ಕಾವೇರಿ ನೀರಿಗಾಗಿ ಕರ್ನಾಟಕದ ಕತ್ತು ಹಿಡಿದಿದ್ದ ತಮಿಳುನಾಡಲ್ಲಿ ಭರ್ಜರಿ ಪ್ರವಾಹ: ಆಹಾರಕ್ಕೂ ಆಸರೆಯಾದ ಕನ್ನಡಿಗರು

By Sathish Kumar KHFirst Published Dec 4, 2023, 3:37 PM IST
Highlights

ಮೈಚುಂಗ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಭರ್ಜರಿ ಮಳೆಯಾಗಿದ್ದು, ಪ್ರವಾಹ ಸೃಷ್ಟಿಯಾಗಿದೆ. ಈಗಲಾದರೂ ಕನ್ನಡ ನಾಡಿನ ಕಾವೇರಿ ನೀರಿನ ಮೇಲಿನ ದಾಹ ತೀರುವುದೇ ಎಂಬುದು ಕನ್ನಡಿಗರ ಯಕ್ಷ ಪ್ರಶ್ನೆಯಾಗಿದೆ.

ಬೆಂಗಳೂರು (ಡಿ.04): ಮೈಚುಂಗ್ ಚಂಡಮಾರುತದಿಂದಾಗಿ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ತಮಿಳುನಾಡಿನಲ್ಲಿ ಕಳೆದ ಒಂದೂವರೆ ದಿನದಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹವೇ ಸೃಷ್ಟಿಯಾಗಿದೆ. ಆದರೆ, ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಈ ವರ್ಷ ಭೀಕರ ಬರಗಾಲ ಆವರಿಸಿದ್ದು, 216ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಬರಗಾಲದ ನಡುವೆಯೂ ಕಾವೇರಿ ನೀರಿಗಾಗಿ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡಿನ ಕಾವೇರಿ ನೀರಿನ ದಾಹ ತೀರುವುದೇ ಎಂದು ಕನ್ನಡಿಗರ ಚಿಂತನೆಯಾಗಿದೆ.

ರ್ನಾಟಕದಲ್ಲಿ ಈ ವರ್ಷ ಭೀಕರ ಬರಗಾಲ ಆವರಿಸಿದ್ದು, 216ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಜೊತೆಗೆ ಕನ್ನಡ ನಾಡಿನ ಜೀವನದಿ ಕಾವೇರಿಯಲ್ಲಿ 100 ಅಡಿಗಿಂತ ಹೆಚ್ಚಿನ ನೀರು ಸಂಗ್ರಹಣೆ ಆಗದೇ ಕುರಿಯುವ ನೀರಗೂ ಹಾಹಾಕಾರ ಪಡುವ ಪರಿಸ್ಥಿತಿ ನಮ್ಮದಾಗಿದೆ. ಹೀಗಿದ್ದರೂ, ತಮಿಳುನಾಡಿನವರು ತಮಗೆ ನ್ಯಾಯಾಲಯದ ಆದೇಶದಂತೆ ನೀರು ಬಿಡಬೇಕು ಎಂದು ಕ್ಯಾತೆ ತೆಗೆದು ನೀರನ್ನು ಪಡೆಯುತ್ತಿದೆ. ಆದರೆ, ಈಗ ತಮಿಳುನಾಡಲ್ಲಿ ಮೈಚುಂಗ್ ಚಂಡಮಾರುತ ಬೀಸಿದ್ದು ಧಾರಾಕಾರ ಮಳೆಯಿಂದಾಗಿ ಪ್ರವಾಹವೇ ಸೃಷ್ಟಿಯಾಗಿದೆ. ಶಾಲಾ ಕಾಲೇಜು ರಜೆ ಘೋಷಣೆ ಮಾಡಲಾಗಿದ್ದು, ರೈಲು ಹಾಗೂ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಈಗಲಾದರೂ ಕನ್ನಡ ನಾಡಿನ ಜೀವನದಿ ಕಾವೇರಿ ನೀರನ್ನು ಬಿಡಲೇಬೇಕೆಂಬ ಕ್ಯಾತೆಯನ್ನು ನಿಲ್ಲುಸುತ್ತಾರೆಯೇ ಎಂದು ಕನ್ನಡಿಗರು ಕೇಳುತ್ತಿದ್ದಾರೆ. 

ಮೈಚುಂಗ್ ಚಂಡಮಾರುತ ಎಫೆಕ್ಟ್; ತಮಿಳುನಾಡಿಗೆ ತೆರಳಬೇಕಿದ್ದ ರೈಲುಗಳು ರದ್ದು, ಪಟ್ಟಿ ಇಲ್ಲಿದೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳುವ ರೈಲು ಸೇವೆ ರದ್ದುಗೊಳಿಸಲಾಗಿದೆ. ರಾಜ್ಯದಿಂದ ತೆರಳಬೇಕಿದ್ದ ಹತ್ತಕ್ಕು ಹೆಚ್ಚು ರೈಲ್ವೇ ಸೇವೆ ರದ್ದುಗೊಳಿಸಲಾಗಿದೆ.ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಸುರಿಯುತ್ತಿರುವ ಭಾರಿ ಮಳೆಯಾಗುತ್ತಿದ್ದು, ಬಹುತೇಕ ರೈಲ್ವೇ ನಿಲ್ದಾಣಗಳು ಮಳೆ ನೀರಿನಿಂದ ಕೂಡಿವೆ. ಕೆಲವೆಡೆ ಗುಡ್ಡ ಕುಸಿತ ಸೇರಿ ವಿವಿಧ ಕಾರಣಗಳಿಂದ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ತಮಿಳುನಾಡು ಭಾಗಕ್ಕೆ  ರೈಲ್ವೇ ಸೇವೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೇ ಇಲಾಖೆ ಮನವಿ ಮಾಡಿದೆ. 

ಮಹಾಮಳೆಗೆ ಗೋಡೆ ಕುಸಿದು ಒಬ್ಬರ ಸಾವು: ತಮಿಳುನಾಡಿನಲ್ಲಿ ಮೈಚುಂಗ್ ಚಂಡಮಾರುತ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ದಿನದಿಂದ ಭಾರಿ ಮಳೆಯಾಗುತ್ತಿದ್ದು, ಆಸ್ಪತ್ರೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳಲ್ಲಿ ಭಾರಿ ಮಳೆಯ ಪ್ರವಾಹವೇ ಸೃಷ್ಟಿಯಾಗಿದೆ. ಇನ್ನು ವಸತಿ ಪ್ರದೇಶಗಳಲ್ಲಿಯೂ ನೀರಿನ ಪ್ರಮಾಣ ಹಜೆಚ್ಚಾಗಿದ್ದು, ಜನಜೀವನ ಅಸ್ತವ್ಯವಸ್ತವಾಗಿದೆ. ಇಂದು ಮಧ್ಯಾಹ್ನದ ವೇಳೆಗೆ ಮಳೆಯಿಂದ ಚೆನ್ನೈನ ಮನೆಯೊಂದರ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. 

162 ಗಂಜಿ ಕೇಂದ್ರಗಳ ಸ್ಥಾಪನೆ: ಇನ್ನು ತಮಿಳುನಾಡಿದಲ್ಲಿ 90 ರಿಂದ 100 ಕಿಲೋಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತಿದೆ. ಇಲ್ಲಿ ರಕ್ಷಣಾ ಕಾರ್ಯಕ್ಕೆ 21 ಎನ್ ಡಿ ಆರ್ ಎಫ್ ತಂಡಗಳು ನಿಯೋಜನೆ ಮಾಡಲಾಗಿದೆ. ಈಗಾಗಲೇ 8 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪುದುಚೇರಿ ಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಸಮುದ್ರ ತೀರಕ್ಕೆ ಯಾರು ಹೋಗದಂತೆ ನಿಷೇಧ ಹೇರಲಾಗಿದೆ. ತಮಿಳುನಾಡಿನಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜೊತೆಗೆ, ಪ್ರವಾಹ ಪೀಡಿತ ಸಂತ್ರಸ್ತರ ಆರೈಕೆಗೆ 162 ಗಂಜಿ ಕೇಂದ್ರಗಳು ತೆರೆಯಲಾಗಿದೆ. ತಮಿಳುನಾಡು, ಆಂಧ್ರಪ್ರದೇಶದ, ಒಡಿಸ್ಸಾ, ಪಶ್ಚಿಮ ಬಂಗಾಳ ದಲ್ಲಿ ಚಂಡಮಾರುತದ ಪರಿಣಾಮಗಳು ಕಾಣಿಸುವ ಸಾಧ್ಯತೆಯಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಜೆಪಿ ನಗರದ ಮನೆ ಖರೀದಿಯಲ್ಲಿ ಅಕ್ರಮ? ಲೋಕಾಯುಕ್ತದಲ್ಲಿ ದೂರು ದಾಖಲು

ಮುಂದಿನ ಮೂರು ದಿನಗಳು ಭಾರಿ ಮಳೆ: ಮೈಚುಂಗ್ ( Michaung) ಸೈಕ್ಲೋನ್‌ ಹಿನ್ನೆಲೆಯಲ್ಲಿ ವಾಯುಭಾರಕುಸಿತ ಉಂಟಾಗಿ ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪಾಂಡಿಚೇರಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಸೋಮವಾರ ಮಳೆಯ ಪ್ರಮಾಣ ಅಧಿಕವಾಗಿದೆ. ಚೆನ್ನೈ ಮಹಾನಗರ, ತಿರುವಲ್ಲೂರು, ಚೆಂಗಲಪಟ್ಟು, ಕಾಂಚೀಪುರಂ, ರಾಣಿಪೆಟ್ಟೈ, ತಿರುವಣ್ಣಮಲೈ, ವಿಲ್ಲುಪುರಂ, ಕುಡ್ಡಲೂರು, ಮಯಿಲಾಡದುರೈ, ತಂಜಾವೂರ್‌, ಅರಿಯಾಲೂರು, ಪೆರಂಬದೂರು, ಕಲ್ಲಕುರುಚ್ಚಿ, ವೆಲ್ಲೂರು, ತಿರುಪಟ್ಟೂರು, ಧರ್ಮಪುರಿ, ಕೃಷ್ಣಗಿರಿ, ಸೇಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಮುನ್ಸೂಚನೆಯನ್ನು ಈಗಾಗಲೇ ನೀಡಲಾಗಿದೆ.

ಚೆನ್ನೈ ನಗರದಲ್ಲಿ ಭಾರಿ ಅವಾಂತರ: ಚೆನ್ನೈ ಮಹಾನಗರದ ಹಲವು ಕಡೆ ಭಾನುವಾರ ರಾತ್ರಿ ಸುರಿದ ಮಳೆಯಿಂದ ಹಲವು ಕಡೆ ನೀರು ನುಗ್ಗಿದೆ. ಮನೆ, ಮುಂಗಟ್ಟುಗಳಿಗೂ ನೀರು ನುಗ್ಗಿ ಜನ ತೊಂದರೆ ಅನುಭವಿಸುವಂತಾಯಿತು. ಕೆಳ ವಲಯದ ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ತವಾಗಿತ್ತು. ಪ್ರವಾಹಕ್ಕೆ ಸಿಲುಕಿಸಂಕಷ್ಟದಲ್ಲಿದ್ದ 15 ಕ್ಕೂ ಅಧಿಕ ಮಂದಿಯನ್ನು ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಯ( NDRF) ಸಿಬ್ಬಂದಿ ರಕ್ಷಿಸಿದ್ದಾರೆ. ಚೆನ್ನೈನ ತಾಂಬರಂ, ಪೀರಕಂಕನ, ಪೆರುಂಗಲತ್ತೂರು ಸಹಿತ ಹಲವು ಕಡೆ ನೀರು ನುಗ್ಗಿ ತೊಂದರೆಗಳಾಗಿವೆ.

ಕರ್ನಾಟಕದಿಂದ ಆಹಾರ, ಅಗತ್ಯ ಸಾಮಗ್ರಿಗಳ ಪೂರೈಕೆ: ಭೀಕರ ಮಿಚಾಂಗ್ ಚಂಡಮಾರುತದ ಆರ್ಭಟಕ್ಕೆ ನಲುಗಿ ಸಂಕಷ್ಟ ಪೀಡಿತವಾಗಿರುವ ತಮಿಳುನಾಡಿನ ಜನರ ಹಾಹಾಕಾರ ಪರಿಸ್ಥಿತಿಗೆ ಸ್ಪಂದಿಸಲು ಅಲ್ಲಿನ ಸಂಕಷ್ಟಿತ ಜನರ ನೆರವಿಗೆ ಧಾವಿಸುವಂತೆ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಇಂದು ಬೆಳಗಾವಿಯ ಬಿಜೆಪಿ ಕಛೇರಿಯಿಂದ ಆಹಾರ ಸಾಮಗ್ರಿಗಳು ಹಾಗೂ ಅಗತ್ಯ ದಿನಬಳಕೆ ವಸ್ತುಗಳನ್ನು ತಮಿಳುನಾಡಿಗೆ ರವಾನಿಸುವ ವಾಹನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ನಗರ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಅನಿಲ್ ಬೆನಕೆ, ಶಾಸಕರುಗಳಾದ ಶ್ರೀ ಎಸ್.ಆರ್.ವಿಶ್ವನಾಥ್, ಶ್ರೀ ಸತೀಶ್ ರೆಡ್ಡಿ, ಶ್ರೀ ಪ್ರಭು ಚೌಹಾಣ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಹಾಂತೇಶ ಕವಟಗಿಮಠ ಅವರು ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

click me!