ರಾಫೆಲ್ ಯುದ್ಧ ವಿಮಾನ ಒಪ್ಪಂದ: ಭ್ರಷ್ಟಾಚಾರ ಆರೋಪ ತಿರಸ್ಕರಿಸಿದ ದಸಾಲ್ಟ್ ಏವಿಯೇಶನ್!

By Suvarna News  |  First Published Apr 8, 2021, 9:32 PM IST

ರಾಫೆಲ್ ಯುದ್ಧವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪವನ್ನು ಫ್ರಾನ್ಸ್ ದಸಾಲ್ಟ್ ಏವಿಯೇಶನ್ ಸ್ಪಷ್ಟವಾಗಿ ನಿರಾಕರಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿದೆ. 


ನವದೆಹಲಿ(ಏ.08): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಖರೀದಿ ಒಪ್ಪಂದಗಳಲ್ಲಿ ರಫೇಲ್ ಯುದ್ಧಿವಿಮಾನ ಡೀಲ್ ಅತೀ ದೊಡ್ಡ ಒಪ್ಪಂದವಾಗಿದೆ. ಆದರೆ ಇದೇ ಒಪ್ಪಂದ ಹಲವು ಆರೋಪಗಳಿಗೂ ಗುರಿಯಾಗಿದೆ. ಇತ್ತೀಚೆಗೆ ರಾಫೇಲ್ ಯುದ್ಧವಿಮಾನ ಖರೀದಿಯಲ್ಲಿ ಮಧ್ಯವರ್ತಿಗೆ 10 ದಶಲಕ್ಷ ಯೂರೋ ನೀಡಲಾಗಿದೆ ಅನ್ನೋ ಆರೋಪವನ್ನು ಫೈಟರ್ ಜೆಟ್ ತಯಾರಕ ದಸಾಲ್ಟ್ ಏವಿಯೇಶನ್ ತಿರಸ್ಕರಿಸಿದೆ.

‘ರಫೇಲ್‌ ಡೀಲ್‌ನಲ್ಲಿ ಭ್ರಷ್ಟಾಚಾರ: ’ಲೆಕ್ಕಪತ್ರದಲ್ಲಿ ‘ಗ್ರಾಹಕರಿಗೆ ಗಿಫ್ಟ್‌’ ಎಂಬ ಬರಹ!.

Latest Videos

undefined

36 ರಾಫೇಲ್ ಯುದ್ಧವಿಮಾನ ಪೂರೈಸಲು ಭಾರತದೊಂದಿಗೆ ಸಹಿ ಹಾಕುವಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಅತ್ಯಂತ ಪಾರದರ್ಶಕವಾಗಿ ನಡೆದಿದೆ ಎಂದು ಫ್ರಾನ್ಸ್‌ನ ದಸಾಲ್ಟ್ ಏವಿಯೇಶನ್ ಹೇಳಿದೆ. ಫ್ರಾನ್ಸ್ಸ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಸೇರಿದಂತೆ ಫ್ರಾನ್ಸ್ ಸರ್ಕಾರದ ಅಧೀಕೃತ ಸಂಸ್ಥೆಗಳು ಈ ಆರೋಪಗಳ ಕುರಿತು ತನಿಖೆ ನಡೆಸಿದೆ. ಯಾವ ವರದಿಯಲ್ಲಿ ನಿಯಮ ಉಲ್ಲಂಘನೆಯಾಗಿರುವ ಉಲ್ಲೇಖವಿಲ್ಲ. 

36 ರಾಫೇಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತದೊಂದಿಗಿನ ಒಪ್ಪಂದದ ಚೌಕಟ್ಟು ಮೀರಿಲ್ಲ ಎಂದು ಡಸಾಲ್ಟ್ ವಾಯುಯಾನ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.  

2000 ರ ದಶಕದ ಆರಂಭದಿಂದಲೂ, ಡಸಾಲ್ಟ್ ಏವಿಯೇಷನ್ ​​ಭ್ರಷ್ಟಾಚಾರವನ್ನು ತಡೆಗಟ್ಟಲು ಕಟ್ಟುನಿಟ್ಟಾದ ಆಂತರಿಕ ಕಾರ್ಯವಿಧಾನಗಳನ್ನು ಜಾರಿಗೆ ತಂದಿದೆ, ಅದರ ಕೈಗಾರಿಕಾ ಮತ್ತು ವಾಣಿಜ್ಯ ಸಂಬಂಧಗಳಲ್ಲಿ ಕಂಪನಿಯ ಸಮಗ್ರತೆ, ನೈತಿಕತೆ ಮತ್ತು ಖ್ಯಾತಿಯನ್ನು ಖಾತರಿ ಪಡಿಸಿ ಮುಂದುವರಿಯುತ್ತಿದೆ. ಭಾರತದ ಜೊತೆಗಿನ ರಾಫೇಲ್ ಒಪ್ಪಂದ ಅತ್ಯಂತ ಪಾರದರ್ಶಕತೆಯಿಂದ ಕೂಡಿದೆ ಎಂದು ದಸಾಲ್ಟ್ ಏವಿಯೇಶನ್ ಹೇಳಿದೆ.

ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ 2016ರ ಸೆಪ್ಟೆಂಬರ್ 23ರಂದು, ಫ್ರಾನ್ಸ್‌ನ ದಸಾಲ್ಟ್ ಏವಿಯೇಶನ್‌ನಿಂದ 36 ರಾಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಬರೋಬ್ಬರಿ 59,000 ಕೋಟಿ ರೂಪಾಯಿ ಒಪ್ಪಂದ ಇದಾಗಿದೆ. 2019ರ ಲೋಕಸಭಾ ಚುನಾವಣೆಗೂ ಮುನ್ನ ರಾಫೇಲ್ ಡೀಲ್ ಭ್ರಷ್ಟಾಚಾರ ಆರೋಪ ಬಲವಾಗಿ ಕೇಳಿಬಂದಿತ್ತು. ಬಳಿಕ ತಣ್ಣಗಾಗಿದ್ದ ರಾಫೇಲ್ ಡೀಲ್, ಇದೀಗ ಮಧ್ಯವರ್ತಿಗೆ ಲಂಚ ನೀಡಿದ ಆರೋಪ ಕೇಳಿಬಂದಿದೆ. ಈ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ ಬೆನ್ನಲ್ಲೇ ಇದೀಗ ದಸಾಲ್ಟ್ ಕೂಡ ನಿರಾಕರಿಸಿದೆ.

click me!