ಶತಮಾನಗಳ ಆಯೋಧ್ಯೆ ಮಂದಿರ ವಿವಾದ ಬಗೆ ಹರಿದು ಇದೀಗ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಯೋಧ್ಯೆ ತೀರ್ಪಿನ ಬಳಿಕ ಇದೇ ರೀತಿ ವಿವಾದದಲ್ಲಿರುವ ಹಲವು ಹಿಂದೂ ಮಂದಿರ ಕಾನೂನು ಹೋರಾಟ ಚುರುಕುಗೊಳಿಸಿದೆ. ಇದೀಗ ಕಾಶಿ ವಿಶ್ವನಾಥ ಮಂದಿರ ಸಂಕೀರ್ಣ ಜಾಗದಲ್ಲಿರುವ ಮಸೀದಿ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ವಾರಣಾಸಿ(ಏ.08): ಅಯೋಧ್ಯೆ ವಿವಾದ ಬಗೆಹರಿದ ಬಳಿಕ ಮಥುರಾ ಸೇರಿದಂತೆ ಹಲವು ಹಿಂದೂ ದೇವಾಲಯಗಳು ತಮ್ಮ ಕಾನೂನು ಹೋರಾಟವನ್ನು ಮತ್ತಷ್ಟು ಚುರುಕು ಮಾಡಿದೆ. ಇದೀಗ ಕಾಶೀ ವಿಶ್ವನಾಥನ ಸರದಿ. ಪವಿತ್ರ ಕಾಶಿ ವಿಶ್ವನಾಥನ ಮಂದೀರ ಸಂಕೀರ್ಣದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಕಾಶಿ ವಿಶ್ವನಾಥ ದೇವಾಲಯದ ಭಾಗ ಕೆಡವಿ ನಿರ್ಮಿಸಲಾಗಿದೆ. ಹೀಗಾಗಿ ಈ ಭೂಮಿಯನ್ನು ಮಂದಿರಕ್ಕೆ ಮರಳಿ ನೀಡಬೇಕು ಅನ್ನೋ ಅರ್ಜಿಯನ್ನು ವಾರಣಾಸಿ ಜಿಲ್ಲಾ ಕೋರ್ಟ್ ಪುರಸ್ಕರಿಸಿದೆ.
70 ಅಲ್ಲ, 107 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತೆ ರಾಮ ಮಂದಿರ, ಟ್ರಸ್ಟ್‌ನಿಂದ ತಯಾರಿ!
ಕಾಶಿ ವಿಶ್ವನಾಥ್ ಮಂದಿರದಲ್ಲಿ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ಕೋರ್ಟ್ ಸೂಚನೆ ನೀಡಿದೆ. ಸಮೀಕ್ಷೆ ನಡೆಸಿ, ವರದಿ ನೀಡುವಂತೆ ಸೂಚಿಸಿದೆ. ಈ ಕುರಿತು ವಿಜಯ್ ಶಂಕರ್ ರಸ್ತೂಗಿ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ಸೂಚನೆ ನೀಡಿದೆ.
1664ರಲ್ಲಿ ಮೊಘಲ್ ರಾಜ ಔರಂಗಜೇಬ್ ದಾಳಿ ಮಾಡಿ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕಡವಲಾಗಿದೆ. ಬಳಿಕ ಇಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಮಸೀದಿ ಜಾಗವನ್ನು ಹಿಂದೂ ದೇವಾಲಯಕ್ಕೆ ಮರಳಿ ನೀಡಬೇಕು ಎಂದು ಕೋರಲಾಗಿದೆ.
ಕೋರ್ಟ್ ಆದೇಶದಕ್ಕೆ AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಸಮಾಧಾನಗೊಂಡಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಮಸೀದಿ ಸಮಿತಿಯು ಈ ಆದೇಶ ತಕ್ಷಣವೇ ಮೇಲ್ಮನವಿ ಸಲ್ಲಿಸಬೇಕು ಎಂದಿದ್ದಾರೆ. ಪುರಾತತ್ವ ಇಲಾಖೆಗೆ ಹಿಂದುತ್ವದ ಸುಳ್ಳು ಹೇಳುವ ಪರಿಪಾಠ ಹೆಚ್ಚಾಗಿದೆ ಎಂದಿದ್ದಾರೆ.