370ನೇ ವಿಧಿ ವಾಪಾಸ್‌ ಆಗೋವರೆಗೂ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದ ಮೆಹಬೂಬಾ ಮುಫ್ತಿ!

Published : Mar 22, 2023, 05:35 PM IST
370ನೇ ವಿಧಿ ವಾಪಾಸ್‌ ಆಗೋವರೆಗೂ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದ ಮೆಹಬೂಬಾ ಮುಫ್ತಿ!

ಸಾರಾಂಶ

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಶಾರದಾ ದೇವಿ ದೇವಸ್ಥಾನವನ್ನು ಭಕ್ತಾದಿಗಳಿಗೆ ಮುಕ್ತವಾಗುತ್ತಿರುವುದನ್ನು ಸ್ವಾಗತಿಸಿದರು. ಇದರೊಂದಿಗೆ ಗಡಿಯಾಚೆಗಿನ ವ್ಯಾಪಾರವನ್ನು ಪುನರಾರಂಭಿಸುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.  

ನವದೆಹಲಿ (ಮಾ.22):  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು "ಎಲ್ಲಿಯವರೆಗೆ 370 ನೇ ವಿಧಿಯನ್ನು ಮರುಸ್ಥಾಪಿಸುವುದಿಲ್ಲವೋ ಅಲ್ಲಿಯವರೆಗೆ" ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖಸ್ಥೆ, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸವಲತ್ತುಗಳನ್ನು ಒಳಗೊಂಡಿದ್ದ ಭಾರತೀಯ ಸಂವಿಧಾನದ 370 ನೇ ವಿಧಿಯು "ನನಗೆ ಹೆಚ್ಚು ಭಾವನಾತ್ಮಕ ವಿಷಯವಾಗಿದೆ" ಎಂದು ಹೇಳಿದ್ದಾರೆ. 370ನೇ ವಿಧಿಯನ್ನು ಮರುಸ್ಥಾಪಿಸದೇ ಇರುವವರೆಗೂ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ಜಮ್ಮು ಕಾಶ್ಮೀರದ ವಿಧಾಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಅಲ್ಲಿ ಎರಡು ಸಂವಿಧಾನಗಳು ಇರಬೇಕು. ಅದರಲ್ಲಿ ಒಂದು ಜಮ್ಮು ಕಾಶ್ಮೀರದ ಸಂವಿಧಾನ ಇನ್ನೊಂದು ಭಾರತದ ಸಂವಿಧಾನ. ಅಲ್ಲಿ ಜಮ್ಮು ಕಾಶ್ಮೀರದ ಧ್ವಜದೊಂದಿಗೆ ಭಾರತದ ಧ್ವಜ ಕೂಡ ಇರಬೇಕು ಎಂದು ಮುಫ್ತಿ ತಿಳಿಸಿದ್ದಾರೆ.

"ಬಹುಶಃ ಇದು ನನ್ನ ಕಡೆಯಿಂದ ತುಂಬಾ ಮೂರ್ಖತನದ ನಿರ್ಧಾರವಾಗಿರಬಹುದು. ಆದರೆ ಇದು ಹೆಚ್ಚು ಭಾವನಾತ್ಮಕ ವಿಷಯವಾಗಿದೆ" ಎಂದು ಅವರು ಹೇಳಿದರು. ಇದೇ ವೇಳೆ ಲೋಕಸಭೆ ಚುನಾವಣೆಗೆ ನಿಲ್ಲುವ ಸಾಧ್ಯತೆಯ ಬಗ್ಗೆಯೂ ಮಾತನಾಡಿದರು. ಸದ್ಯದ ಮಟ್ಟಿಗೆ ಲೋಕಸಣೆ ಚುನಾವಣೆಯ ಬಗ್ಗೆ ನಾನೇನೂ ಹೇಳಲಾರೆ ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ "ಅನುಕೂಲಕರ" ಪರಿಸ್ಥಿತಿ ಇದ್ದಾಗ ಮಾತ್ರ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಪಿಡಿಪಿ ಮುಖ್ಯಸ್ಥೆ ಇತ್ತೀಚೆಗೆ ತಿಳಿಸಿದ್ದರು.ಪೂಂಚ್‌ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಂತರ ಮಾಧ್ಯಮಗಳ ಮುಂದೆ ಹಾಜರಾದ ಮುಫ್ತಿಗೆ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಯಾವಾಗ ನಡೆಯಬಹುದು ಎಂದು ಕೇಳಿದರು. ಆದರೆ, ಸದ್ಯಕ್ಕೆ ಅದನ್ನ ಊಹಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಭಾರತದ ಪರಿಸ್ಥಿತಿ ಕೂಡ ಪಾಕಿಸ್ತಾನದಂತೇ ಇದೆ, ಮುಫ್ತಿ ಮತ್ತೊಂದು ವಿವಾದಿತ ಹೇಳಿಕೆ!

ಚುನಾವಣೆಯ ಕುರಿತಾಗಿ ನಾನೇನು ಹೇಳಬಲ್ಲೆ. ಯಾಕೆಂದರೆ, ಇಲ್ಲಿ ಯಾವಾಗ ಚುನಾವಣೆ ನಡೆಯಬೇಕು ಅನ್ನೋದು ಬಿಜೆಪಿಗೆ ಮಾತ್ರ ಗೊತ್ತಿದೆ. ಇಲ್ಲಿ ಚುನಾವಣೆ ಯಾವಾಗ ನಡೆಸಬೇಕು ಎನ್ನುವ ನಿರ್ಧಾರವನ್ನು ಚುನಾವಣಾ ಆಯೋಗ ಮಾಡೋದಿಲ್ಲ. ಇದರ ನಿರ್ಧಾರ ಮಾಡೋದು ಬಿಜೆಪಿ. ಈಗಾಗಲೇ ಚುನಾವಣಾ ಆಯೋಗ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ನಾವು ಸಿದ್ಧ ಎಂದು ತಿಳಿಸಿದ್ದಾರೆ. ಆದರೆ, ಬಿಜೆಪಿಗೆ ಇಲ್ಲಿ ಅನುಕೂಲಕರ ವಾತಾವರಣ ಇದ್ದಲ್ಲಿ ಮಾತ್ರವೇ ಈ ರಾಜ್ಯದಲ್ಲಿ ಚುನಾವಣೆ ಆಗಲಿದೆ ಎಂದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಇಸಿಐ ಭೇಟಿ ಮಾಡಿದ ವಿರೋಧ ಪಕ್ಷಗಳ ನಿಯೋಗ!

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ನಡುವೆ ಬಿಸಿ ಏರುತ್ತಿದ್ದು, ಹಲವು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿವೆ. ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕಳೆದ ವಾರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಮತ್ತು ಇನ್ನೊಬ್ಬ ಸದಸ್ಯರು ಜೆ & ಕೆ 'ಶೀಘ್ರದಲ್ಲಿ' ವಿಧಾನಸಭಾ ಚುನಾವಣೆಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು