ಹಣ ಪಡೆದು ಕಾನೂನು ಬಾಹಿರ, ಪ್ರೊಪಗಾಂಡ ಕಂಟೆಂಟ್ ಪ್ರಮೋಟ್, ತಪ್ಪು ಒಪ್ಪಿಕೊಂಡ ಮೆಟಾ

Published : Aug 05, 2026, 07:18 PM IST
Facebook

ಸಾರಾಂಶ

ಕೆಲ ಕಂಟೆಂಟ್ ಪ್ರಮೋಶನ್ ಮಾಡಲು ಮೆಟಾ ಸಂಸ್ಥೆಗೆ ವಿಪರೀತ ಹಣ ಬಂದಿದೆ. ಪ್ರಪೋಗಾಂಡ, ಕಾನೂನು ಬಾಹಿರ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡಲಾಗಿದೆ ಎಂದು ಮೆಟಾ ತನ್ನ ಕ್ಷಮಾಪಣಾ ಪತ್ರದಲ್ಲಿ ಹೇಳಿದೆ.

ನವದೆಹಲಿ (ಆ.05) ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್ ಬೆನ್ನಲ್ಲೇ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಕೇಳಿದ್ದಾರೆ. ತಮ್ಮಿಂದ ತಪ್ಪಾಗಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಡಿಲೀಟ್, ಮಕ್ಕಳ ನಿಷೇಧಿತ ಕಂಟೆಂಟ್, ಡೀಫ್‌ಫೇಕ್ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಮೆಟಾದ ನಿಯಮ ಉಲ್ಲಂಘನೆ ವಿರುದ್ಧ ಕೇಂದ್ರ ಸಂಸದೀಯ ಸ್ಥಾಯಿ ಸಮಿತಿ ಮೆಟಾಗೆ ಸಮನ್ಸ್ ನೀಡಿತ್ತು. 3 ದಿನಗಳ ಒಳಗೆ ಭೇಷರತ್ ಕ್ಷಮೆ ಯಾಚಿಸಿ ಇಲ್ಲಾ ಕಾನೂನು ಕ್ರಮ ಎದುರಿಸಿ ಎಂದು ಎಚ್ಚರಿಸಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ಮೆಟಾ ಕ್ಷಮೆ ಕೇಳಿದೆ. ಆದರೆ ಈ ಕ್ಷಮೆಯಲ್ಲಿ ದೇಶದಲ್ಲಿ ನಡೆದ ಮಹಾ ಷಡ್ಯಂತ್ರವೊಂದು ಬಯಲಾಗಿದೆ. ಮೆಟಾಗೆ ವಿಪರೀತ ಹಣ ಸುರಿದು ಬಂದಿರುವುದು ನಿಜ. ಹಣ ಪಡೆದ ಮೆಟಾ ಕಾನೂನು ಬಾಹಿರ, ಪ್ರಪೋಗಾಂಡ ಕಂಟೆಂಟ್ ಪ್ರಮೋಟ್ ಮಾಡಿರುವುದಾಗಿ ಮೆಟಾ ಒಪ್ಪಿಕೊಂಡಿದೆ.

ಆಘಾತಕಾರಿ ಸತ್ಯ ಒಪ್ಪಿಕೊಂಡ ಮೆಟಾ

ಮೆಟಾ ಭಾರತದಲ್ಲಿ ನಿರ್ದಿಷ್ಟ ಮಾದರಿಯ ಕಂಟೆಂಟ್ ಪ್ರಮೋಟ್ ಮಾಡಲು ಮತ್ತು ಬೂಸ್ಟ್‌ಗೆ ಭಾರಿ ಮೊತ್ತ ಪಾವತಿಯಾಗಿರುವುದನ್ನು ಮೆಟಾ ಅಧಿಕೃತವಾಗಿ ಒಪ್ಪಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋವನ್ನು ತಾತ್ಕಾಲಿಕವಾಗಿ ಡಿಲೀಟ್ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ನೀಡಿರುವ ಸಮನ್ಸ್ ಹಿನ್ನೆಲೆಯಲ್ಲಿ, ಐಟಿ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಮೆಟಾ ಸಂಸ್ಥೆಯ ಜಾಗತಿಕ ತಂಡ ಈ ಆಘಾತಕಾರಿ ಸತ್ಯವನ್ನು ಒಪ್ಪಿಕೊಂಡಿದೆ.

ಹಣ ಪಡೆದ ಕಾನೂನು ಬಾಹಿರ ಕಂಟೆಂಟ್ ಪ್ರಮೋಟ್

ವಿಚಾರಣೆ ವೇಳೆ ಮೆಟಾ ನಿಯಮ ಬಾಹಿರ ಚಟುವಟಿಕೆ ಬಹಿರಂಗವಾಗಿದೆ. ಕಾನೂನು ಬಾಹಿರ, ಪ್ರಪೋಗಾಂಡ, ಭಾರತ, ಕೇಂದ್ರ ಸರ್ಕಾರ ವಿರುದ್ಧ ಕೆಲ ಕಂಟೆಂಟ್ ಪ್ರಮೋಟ್ ಮಾಡಿರುವುದನ್ನು ಒಪ್ಪಿಕೊಂಡಿದೆ. ಇದು ಪ್ರಮೋಶನ್, ಜಾಹೀರಾತು ರೂಪದಲ್ಲಿ ಹಣ ಪಡೆದು ಮಾಡಲಾಗಿದೆ. ಹೀಗಾಗಿ ಕಾನೂನು ಬಾಹಿರ ಹಾಗೂ ಪ್ರಪೋಗಾಂಡ ಕಂಟೆಂಟ್ ಪ್ರಮೋಟ್ ಮಾಡಿ ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಂಡಿದೆ. ಮೆಟಾ ಈ ಮಾಹಿತಿ ಬಯಲು ಮಾಡುತ್ತಿದ್ದಂತೆ ಸರ್ಕಾರದ ಅಧಿಕಾರಿಗಳು ಗರಂ ಆಗಿದ್ದಾರೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಾ, ಹಣಕ್ಕಾಗಿ ಭಾರತದ ವಿರುದ್ದವೇ ಕೆಲಸ ಮಾಡಿದ ಮೆಟಾ ಕುರಿತು ಸಂಪೂರ್ಣ ವಿಚಾರಣೆ ನಡೆಸಲು ಅಧಿಕಾರಿಗಳು ಸೂಚಿಸಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರ ಸೇಫ್ ಹಾರ್ಬರ್ ಕುರಿತು ಸ್ಪಷ್ಟನೆ ನೀಡಿದೆ. ಐಟಿ ಕಾಯ್ದೆ ಸೇಫ್ ಹಾರ್ಬರ್ (Safe Harbour) ಕಾನೂನಾತ್ಮಕ ವಿನಾಯಿತಿ ಮೆಟಾಗೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಭಾರತದ ನಿಯಮಗಳಿಗೆ ವಿರುದ್ದವಾಗಿ ಕಾರ್ಯನಿರ್ವಹಿಸುವ ಯಾವುದೇ ಸೋಶಿಯಲ್ ಮೀಡಿಯಾ ಹಾಗೂ ಇತರ ಪ್ಲಾಟ್‌‌ಫಾರ್ಮ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: RBIನಿಂದ ಹೊಸ ನಿಯಮ; ಗ್ರಾಹಕರೇ ಸಾಲ ಮಾಡಿದ್ದೀರಾ? ತಿಂಗಳ ಕಂತು ಕಟ್ಟಲು ತಡ ಮಾಡದಿರಿ!
ಸಿಡಿಲು ಬಡಿದು ಕೇರಳದ ತ್ರಿಶೂರ್‌ ಪೂರಂ ಉತ್ಸವದ ಆನೆ ಪಳ್ಳಾಟ್ ಬ್ರಹ್ಮದತ್ತನ್ ಸಾವು