Spam Box Mail ಸ್ಪಾಮ್ ಬಾಕ್ಸ್ ಸೇರಿದ ಮೇಲ್‌ನಿಂದ ಕೈತಪ್ಪಿದ ಎಂಬಿಬಿಎಸ್ ಸೀಟ್, ನೆರವಿಗೆ ಬಂದ ಹೈಕೋರ್ಟ್!

Published : Mar 16, 2022, 10:01 PM IST
Spam Box Mail ಸ್ಪಾಮ್ ಬಾಕ್ಸ್ ಸೇರಿದ ಮೇಲ್‌ನಿಂದ ಕೈತಪ್ಪಿದ ಎಂಬಿಬಿಎಸ್ ಸೀಟ್, ನೆರವಿಗೆ ಬಂದ ಹೈಕೋರ್ಟ್!

ಸಾರಾಂಶ

ಕೌನ್ಸಲಿಂಗ್ ಹಾಜರಾಗಲು ಇಮೇಲ್ ಕಳುಹಿಸಿದ ವೈದ್ಯಕೀಯ ಸಂಸ್ಥೆ Spam Box ಸೇರಿದ ಮೇಲ್, ಕೌನ್ಸಲಿಂಗ್ ಭಾಗಿಯಾಗದ ಕಾರಣ ಸೀಟು ನಷ್ಟ ವೈದ್ಯಕೀಯ ಸಂಸ್ಥೆ ವಿರುದ್ಧ ಮೆಘಾಲಯ ಕೋರ್ಟ್‌ನಲ್ಲಿ ಹೋರಾಟ

ಮೇಘಾಲಯ(ಮಾ.16): ಕೊರೋನಾ ವಕ್ಕರಿಸಿದ ಬಳಿಕ ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳು ಆನ್‌ಲೈನ್ ನೆಚ್ಚಿಕೊಂಡಿದೆ. ಇದು ಹಲವು ಅವಾಂತರಕ್ಕೂ ಕಾರಣವಾಗಿದೆ. ಹೀಗೆ ಒಂದು ತಾಂತ್ರಿಕ ದೋಷಕ್ಕೆ ವಿದ್ಯಾರ್ಥಿಯ ಎಂಬಿಬಿಎಸ್ ಸೀಟ್ ಕೈತಪ್ಪಿ ಹೋಗಿತ್ತು. ಆದರೆ ಮೆಘಾಲಯ ಹೈಕೋರ್ಟ್ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ವಿದ್ಯಾರ್ಥಿಯನ್ನು ಕೌನ್ಸಲಿಂಗ್ ನಡೆಸಿ ಸೀಟು ನೀಡುವಂತೆ ಹೈಕೋರ್ಟ್ ಸೂಚಿಸಿದೆ.

ಎಂಬಿಬಿಎಸ್ ಸೀಟಿಗಾಗಿ ಈಶಾನ್ಯ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆ(NEIGHRIHMS)ಯಲ್ಲಿ ಅರ್ಜಿ ಹಾಕಿದ್ದ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ ವಿಡಿಯೋ ಕೌನ್ಸಲಿಂಗ್‌ಗೆ ಹಾಜರಾಗುವಂತೆ ಇಮೇಲ್ ಮಾಡಿದೆ. ವಿಡಿಯೋ ಲಿಂಕ್‌ನ್ನು ಇ ಮೇಲ್ ಮೂಲಕ ಮಾತ್ರವೆ ಹಂಚಿಕೊಳ್ಳಲಾಗಿದೆ. ಆದರೆ ಶಿಕ್ಷಣ ಸಂಸ್ಥೆ ಕಳುಹಿಸಿದ ಇಮೇಲ್(e mail) ಇನ್‌ಬಾಕ್ಸ್ ಬದಲು ನೇರವಾಗಿ ಸ್ಪಾಮ್ ಬಾಕ್ಸ್‌ (Spam Box)ಸೇರಿಕೊಂಡಿದೆ. 

ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗ ಅಲ್ಲ, ಯಾವ ಆಧಾರದಲ್ಲಿ ಹೈಕೋರ್ಟ್ ತೀರ್ಪು

ಕೌನ್ಸಲಿಂಗ್ ದಿನಾಂಕ, ವಿಡಿಯೋ  ಲಿಂಕ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಸ್ಪಾಮ್ ಬಾಕ್ಸ್ ಸೇರಿದ ಕಾರಣ ವಿದ್ಯಾರ್ಥಿಗೆ ಇದರ ಅರಿವೇ ಇಲ್ಲ. ಇತ್ತ ಕೌನ್ಸಲಿಂಗ್ ದಿನಾಂಕ ಮುಗಿದರೂ ವಿದ್ಯಾರ್ಥಿನಿಗೆ ಉತ್ತರ ಬರದ ಕಾರಣ NEIGHRIHMSನಲ್ಲಿ ವಿಚಾರಿಸಿದ್ದಾರೆ.ಈ ವೇಳೆ ತಾವು ಕೌನ್ಸಿಲಿಂಗ್ ಮಾಹಿತಿ ನೀಡಿದ್ದು, ಪಾಲ್ಗೊಳ್ಳದ ಕಾರಣ ಸೀಟು ನೀಡಲು ಸಾಧ್ಯವಿಲ್ಲ ಎಂದಿದೆ.

ತನ್ನದಲ್ಲದ ತಪ್ಪಿಗೆ ಸೀಟು ಕೈತಪ್ಪಿ ಹೋದ ವಿದ್ಯಾರ್ಥಿ ಕಾಲೇಜಿನಲ್ಲಿ ಪರಿ ಪರಿಯಾಗೆ ವಿನಂತಿಸಿದ್ದಾರೆ. ಸಂಸ್ಥೆ ಕಳುಹಿಸಿದ ಇಮೇಲ್ ಸ್ಪಾಮ್ ಬಾಕ್ಸ್ ಸೇರಿದೆ. ಹೀಗಾಗಿ ಈ ಅಚಾತುರ್ಯವಾಗಿದೆ ಎಂದು ವೈದ್ಯಕೀಯ ಸಂಸ್ಥೆಯಲ್ಲಿ ವಿವರಿಸಲಾಗಿದೆ. ಆದರೆ ಕಾಲೇಜಿನ ನಿಯಮದ ಪ್ರಕಾರ ಕಾಲ ಮಿಂಚಿಹೋಗಿದೆ ಎಂದು ಉತ್ತರ ನೀಡಿದೆ. 

ಅಜಾನ್ ಧ್ವನಿವರ್ಧಕ ಬ್ಯಾನ್‌ಗೆ PIL, ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೇರೆ ದಾರಿ ಕಾಣದ ವಿದ್ಯಾರ್ಥಿ ಮೆಘಾಲಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದ ಜಸ್ಟೀಸ್ ತಾಂಗ್‌ಕೀವ್ ಮಹತ್ವದ ಆದೇಶ ನೀಡಿದ್ದಾರೆ. ಕೊರೋನಾ ಯುಗದಲ್ಲಿ ಡಿಜಿಟಲ್ ಅವಲಂಬನೆ ಅಗತ್ಯ ಹಾಗೂ ಅನಿವಾರ್ಯವಾಗಿದೆ. ಆದರೆ ಈ ಸಂದರ್ಭದಲ್ಲಿ ಹಲವು ಲೋಪಗಳು ಸಂಭವಿಸಿದೆ. ಈ ಪ್ರಕರಣದಲ್ಲಿ ತಾಂತ್ರಿಕ ದೋಷದಿಂದ ಹೀಗಾಗಿದೆ. ಹೀಗಾಗಿ ಈ ಪ್ರಕರಣಕ್ಕೆ ವಿಶೇಷ ಪರಿಗಣನೆ ನೀಡಬೇಕಾಗಿದೆ. ತಾಂತ್ರಿಕ ಕಾರಣದಿಂದ ವಿದ್ಯಾರ್ಥಿಯ ಎಂಬಿಬಿಎಸ್ ಸೀಟು ನಷ್ಟವಾಗುವ ಸಾಧ್ಯತೆ ಇದೆ. ಹೀಗಾಗಿ ಸಂಸ್ಥೆ ಒಂದು ವಾರದೊಳಗೆ ಕೌನ್ಸಲಿಂಗ್ ಅವಕಾಶ ಮಾಡಿಕೊಡಬೇಕು ಎಂದು ಮೆಘಾಲಯ ಹೈಕೋರ್ಟ್ ಸೂಚಿಸಿದೆ.

ನಾಲ್ಕು ಸೀಟುಗಳ ಪೈಕಿ ಮೂರು ಸೀಟುಗಳ ಭರ್ತಿಯಾಗಿದೆ. ಇನ್ನುಳಿದಿರುವ ಒಂದು ಸೀಟಿನ ಆಯ್ಕೆಯ ಪ್ರಕ್ರಿಯೆ ತ್ವರಿತವಾಗಿ ಮಾಡಬೇಕು. ಸಂಸ್ಥೆ ವಿದ್ಯಾರ್ಥಿಯ ಅರ್ಹತೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಕಾಲೇಜು ಪರ ವಾದಿಸಿದ ವಕೀಲರು ಇಲ್ಲಿ ವಿದ್ಯಾರ್ಥಿಯ ನಿರ್ಲಕ್ಷ ಕಾರಣ ಎಂದು ವಾದಿಸಿದ್ದರು. ಕೌನ್ಸೆಲಿಂಗ್ ದಿನ ಗೈರು ಹಾಜರಾಗಿದ್ದಾರೆ. ಇದೀಗ ಮೇಲ್ ಸ್ಪಾಮ್ ಬಾಕ್ಸ್‌‌ಗೆ ಸೇರಿದೆ ಅನ್ನೋ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಕೋರ್ಟ್ ಈ ವಾದ ತಳ್ಳಿ ಹಾಕಿದೆ. ಇಷ್ಟೇ ಅಲ್ಲ ತಾಂತ್ರಿಕ ದೋಷದಿಂದ ಯಾರೊಬ್ಬ ವಿದ್ಯಾರ್ಥಿಗಳ ವ್ಯಾಸಾಂಗ ನಷ್ಟವಾಗಬಾರದು ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಲಕ್ನೋ: ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಹೂಕುಂಡಗಳ ಲೂಟಿ; ವಿಡಿಯೋ ವೈರಲ್