ಲಾಕ್‌ಡೌನ್‌ ಜಾರಿ ಭೀತಿ : ಬಹುತೇಕ ಎಲ್ಲಾ ನಗರಗಳಿಂದ ವಲಸೆ ಆರಂಭ

By Kannadaprabha NewsFirst Published Apr 9, 2021, 7:21 AM IST
Highlights

ದೇಶದಲ್ಲಿ ಕೊರೋನಾ ಮಹಾಮಾರಿ ಮಿತಿ ಮೀರಿದೆ. ಕೋವಿಡ್ ಹಿನ್ನೆಲೆ ಮತ್ತೆ ದೇಶದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜನರ ವಲಸೆಯೂ ಜೋರಾಗಿದೆ. 

ನವದೆಹಲಿ (ಏ.09): ಕೊರೋನಾ ಸೋಂಕು ನಿಯಂತ್ರಿಸಲು ಕಳೆದ ವರ್ಷ ಏಕಾಏಕಿ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರು ಈಗ ಮತ್ತೆ ಗುಳೆ ಆರಂಭಿಸಿದ್ದಾರೆ.

 ವಿವಿಧ ರಾಜ್ಯಗಳು ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಲಾಕ್‌ಡೌನ್‌ ನಿರ್ಧಾರ ಪ್ರಕಟಿಸುತ್ತಿದ್ದಂತೆ ಊರಿಗೆ ಹೊರಡಲು ಆರಂಭಿಸಿದ್ದಾರೆ. 
ಮುಂಬೈ, ಬೆಂಗಳೂರಿನಿಂದ ಎರಡು ದಿನದ ಹಿಂದೆಯೇ ತವರು ರಾಜ್ಯಗಳಿಗೆ ವಲಸೆ ಆರಂಭಿಸಿದ್ದ ಕಾರ್ಮಿಕರು ಇದೀಗ ದೆಹಲಿ, ಪುಣೆ, ಗುಜರಾತಿನ ಸೂರತ್‌ ಹಾಗೂ ಅಹಮದಾಬಾದ್‌ನಿಂದಲೂ ತವರು ರಾಜ್ಯಗಳಿಗೆ ದೊಡ್ಡ ಸಂಖ್ಯೆಯಲ್ಲಿ ಮರಳತೊಡಗಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಕರ್ಫ್ಯೂ ರಾಜ್ಯಕ್ಕೆ ವಿಸ್ತರಣೆ; CM ಯಡಿಯೂರಪ್ಪ! ...

ದೇಶದಲ್ಲಿ ಈಗಾಗಲೇ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಲಕ್ಷ ಲಕ್ಷ ಕೇಸ್‌ಗಳು ದಾಖಲಾಗುತ್ತಿದೆ. 

click me!