ಚೀನಾ ಒತ್ತಡಕ್ಕೆ ಮಣಿದು 1962ರ ಯುದ್ಧದ ಸ್ಮಾರಕ ಕೇಂದ್ರ ಸರ್ಕಾರದಿಂದ ಧ್ವಂಸ: ಖರ್ಗೆ

By Kannadaprabha NewsFirst Published Dec 31, 2023, 1:12 PM IST
Highlights

1962ರ ಯುದ್ಧದಲ್ಲಿ ಮಡಿದ ಭಾರತ ಮಾತೆಯ ವೀರ ಪುತ್ರ, ಪರಮವೀರ ಚಕ್ರ ಪಡೆದಿದ್ದ ಯೋಧ ಮೇಜರ್ ಶೈತಾನ್ ಸಿಂಗ್ ಸ್ಮರಣಾರ್ಥ ಲಡಾಖ್‌ನ ಚುಶೂಲ್‌ನಲ್ಲಿ ಸ್ಮಾರಕ ನಿರ್ಮಿಸಲಾಗಿತ್ತು. ಆದರೆ ವರದಿಗಳ ಪ್ರಕಾರ ಚೀನಾ ಜೊತೆಗಿನ ಮಾತುಕತೆಯ ಬಳಿಕ ಈ ಸ್ಮಾರಕ ಧ್ವಂಸ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನವದೆಹಲಿ (ಡಿಸೆಂಬರ್ 31, 2023): ಚೀನಾದ ಆದೇಶಕ್ಕೆ ತಲೆಬಾಗಿ 1962 ಯುದ್ದದಲ್ಲಿ ಮಡಿದ ಯೋಧರ ಸ್ಮರಣಾರ್ಥ ಗಡಿಯಲ್ಲಿ ನಿರ್ಮಿಸಿದ್ದ ಸ್ಮಾರಕ ಕೇಂದ್ರವನ್ನು ಕೇಂದ್ರ ಸರ್ಕಾರ ಧ್ವಂಸಗೊಳಿಸಿದೆ. ಈ ಮೂಲಕ ಯೋಧರಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘1962ರ ಯುದ್ಧದಲ್ಲಿ ಮಡಿದ ಭಾರತ ಮಾತೆಯ ವೀರ ಪುತ್ರ, ಪರಮವೀರ ಚಕ್ರ ಪಡೆದಿದ್ದ ಯೋಧ ಮೇಜರ್ ಶೈತಾನ್ ಸಿಂಗ್ ಸ್ಮರಣಾರ್ಥ ಲಡಾಖ್‌ನ ಚುಶೂಲ್‌ನಲ್ಲಿ ಸ್ಮಾರಕ ನಿರ್ಮಿಸಲಾಗಿತ್ತು. ಆದರೆ ವರದಿಗಳ ಪ್ರಕಾರ ಚೀನಾ ಜೊತೆಗಿನ ಮಾತುಕತೆಯ ಬಳಿಕ ಈ ಸ್ಮಾರಕ ಧ್ವಂಸ ಮಾಡಲಾಗಿದೆ. 

Latest Videos

ಇದನ್ನು ಓದಿ: ಖರ್ಗೆ ಪ್ರಧಾನಿ ಅಭ್ಯರ್ಥಿಗೆ ಇಂಡಿಯಾದಲ್ಲೀಗ ಭಿನ್ನ ರಾಗ, ಶರದ್‌ ಪವಾರ್ ಅಪಸ್ವರ

ಭಾರತಕ್ಕೆ ಸೇರಿದ ಸ್ಥಳ ಈಗ ಬಫರ್‌ ಜೋನ್‌ ಆಗಿದೆ. ಶೈತಾನ್ ಸಿಂಗ್ ಅವರ ನೇತೃತ್ವದಲ್ಲಿ ಹುತಾತ್ಮರಾದ 113 ಮಂದಿ ಯೋಧರು ಈ ದೇಶದ ಹೆಮ್ಮೆ. ಈ ಸ್ಮಾರಕವನ್ನು ಧ್ವಂಸ ಮಾಡುವ ಮೂಲಕ ಬಿಜೆಪಿ ಮತ್ತೊಮ್ಮೆ ತನ್ನ ನಕಲಿ ದೇಶ ಭಕ್ತಿಯನ್ನು ಪ್ರದರ್ಶಿಸಿದೆ. ಈ ಸರ್ಕಾರ ಚೀನಾದ ಯೋಜನೆಗಳಿಗೆ ಬಲಿಯಾಗಿದ್ದು, ನೋಡಿ ಬೇಸರವಾಗಿದೆ’ ಎಂದು ಹೇಳಿದ್ದಾರೆ.

 

ಪ್ರಧಾನಿ ಸ್ಥಾನಕ್ಕೆ ಖರ್ಗೆ ಹೆಸರಿಗೆ ನನ್ನ ತಕರಾರಿಲ್ಲ, ನನಗೆ ಇಂಡಿಯಾ ಕೂಟದ ಸಂಚಾಲಕ ಹುದ್ದೆಯೂ ಬೇಡ: ನಿತೀಶ್‌ ಕುಮಾರ್

click me!