ನಮ್ಮನ್ನು ನಾವೇ ಈಗ ಕೇಳಿಕೊಳ್ಳಬೇಕು - ನಾವೆಷ್ಟುಕಾಲ ಈ ನೆಲದ ಮೇಲಿದ್ದೇವು? ಕೊನೆಗೊಮ್ಮೆ ಈ ಭೂಮಿ ಮೇಲಿನ ಪಯಣ ಮುಗಿಸಿ ಬಾಯ್ ಮಾಡುವಾಗ ನಮ್ಮೊಳಗೆ ಖಾಲಿತನವಲ್ಲದೇ ಇನ್ನೇನು ಉಳಿದಿರುತ್ತದೆ?
ಸದಾ ಅತೃಪ್ತಿಯಿಂದ, ಸ್ವಾರ್ಥದಿಂದ, ಅಹಂಕಾರದಿಂದ ಮೆರೆಯುವ ನಾವು ನಿತ್ಯ ಈ ಸುದ್ದಿಯನ್ನೆಲ್ಲ ತಾವರೆಯ ಮೇಲಿನ ಜಲಬಿಂದುವಿನಂತೆ ಸ್ವೀಕರಿಸುತ್ತೇವೆ. ಸಹಾಯಕ್ಕೆ ಕೂಗಿದರೆ ವೀಡಿಯೋ ಮಾಡುತ್ತೇವೆ. ಒಂಚೂರು ಯಾರಿಗೋ ದಾನ ಮಾಡಿ ಸೆಲ್ಫಿ ಹೊಡೆಸಿಕೊಳ್ಳುತ್ತೇವೆ.
ನಿಲ್ಲದ ಸೋನು ಸೂದ್ ಮಾದರಿ ಕೆಲಸ, ವಲಸೆ ಕಾರ್ಮಿಕರಿಗೆ ಆಪತ್ಭಾಂಧವ
undefined
* ಆಕೆ ಮೂರು ಮಕ್ಕಳ ತಾಯಿ. ಲಾಕ್‌ಡೌನ್ ಶುರುವಾಗಿ ಒಂದು ತಿಂಗಳಿಗೆಲ್ಲ ಕೈಯಲ್ಲಿ ಕಾಸು ಖಾಲಿಯಾಗಿ, ಕೆಲಸವೂ ಇಲ್ಲದಿದ್ದಾಗ ಊರಿಗಾದರೂ ಹೋಗಿ ಬದುಕಿಕೊಳ್ಳೋಣ ಅಂತ ಹೊರಟಿದ್ದಾಳೆ. ಸೊಂಟದಲ್ಲೊಂದು ಮಗುವನ್ನು ಬ್ಯಾಲೆನ್ಸ್ ಮಾಡುತ್ತಾ, ಉಳಿದ ಮಕ್ಕಳನ್ನು ನಡೆಸುತ್ತಾ ಅವಳು ಉಳಿದವರ ಜೊತೆಗೆ ಹೆಜ್ಜೆ ಹಾಕಬೇಕು. ಹಿಂದುಳಿದರೆ ಒಂಟಿಯಾಗುವ ಭಯ.
* ಬರಿಗಾಲಲ್ಲಿ ನಡೆದೂ ನಡೆದೂ ಕಾಲೆಲ್ಲಾ ಗಾಯ ಮಾಡಿಕೊಂಡಿರುವ ಮಗು ಅಮ್ಮನ ಜೊತೆಗೆ ನಡೆಯಲಾರದೇ ಜೋರಾಗಿ ಅಳುತ್ತದೆ. ಅಮ್ಮನ ಕಂಕುಳಲ್ಲಿ ಆಗಲೇ ಮಗುವಿರುವ ಕಾರಣ ಅವಳಿಗೆ ಈ ಮಗುವನ್ನು ಸಂಭಾಳಿಸಲಾಗದೇ ಎಳೆದುಕೊಂಡೇ ಹೋಗುತ್ತಾಳೆ. ಈ ವೀಡಿಯೋ ನೋಡಿ ಜನ ‘ಪ್ಚ್ ಪಾಪ’ ಅಂತಾರೆ.
* ಟ್ರಕ್‌ನಲ್ಲಿ ಒಂದಿಷ್ಟುಜನ ತಮ್ಮೂರಿಗೆ ಮರಳುತ್ತಿದ್ದಾರೆ. ಅಲ್ಲೊಬ್ಬನಿಗೆ ಜ್ವರ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೊರೋನಾ ಭೀತಿಯಲ್ಲಿ ಅವನನ್ನು ದಾರಿ ಮಧ್ಯೆ ಕೆಳಗಿಳಿಸಿ ಉಳಿದವರು ಮುಂದೆ ಹೋಗುತ್ತಾರೆ. ತಡೆಯಲಾರದೇ ಆತನ ಗೆಳೆಯನೂ ಟ್ರಕ್‌ನಿಂದ ನೆಗೆದು ದಾರಿ ಹೋಕರಲ್ಲಿ ಅಂಗಾಲಾಚುತ್ತಾ ಸಹಾಯ ಬೇಡುತ್ತಾನೆ, ಯಾರೂ ಸಹಾಯಕ್ಕೆ ಬರಲ್ಲ. ಕೊನೆಗೆ ಅಂಬ್ಯುಲೆನ್ಸ್ ಬಂದು ಆಸ್ಪತ್ರೆಗೆ ಸೇರಿಸಿದರೂ ಆತ ಉಳಿಯೋದಿಲ್ಲ.
ಕಾಫಿನಾಡಿನಿಂದ ಮರಳಿ ಊರಿಗೆ ತೆರಳುತ್ತಿದ್ದಾರೆ ವಲಸೆ ಕಾರ್ಮಿಕರು..!
* ಊರಲ್ಲಿ ತನ್ನ ಮಗು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ. ಊರಿಗೆ ಹೋಗಲಾಗದೇ ದಾರಿ ಮಧ್ಯೆ ತಂದೆ ಅಳುತ್ತಾ ಕೂತಿದ್ದಾನೆ. ಯಾರೋ ಆತನ ಫೋಟೋ ಸೆರೆ ಹಿಡಿಯುತ್ತಾರೆ. ಮತ್ಯಾರೋ ಊರಿಗೆ ಹೋಗಲು ಅನುವು ಮಾಡುತ್ತಾರೆ. ಅಷ್ಟರಲ್ಲಾಗದೇ ಮಗುವು ಗತಿಸಿದೆ.