ಪಾರಿವಾಳ ಮರಿ ರಕ್ಷಿಸಿ 2 ಲಕ್ಷ ರೂಪಾಯಿ ಕಳೆದುಕೊಂಡ ಮರ್ಸಿಡಿಸ್ ಬೆಂಜ್ ಮಾಲೀಕ!

Published : May 13, 2024, 06:48 PM ISTUpdated : May 13, 2024, 06:49 PM IST
ಪಾರಿವಾಳ ಮರಿ ರಕ್ಷಿಸಿ 2 ಲಕ್ಷ ರೂಪಾಯಿ ಕಳೆದುಕೊಂಡ ಮರ್ಸಿಡಿಸ್ ಬೆಂಜ್ ಮಾಲೀಕ!

ಸಾರಾಂಶ

ಹಾರಲು ಸಾಧ್ಯವಾಗದೆ ರಸ್ತೆಯಲ್ಲಿ ತೆವಳುತ್ತಾ ದಾಟುತ್ತಿದ್ದ ಪಾರಿವಾಳ ಮರಿಯನ್ನು ರಕ್ಷಿಸಲು ಹೋದ ಮರ್ಸಿಡಿಸ್ ಬೆಂಜ್ ಮಾಲೀಕ ಬರೋಬ್ಬರಿ 2 ಲಕ್ಷ ರೂಪಾಯಿ ನಷ್ಟ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ನಡೆದಿದ್ದೇನು?  

ಪಟ್ಟಣಂತಿಟ್ಟ(ಮೇ.13) ಭಾರತದ ರಸ್ತೆಯಲ್ಲಿ ಡ್ರೈವಿಂಗ್ ಸುಲಭದ ಮಾತಲ್ಲ. ಟ್ರಾಫಿಕ್ ನಿಯಮ ಪಾಲಿಸಿ, ನಿಯಮತಿ ವೇಗದಲ್ಲಿ ವಾಹನ ಚಲಾಯಿಸಿದರೂ  ಅಪಾಯ ಎದುರಾಗುವ ಸಾಧ್ಯೆತಗಳಿವೆ. ರಸ್ತೆಯಲ್ಲಿ ಜನರ ಓಡಾಟ, ವಾಹನ ಏಕಾಏಕಿ ಲೆಫ್ಟ್ ರೈಟ್ ಟರ್ನ್, ದನ ಸೇರಿದಂತೆ ನಾಯಿಗಳು ಪ್ರತ್ಯಕ್ಷ ಸೇರಿದಂತೆ ಹಲವು ಸವಾಲುಗಳನ್ನು ಮೆಟ್ಟಿನಿಲ್ಲಬೇಕು. ಹೀಗೆ ಸಾಗುತ್ತಿದ್ದ ರಸ್ತೆಯಲ್ಲಿ ಮರ್ಸಡೀಸ್ ಬೆಂಜ್ ಮಾಲೀಕ ಪಾರಿವಾಳದ ಮರಿಯನ್ನು ರಕ್ಷಿಸಲು ಹೋಗಿ ಬರೋಬ್ಬರಿ 2 ಲಕ್ಷ ರೂಪಾಯಿ ನಷ್ಟ ಅನುಭವಿಸಿದ ಘಟನೆ ಕೇರಳದ ಪಟ್ಟಣಂತಿಟ್ಟ ಜಿಲ್ಲಿಯಲ್ಲಿ ನಡೆದಿದೆ.

ಕೆಲಸದ ನಿಮಿತ್ತ ರಫೀಕ್ ಕಾಸರಗೋಡಿನಿಂದ ತಿರುವನಂತಪುರಂಗೆ ತಮ್ಮ ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ತೆರಳಿದ್ದಾರೆ. ಪಟ್ಟಣಂತಿಟ್ಟ ಜಿಲ್ಲೆಯ ಕುಟ್ಟೂರು ಪ್ರೌಢ ಶಾಲೆಯ ಸಮೀಪದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಎದುರಿನಲ್ಲಿ ಪಾರಿವಾಳದ ಮರಿ ಹಾರಾಡಲು ಸಾಧ್ಯವಾಗದೆ, ತೆವಳುತ್ತಾ ರಸ್ತೆಯ ನಡುವಿನಿಂದ ಬದಿಗೆ ಸಾಗುತ್ತಿತ್ತು. 

ಬಸ್ ಡ್ಯಾಶ್‌ಬೋರ್ಡ್ ಮೇಲೆ ಡ್ರೈವರ್ ಫ್ಯಾಮಿಲಿ ಫೋಟೋ ಕಡ್ಡಾಯ, ಸಾರಿಗೆ ಇಲಾಖೆ ಹೊಸ ಪ್ಲಾನ್!

ನಿಯಮಿತ ವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದ ರಫೀಕ್, ತಕ್ಷಣವೇ ಎದುರಿಗೆ ಪಾರಿವಾಳದ ಮರಿಯನ್ನು ಗಮನಿಸಿದ ರಫೀಕ್, ಬ್ರೇಕ್ ಹಾಕಿ ಕಾರು ನಿಲ್ಲಿಸಿದ್ದಾರೆ. ಪಾರಿವಾಳದ ಮರಿಯಿಂದ ಕೆಲವೇ ಅಂತರದಲ್ಲಿ ಕಾರು ನಿಂತಿದೆ. ಪಾರಿವಾಳ ಮರಿಯನ್ನು ರಕ್ಷಿಸಿದ ಖುಷಿಯಲ್ಲಿರುವಾಗಲೇ ಆಘಾತ ಎದುರಾಗಿದೆ. ಕಾರಣ ರಫೀಕ್ ತಮ್ಮ ಬೆಂಜ್ ಕಾರಿನ ಅತ್ಯಾಧುನಿಕ ಬ್ರೇಕ್ ಸಿಸ್ಟಮ್ ಮೂಲಕ ಬ್ರೇಕ್ ಹಾಕಿ ಕಾರು ನಿಲ್ಲಿಸಿದ್ದರೆ. ಆದರೆ ಹಿಂಬದಿಯಲ್ಲಿ ಬರುತ್ತಿದ್ದ ಮೀನು ತುಂಬಿದ ಟ್ರಕ್ ತಕ್ಷಣಕ್ಕೆ ನಿಲ್ಲಿಸಲು ಸಾಧ್ಯವಾಗದೆ ಬೆಂಜ್ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಕೇರಳ ಕೊಟ್ಟಾಯಂ ಮಾರುಕಟ್ಟೆಯಿಂದ ತಮಿಳುನಾಡಿನ ನಾಗರಕೊಯಿಲ್‌ಗೆ ಮೀನು ಸಾಗಿಸುತ್ತಿದ್ದ ಟ್ರಕ್ ನೇರವಾಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಬೆಂಜ್ ಕಾರಿನ ಹಿಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ವಾಹನ ಬೇರ್ಪಡಿಸಲು ಸಾಧ್ಯವಾಗದ ಕಾರಣ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕರೆಸಿದ್ದಾರೆ. 

ರಸ್ತೆಯಿಂದ ವಾಹನವನ್ನು ಬೆಂಜ್ ಶೋ ರೂಂ ತೆಗೆದುಕೊಂಡು ಹೋಗಲಾಗಿದೆ. ಈ ವೇಳೆ ಕಾರು ಸರಿಪಡಿಸಲು 2 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಸಿಬ್ಬಂದಿಗಳು ಹೇಳಿದ್ದಾರೆ. ಪಾರಿವಾಳ ಮರಿಗಳ ಉಳಿಸಲು ಹೋದ ಮಾಲೀಕ, 2 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಸ್ಕೂಟಿ ಮೇಲೆ ಹೋಳಿಯಾಡುತ್ತಾ ಟೈಟಾನಿಕ್ ಫೋಸ್, ಮಗುಚಿ ಬಿದ್ದ ಯುವತಿಗೆ ಬಿತ್ತು 33,000 ರೂ ಫೈನ್!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು