0°C in Mahabaleshwar : ಮಹಾಬಲೇಶ್ವರದಲ್ಲಿ 0 ಡಿಗ್ರಿ ತಾಪಮಾನ ಇತಿಹಾಸದಲ್ಲಿ ಇದೇ ಮೊದಲು!

By Kannadaprabha NewsFirst Published Jan 15, 2022, 3:13 AM IST
Highlights

* ಮಹಾಬಲೇಶ್ವರದಲ್ಲಿ 0 ಡಿಗ್ರಿ ತಾಪಮಾನ: ಇದೇ ಮೊದಲು!
* ಕೃಷ್ಣಾ ನದಿ ಉಗಮ ಸ್ಥಳವಾದ ಪಶ್ಚಿಮ ಘಟ್ಟದ ಮಹಾಬಲೇಶ್ವರ
* ವೆನ್ನಾ ಸರೋವರದ ಬಳಿ ಸೊನ್ನೆ ಡಿಗ್ರಿ ತಾಪಮಾನ ದಾಖಲಾಗಿದೆ

ಮುಂಬೈ (ಜ. 15) ಕೃಷ್ಣಾ ನದಿ (Krishna River) ಉಗಮ ಸ್ಥಳವಾದ ಪಶ್ಚಿಮ ಘಟ್ಟದ (Westren Ghats) ಮಹಾಬಲೇಶ್ವರ (Mahabaleshwar) ಗಿರಿಧಾಮದಲ್ಲಿ ಈವರೆಗಿನ ಇತಿಹಾಸದಲ್ಲೇ ಅತಿ ಕಡಿಮೆ ತಾಪಮಾನ ದಾಖಲಾಗಿದೆ. ಇಲ್ಲಿ ಮೊಟ್ಟಮೊದಲ ಬಾರಿ ಪಾದರಸವು (Mercury) ಸೊನ್ನೆ ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಇಲ್ಲಿಯ ವೆನ್ನಾ ಸರೋವರದ ಬಳಿ ಸೊನ್ನೆ ಡಿಗ್ರಿ ತಾಪಮಾನ ದಾಖಲಾಗಿದ್ದು, ಇನ್ನಿತರ ಪ್ರದೇಶಗಳಲ್ಲಿ 2.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಂಡುಬಂದಿದೆ. ತಾಪಮಾನ ಇಳಿಕೆ ಕಾರಣದಿಂದಾಗಿ ಮಹಾಬಲೇಶ್ವರವು ಮಹಾರಾಷ್ಟ್ರದಲ್ಲೇ ಅತೀ ತಂಪು ಪ್ರದೇಶವಾಗಿದೆ. ಭಾರತೀಯ ಹವಾಮಾನ ಇಲಾಖೆ ಮಹಾಬಲೇಶ್ವರದಲ್ಲಿ ಸಾಮಾನ್ಯಕ್ಕಿಂತ 4 ಡಿಗ್ರಿ ಕಡಿಮೆ ತಾಪಮಾನ ದಾಖಲಾಗಿದೆ ಎಂದು ಹೇಳಿದೆ. ಹೆಪ್ಪುಗಟ್ಟಿದ ಇಬ್ಬನಿಯ ಹನಿಗಳು ಇಲ್ಲಿ ಕಂಡುಬರುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ಹಿಮಪಾತ, ರಸ್ತೆ ಸ್ಥಗಿತ : ಗರ್ಭಿಣಿಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಸೇನೆ

ಬೆಳಗಾವಿಯಲ್ಲೂ ಚಳಿಚಳಿ!  
ಮಹಾಬಲೇಶ್ವರಕ್ಕೆ(Belagavi) ಕರ್ನಾಟಕದ ಬೆಳಗಾವಿ ಸುಮಾರು 270 ಕಿ.ಮೀ. ದೂರದಲ್ಲಿದ್ದು ಕಳೆದ 3 ದಿನಗಳಿಂದ ಥರಗುಟ್ಟುವ ಚಳಿ ಇದೆ. ಗುರುವಾರ ಇಲ್ಲಿ ಕನಿಷ್ಠ 8.6 ಹಾಗೂ ಶುಕ್ರವಾರ 12.6 ಡಿಗ್ರಿ ತಾಪ ದಾಖಲಾಗಿದೆ. ಸಂಜೆ 6ರಿಂದ ಬೆಳಗ್ಗೆ 11 ಗಂಟೆವರೆಗೆ ಜಿಲ್ಲೆಯಲ್ಲಿ ಥರಗುಟ್ಟುವ ಚಳಿ ಇರುತ್ತದೆ.

ಯೋಧರ ನೃತ್ಯ:   ಭಾರತೀಯ ಸೇನಾ ಯೋಧರು ಸಂದರ್ಭ ಎಂತಹುದ್ದೇ ಇರಲಿ ಆ ಕ್ಷಣವನ್ನು ಉಲ್ಲಾಸಮಯಗೊಳಿಸುವುದರಲ್ಲಿ ಎತ್ತಿದ ಕೈ. ದೇಶ ಸಂಕಷ್ಟಕ್ಕೀಡಾದಾಗಲೆಲ್ಲಾ ಮುಂದೋಡಿ ಬಂದು ನೆರವಿಗೆ ಬರುವ ಭಾರತೀಯ ಯೋಧರು ತಮ್ಮ ಸಂಸ್ಕೃತಿ ಸಂಪ್ರದಾಯ ಪಾಲಿಸುವುದರ ಜೊತೆ ನೃತ್ಯಗಳನ್ನು ಮಾಡಿ ಸಂಭ್ರಮಿಸುತ್ತಾರೆ.  ತಾವಿರುವ ಸ್ಥಳ ಎಂತಹದ್ದೇ ಇರಲಿ ಅಲ್ಲಿ ಉತ್ಸಾಹ ತುಂಬುವ ಯೋಧರು ಈಗ ಮೈನಸ್‌ಗಿಂತಲೂ ಕಡಿಮೆ ತಾಪಮಾನವಿರುವ ಹಿಮದಿಂದ ಆವೃತ್ತವಾದ ಪ್ರದೇಶದಲ್ಲಿ ಸಖತ್‌ ಆಗಿ ಖುಕುರಿ ಡಾನ್ಸ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಗೂರ್ಖಾ ರೆಜಿಮೆಂಟ್‌ನಲ್ಲಿ ಗೋರ್ಖಾ ಸಂಸ್ಕೃತಿಯಾದ ಈ ಖುಕುರಿ ನೃತ್ಯ ಯೋಧರಿಗೆ ಚಿರಪರಿಚಿತ. ಸಣ್ಣದಾದ ಚೂರಿಯನ್ನು ಹಿಡಿದುಕೊಂಡು ಮಾಡುವ ನೃತ್ಯ ಇದಾಗಿದ್ದು, ಇದು ವಿಜಯವನ್ನು ಸಂಕೇತಿಸುತ್ತದೆ.   ಇದನ್ನು ಸೈನಿಕರ ಗೌರವಾರ್ಥ ಪ್ರದರ್ಶಿಸಲಾಗುತ್ತದೆ. ಗಡಿಯನ್ನು ಕಾಪಾಡುವುದು ಸಣ್ಣ ಕೆಲಸವಲ್ಲ,  ಅದರಲ್ಲೂ ವಿಶೇಷವಾಗಿ ಮೈನಸ್‌ ಶೂನ್ಯ ತಾಪಮಾನವನ್ನು ಎದುರಿಸುತ್ತಿದ್ದರೆ ಇನ್ನಷ್ಟು ಕಷ್ಟ. ಆದರೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಈ ಮೈನಸ್‌ ತಾಪಮಾನದಲ್ಲೂ ರಾಷ್ಟ್ರಧ್ವಜದ ಮುಂದೆ ಭಾರತೀಯ ಯೋಧರು ಖುಕುರಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

ಗೂರ್ಖಾ ಸಂಸ್ಕೃತಿಯಲ್ಲಿ, 'ಖುಕುರಿ' ಒಂದು ಸಣ್ಣ ಚಾಕು, ಇದು ವಿಜಯ, ದೃಢತೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಅದರ ಚೂಪಾದ ಬ್ಲೇಡ್ ಮತ್ತು ಕೆತ್ತಿದ ಮರದ ಹಿಡಿಕೆಯೊಂದಿಗೆ, ಚಾಕುವನ್ನು ನೃತ್ಯದಲ್ಲಿ ಆಸರೆಯಾಗಿ ಬಳಸಲಾಗುತ್ತದೆ. ನರ್ತಕರು ಬೀಟ್‌ ಹಾಕುವಾಗ ಚಾಕುವನ್ನು ಬಳಸಿ ವಿವಿಧ ತಂತ್ರಗಳನ್ನು ಪ್ರದರ್ಶಿಸುತ್ತಾರೆ. 

ಇತ್ತೀಚಿನ ದಿನಗಳಲ್ಲಿ ಸೇನೆಯ ಸಾಕಷ್ಟು ವಿಡಿಯೋ ವೈರಲ್‌ ಆಗಿದೆ.  ಇದಕ್ಕೂ ಮುನ್ನ ಭಾರತೀಯ ಸೇನೆಯ ವೈದ್ಯಕೀಯ ತಂಡವೊಂದು ಗರ್ಭಿಣಿ ಮಹಿಳೆಯನ್ನು ನಿಯಂತ್ರಣ ರೇಖೆ ಬಳಿಯಿಂದ ತುರ್ತು ವೈದ್ಯಕೀಯ ಸೇವೆಗಾಗಿ ಸ್ಟ್ರೆಚರ್‌ ಮೇಲೆ ಹೊತ್ತುಕೊಂಡು  ಸ್ಥಳಾಂತರಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿತ್ತು. ಭಾರೀ ಹಿಮಪಾತದ ನಡುವೆಯೂ ಮಹಿಳೆಯನ್ನು ಸೈನಿಕರು ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದರು.  ಭಾರತೀಯ ರಕ್ಷಣಾ ಸಚಿವಾಲಯವೂ ಕೂಡ ಈ ವಿಡಿಯೋವನ್ನು ಶೇರ್ ಮಾಡಿತ್ತು.

click me!