Asianet Suvarna News Asianet Suvarna News

ಸ್ಕೂಟಿ ಮೇಲೆ ಹೋಳಿಯಾಡುತ್ತಾ ಟೈಟಾನಿಕ್ ಫೋಸ್, ಮಗುಚಿ ಬಿದ್ದ ಯುವತಿಗೆ ಬಿತ್ತು 33,000 ರೂ ಫೈನ್!

ಹೋಳಿ ಸಂಭ್ರಮದಲ್ಲಿ ಮೈಮೆರತ ಹಲವರಿಗೆ ಇದೀಗ ದಂಡ ಬರೆ ಬೀಳುತ್ತಿದೆ. ಯುವತಿಯೊಬ್ಬಳು ಸ್ಕೂಟಿ ಮೇಲೆ ನಿಂತು ಹೋಳಿಯಾಡಿದ್ದಾಳೆ. ಸಾಲದು ಎಂಬಂತೆ ಚಲಿಸುತ್ತಿರುವ ಸ್ಕೂಟಿ ಮೇಲೆ ಟೈಟಾನಿಕ್ ಫೋಸ್ ನೀಡಿದ್ದಾಳೆ. ಇದೀಗ ಈ ಜೋಡಿಗೆ ಬರೋಬ್ಬರಿ 33,000 ರೂಪಾಯಿ ದಂಡ ವಿಧಿಸಲಾಗಿದೆ.
 

Women stunt on moving scooter with titanic pose during holi festival Noida police issues rs 33000 fine ckm
Author
First Published Mar 26, 2024, 7:30 PM IST

ನೋಯ್ಡಾ(ಮಾ.26) ಹೋಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಇದೇ ಸಂಭ್ರಮದಲ್ಲಿ ಅತೀರೇಖದ ವರ್ತನೆ ತೋರಿದ ಹಲವರಿಗೆ ದುಬಾರಿ ದಂಡದ ಹೊರೆಯೂ ಬಿದ್ದಿದೆ. ಹೀಗೆ ಚಲಿಸುತ್ತಿರುವ ಸ್ಕೂಟರ್ ಮೇಲೆ ಹೋಳಿಯಾಡುತ್ತಾ ಟೈಟಾನಿಕ್ ಫೋಸ್ ನೀಡಿ ರಸ್ತೆಯಲ್ಲೇ ಬಿದ್ದ ಜೋಡಿಗೆ ಇದೀಗ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ನೋಯ್ಡಾ ಪೊಲೀಸರು ಈ ಜೋಡಿಯನ್ನು ಪತ್ತೆಹಚ್ಚಿ ಬರೋಬ್ಬರಿ 33,000 ರೂಪಾಯಿ ದಂಡ ವಿಧಿಸಿದ್ದಾರೆ. 

ಹೋಳಿ ಹಬ್ಬದ ದಿನ ಸಂಭ್ರಮಾಚರಣೆಯ ಹಲವು ವಿಡಿಯೋಗಳು ವೈರಲ್ ಆಗಿತ್ತು. ಈ ಪೈಕಿ ಯುವಕನ ಮುಖಕ್ಕೆ ಹೋಳಿ ಹಬ್ಬ ಹಚ್ಚುತ್ತಾ ಸ್ಕೂಟಿ ಮೇಲೆ ತೆರಳಿದ ಯುವತಿ ಬಳಿಕ ಖ್ಯಾತ ಟೈಟಾನಿಕ್ ಚಿತ್ರದ ಫೋಸ್ ನೀಡಿದ ವಿಡಿಯೋ ಒಂದು ಭಾರಿ ವೈರಲ್ ಆಗಿತ್ತು. ಈ ವಿಡಿಯೋಗೆ ಪರ ವಿರೋಧಳು ವ್ಯಕ್ತವಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ನೋಯ್ಡಾ ಪೊಲೀಸರು ಸ್ಕೂಟರ್ ನಂಬರ್ ಪತ್ತೆ ಪರಿಶೀಲಿಸಿ, ಜೋಡಿಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಮೋಟಾರು ನಿಯಮ ಉಲ್ಲಂಘಿಸಿದ್ದಕ್ಕೆ ದುಬಾರಿ ದಂಡ ವಿಧಿಸಿದ್ದಾರೆ.

ಸೇರೆಯುಟ್ಟು ಸ್ಯಾಂಡಲ್ಸ್ ಧರಿಸಿ ಡರ್ಟ್ ಬೈಕ್‌ನಲ್ಲಿ ಸಾಹಸ, ಮಹಿಳೆಯರ ವಿಡಿಯೋ ವೈರಲ್!

ಯುವಕ ನೀಲಿ ಬಣ್ಣದ ಆ್ಯಕ್ಟಿವಾ ಸ್ಕೂಟರ್ ರೈಡ್ ಮಾಡುತ್ತಿದ್ದಾನೆ. ಹಿಂಬದಿಯಲ್ಲಿ ಸ್ಕೂಟರ್ ಮೇಲೆ ನಿಂತುಕೊಂಡ ಯುವತಿ ಯುವಕನ ಮುಖಕ್ಕೆ ಬಣ್ಣ ಹಚ್ಚಿದ್ದಾಳೆ. ಇತ್ತ ಯುವ ನಿಧಾನವಾಗಿ ಸ್ಕೂಟರ್ ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ಸ್ಕೂಟರ್ ಸಾಗುತ್ತಿದ್ದಂತೆ ಯುವತಿ ಹಾಲಿವುಡ್ ಟೈಟಾನಿಕ್ ಚಿತ್ರದಲ್ಲಿನ ಫೋಸ್ ನೀಡಿದ್ದಾಳೆ. ಈ ಫೋಸ್ ನೀಡುತ್ತಾ ಕೆಲ ದೂರ ಸಾಗಿದ ಬೆನ್ನಲ್ಲೇ ಯವಕ ಸ್ಕೂಟಿ ಬ್ರೇಕ್ ಹಾಕಿದ್ದಾರೆ. ಇದರಿಂದ ಯಾವುದೇ ಆಧಾರವಿಲ್ಲದೆ ನಿಂತುಕೊಂಡಿದ್ದ  ಯುವತಿ ನೆಲಕ್ಕುರುಳಿದ್ದಾಳೆ.

ಸ್ಕೂಟರ್‌ನಲ್ಲಿ ತೆರಳುತ್ತಾ ಲ್ಯಾಪ್‌ಟಾಪ್ ಮೂಲಕ ವಿಡಿಯೋ ಮೀಟಿಂಗ್,ಬೆಂಗಳೂರಿನ ಬ್ಯೂಸಿ ಲೈಫ್ Video!

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಹಲವರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು. ಈ ವೈರಲ್ ವಿಡಿಯೋ ಕುರಿತು ನೋಯ್ಡಾ ಪೊಲೀಸರು ಪರಿಶೀಲನೆ ನಡೆಸಿ ಇದೀಗ ಕ್ರಮಕೈಗೊಂಡಿದ್ದಾರೆ. ಹೋಳಿ ಹಬ್ಬದ ದಿನ ಇದೊಂದೆ ಪ್ರಕರಣವಲ್ಲ, ಹಲವು ಪ್ರಕರಣಗಳ ಕುರಿತು ಪೊಲೀಸರು ದೂರು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

 

 

ಇಬ್ಬರು ಯುವತಿಯರು ಚಲಿಸುತ್ತಿರುವ ಸ್ಕೂಟಿಯಲ್ಲಿ ಹೋಳಿ ಬಣ್ಣ ಹಚ್ಚಿ ಸಂಭ್ರಮಿಸಿದ ವಿಡಿಯೋ ಕೂಡ ವೈರಲ್ ಆಗಿದೆ. ತ್ರಿಬಲ್ ರೈಡಿಂಗ್ ಸ್ಕೂಟರ್, ಅಪಾಯಾಕಾರಿ ಸ್ಟಂಟ್, ಹೆಲ್ಮೆಟ್ ಧರಿಸಿದ ರೈಡಿಂಗ್ ಸೇರಿದಂತೆ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸಿ ದಂಡ ವಿಧಿಸಿದ್ದಾರೆ.

Follow Us:
Download App:
  • android
  • ios