ಕೇಂದ್ರದಿಂದ ಮತ್ತೊಂದು ಸ್ಟ್ರೋಕ್, ಕಾಶ್ಮೀರದ ತೆಹ್ರೀಕ್ ಇ ಹುರಿಯತ್ ಸಂಘಟನೆ ನಿಷೇಧ!

By Suvarna News  |  First Published Dec 31, 2023, 4:02 PM IST

ಭಯೋತ್ಪಾದನೆ ಕೃತ್ಯ, ದೇಶ ವಿರೋಧಿ ಚಟುವಟಿಕೆ, ಪ್ರತ್ಯೇಕತಾವಾದದ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂಶಾಂತಿ ಸೃಷ್ಟಿಸುತ್ತಿದ್ದ ತಹ್ರೀಕ್ ಇ ಹುರಿಯತ್ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.


ನವದೆಹಲಿ(ಡಿ.31) ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಸೇನೆ ಮೇಲೆ ಭೀಕರ ದಾಳಿ ನಡೆದಿದೆ. ರಜೌರಿ, ಪೂಂಚ್ ಸೇರಿದಂತೆ ಕೆಲ ಘಟನೆಗಳ ನೋವು ಇನ್ನು ಮಾಸಿಲ್ಲ. ಸೇನೆ ಮೇಲೆ ನಿಖರವಾಗಿ ದಾಳಿ ನಡೆಯುತ್ತಿರುವ ಭಯೋತ್ಪಾದಕರಿಕೆ ಹೆಸ ಸಾಮಾಜಿಕ, ಶೈಕ್ಷಣಿಕ, ಸಮುದಾಯದ ಹೆಸರಿನಲ್ಲಿ ತಲೆ ಎತ್ತಿ ನಿಂತಿರುವ ಹಲವು ಸಂಘಟನೆಗಳು ನೆರವು ನೀಡುತ್ತಿರುವ ಮಾಹಿತಿ ಬಹಿರಂಗವಾಗಿದೆ. ಭಯೋತ್ಪಾದನೆ ವಿಚಾರವನ್ನು ಸಹಿಸುವ ಪ್ರಶ್ನಯೇ ಇಲ್ಲ ಎಂದಿರುವ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚೆಗಷ್ಟೆ ಕಾಶ್ಮೀರ ಮುಸ್ಲಿಂ ಲೀಗ್ ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ ಇದೀಗ ತೆಹ್ರೀಕ್ ಇ ಹುರಿಯತ್ ಸಂಘಟನಯೆನ್ನು ನಿಷೇಧಿಸಿದೆ.

ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ನೆರವು, ಇಸ್ಲಾಂ ಮೂಲಭೂತವಾದ, ಭಾರತ ವಿರೋಧಿ ಚಟುವಟಿಕೆ ಹಾಗೂ ಪಾಕಿಸ್ತಾನ ಪರ ಕೆಲಸ ಮಾಡುತ್ತಿದ್ದ ತೆಹ್ರೀಕ್ ಇ ಹುರಿಯತ್ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. UAPA ಕಾಯ್ದೆ 1967ರ ಅನ್ವಯ ಈ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಕುರಿತು ಅಮಿತ್ ಶಾ ಟ್ವೀಟ್ ಮಾಡಿದ್ದು, ಭಯೋತ್ಪಾದನೆ ವಿಚಾರದಲ್ಲಿ ರಾಜಿಇಲ್ಲ ಎಂದು ಸ್ಪಷ್ಟ ಸಂದೇಶ ನೀಡಿದೆ.

Tap to resize

Latest Videos

ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ ಕಾಶ್ಮೀರದ ಮುಸ್ಲಿಂ ಲೀಗ್ ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ!

 UAPA ಕಾಯ್ದೆ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ತೆಹ್ರೀಕ್ ಇ ಹುರಿಯತ್ ಸಂಘಟನೆಯನ್ನು ಕಾನೂನುಬಾಹಿರಗ ಸಂಘಟನೆ ಎಂದು ಘೋಷಿಸಲಾಗಿದೆ. ಭಾರತದಿಂದ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯಕಿಸಲು ಈ ಸಂಘಟನೆ ನಿರಂತರವಾಗಿ ಪ್ರಯತ್ನಿಸುತ್ತಿತ್ತು. ಇಸ್ಲಾಮಿ ಆಳ್ವಿಕೆ ಸ್ಥಾಪಿಸಲು ಕಾನೂನು ಬಾಹಿರ ತಟುವಟಿಕೆಯಲ್ಲಿ ತೊಡಗಿದೆ. ಈ ಸಂಘಟನೆ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತವಾದವನ್ನು ಸ್ಥಾಪಿಸಲು ಭಯೋತ್ಪಾದಕ  ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಯೋತ್ಪಾದನ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ನಿಲುವು ತಾಳಿದೆ. ಭಾರತ ವಿರೋಧಿ, ಭಯೋತ್ಪಾದನೆ, ಪ್ರತ್ಯೇಕತೆ ಸೇರಿದಂತೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ, ಅಂತಹ ವ್ಯಕ್ತಿ ಅಥವಾ ಸಂಘಟನೆಯನ್ನು ತಕ್ಷಣೇ ನಿರ್ಬಂಧಿಸಲಾಗುತ್ತದೆ ಎಂದು ಅಮಿತ್ ಶಾ ಟ್ವೀಟ್ ಮೂಲಕ ಹೇಳಿದ್ದಾರೆ.  

 

The ‘Tehreek-e-Hurriyat, J&K (TeH) has been declared an 'Unlawful Association' under UAPA.
The outfit is involved in forbidden activities to separate J&K from India and establish Islamic rule. The group is found spreading anti-India propaganda and continuing terror activities to…

— Amit Shah (@AmitShah)

 

ಮುಸ್ಲಿಂ ಲೀಗ್ ಮಸರತ್ ಅಲಂ ಸಂಘಟನೆ ನಿಷೇಧ:
ಭಯೋತ್ಪಾದನಾ ನಿಗ್ರಹ ಕಾನೂನಿನ ಅಡಿಯಲ್ಲಿ ಜಮ್ಮು ಕಾಶ್ಮೀರದ ಮುಸ್ಲಿಂ ಲೀಗ್‌ನ ಮಸರತ್‌ ಆಲಂ ಬಣವನ್ನು ಕೇಂದ್ರ ಸರ್ಕಾರ ಸರ್ಕಾರ ಡಿ.27ರಂದು ನಿಷೇಧಿಸಿತ್ತು.. ಪ್ರತ್ಯೇಕತಾವಾದಿ ಮಸರತ್‌ ಆಲಂ ಭಟ್‌ ನೇತೃತ್ವದ ಈ ಬಣ ದೇಶ ವಿರೋಧಿ ಮತ್ತು ಪ್ರತ್ಯೇಕತಾ ಚಟುವಟಿಕೆಗಳಲ್ಲಿ ತೊಡಗಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಿಕ್‌ ಆಡಳಿತ ಜಾರಿಗೆ ಜನರನ್ನು ಪ್ರಚೋದಿಸುತ್ತಿದೆ ಎಂಬ ಕಾರಣಕ್ಕೆ ನಿಷೇಧ ವಿಧಿಸಲಾಗಿದೆ. ‘ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಡ್ಡಿಪಡಿಸುವವರಿಗೆ ಮೋದಿ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಪಾಠವಾಗಲಿದೆ. ಜಮ್ಮುಕಾಶ್ಮೀರದ ಮುಸ್ಲಿಂ ಲೀಗ್‌ (ಮಸರತ್‌ ಆಲಂ ಬಣ)ನ್ನು ಕಾನೂನು ಬಾಹಿರ ಸಂಘಟನೆ ಎಂದು ಗುರುತಿಸಲಾಗಿದ್ದು, ಇದನ್ನು ನಿಷೇಧಿಸಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

 

ನಿಜ್ಜರ್ ಆಪ್ತ, ಗ್ಯಾಂಗ್‌ಸ್ಟರ್ ಲಕ್ಬೀರ್ ಸಿಂಗ್ ಭಯೋತ್ಪಾದಕ, ಕೇಂದ್ರ ಸರ್ಕಾರ ಘೋಷಣೆ!

click me!