ್ತಾನ ಮೇಲೆ ಭಾರತ ಕ್ಷಿಪಣಿ ದಾಳಿ ಮಾಡಿ 11 ಏರ್‌ಬೇಸ್ ಧ್ವಂಸಗೊಳಿಸಿದೆ. ಕದನ ವಿರಾಮ ಘೋಷಣೆಯಾಗಿದ್ದರೂ ಭೀತಿ, ಆತಂಕ ಕಡಿಮೆಯಾಗಿಲ್ಲ. ಇದರ ನಡುವೆ ಮಹತ್ವದ ಬೆಳವಣಿಗೆಯಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದೀಗ ಜೈಶಂಕರ್‌ಗೆ 2 ಬುಲೆಟ್ ಪ್ರೂಫ್ ಕಾರು ಸೇರಿ ಝೆಡ್ ಶ್ರೇಣಿ ಭದ್ರತೆಯನ್ನು ನೀಡಲಾಗಿದೆ.

ಜೈಶಂಕರ್‌ಗೆ 2 ಬಲೆಟ್ ಪ್ರೂಫ್ ಕಾರು
ವಿದೇಶಾಂಗ ಸಚಿವ ಎಸ್ ಜೈಶಂಕರ್‌ಗೆ ಇದೀಗ 2 ಬುಲೆಟ್ ಪ್ರೂಫ್ ಕಾರು ಒದಗಿಸಲಾಗಿದೆ. ದಿನದ 24 ಗಂಟೆಯೂ ಜೈಶಂಕರ್‌ಗೆ ಭದ್ರತೆ ಇರಲಿದೆ. ಇನ್ನು ದೆಹಲಿಯಲ್ಲಿರುವ ಜೈಶಂಕರ್ ಮನೆಗೂ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಸೂಚನೆ ಮೇರೆಗೆ ಇದೀಗ ಜೈಶಂಕರ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪಾಕ್ ಜೊತೆ ಕದನ ವಿರಾಮವಷ್ಟೇ ಆದರೆ.... ಜೈ ಶಂಕರ್‌ ಖಡಕ್ ಟ್ವೀಟ್‌

ಜೈಶಂಕರ್‌ ಭದ್ರತೆಗೆ CRPF 
ಜೈಶಂಕರ್‌ಗೆ ಝೆಡ್ ಶ್ರೇಣಿ ಭದ್ರತೆ ನೀಡಲಾಗಿದೆ. ತಕ್ಷಣದಿಂದಲೇ ಈ ಭದ್ರತೆ ಒದಗಿಸಲಾಗಿದೆ. ಇದೀಗ ಜೈಶಂಕರ್ ಭದ್ರತೆಯನ್ನು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ( CRPF) ಕಮಾಂಡೋ ನೋಡಿಕೊಳ್ಳಲಿದೆ.ಝೆಡ್ ಶ್ರೇಣಿ ಭದ್ರತೆ ಭಾರತದ 2ನೇ ಅತ್ಯುನ್ನತ ಭದ್ರತಾ ಶ್ರೇಣಿಯಾಗಿದೆ. 22 ಭದ್ರತಾ ಸಿಬ್ಬಂದಿಗಳು ಭದ್ರತೆ ನೀಡಲಿದ್ದಾರೆ. ಇದರಲ್ಲಿ 4 ರಿಂದ 6 ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಕಮಾಂಡೋ ಸುತ್ತುವರಿದು ಭದ್ರತೆ ನೀಡಲಿದೆ. ಇದರ ಜೊತೆಗೆ 2 ಬುಲೆಟ್ ಪ್ರೂಫ್ ವಾಹನವೂ ಇರಲಿದೆ. ಈ ಭದ್ರತೆಯನ್ನು ಭಾರತದಲ್ಲಿ ಹೈ ಪ್ರೊಫೈಲ್ ರಾಜಕಾರಣಿ, ಸೆಲೆಬ್ರೆಟಿಗಳಿಗೆ ನೀಡಲಾಗುತ್ತದೆ. ವಿಶೇಷವಾಗಿ ಭಾರಿ ಬೆದರಿಕೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಈ ಭದ್ರತೆ ಒದಗಿಸಲಾಗುತ್ತದೆ.

ಭಾರತ ವಿರುದ್ದ ಕಾಲು ಕೆರೆದು ಬಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಗಿದೆ. ಭಾರತದ ಪ್ರತಿ ದಾಳಿಗೆ ಪಾಕಿಸ್ತಾನ ತೀವ್ರವಾಗಿ ಕಂಗಾಲಾಗಿದೆ. ಇದೀಗ ಕದನ ವಿರಾಮ ಘೋಷಿಸಿದರೂ ಪಾಕಿಸ್ತಾನದ ನರಿ ಬುದ್ದಿ ಬಿಡುವುದಿಲ್ಲ. ಭಾರತದ ಜೊತೆಗೆ ನೇರಾ ನೇರ ದಾಳಿಗೆ ಪಾಕಿಸ್ತಾನಕ್ಕೆ ಅಸಾಧ್ಯ ಅನ್ನೋ ಸತ್ಯ ತಿಳಿದಿದೆ. ಹೀಗಾಗಿ ಉಗ್ರರ ಬಿಟ್ಟು, ಸ್ಲೀಪರ್ ಸೆಲ್ ನೆರವಿನಿಂದ ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗುವ ಸಾಧ್ಯತೆ ಹೆಚ್ಚು. ಈ ಕುರಿತು ಕೇಂದ್ರ ಗುಪ್ತಚರ ಇಲಾಖೆ ನೀಡಿದ ಸೂಚನೆ ಮೇರೆಗೆ ಜೈಶಂಕರ್ ಭದ್ರತೆ ಹೆಚ್ಚಿಸಲಾಗಿದೆ. 

ಉಗ್ರರ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಪಾಕ್ ಸೇನಾಧಿಕಾರಿಗಳ ಜಾಗತಿಕ ಭಯೋತ್ಪಾದಕರು ಎಂದು ಘೋಷಿಸಲು ಭಾರತ ಆಗ್ರಹ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..