ಗುರುವಾಯೂರ್‌ ದೇಗುಲದ 44 ಆನೆಗಳಿಗೆ ಬಾಸ್ ಆದ ಲೆಜುಮೋಲ್

By Suvarna NewsFirst Published Jun 26, 2022, 3:46 PM IST
Highlights

ಕೊಚ್ಚಿ: ಗುರುವಾಯೂರಿನ ಶ್ರೀಕೃಷ್ಣ ದೇಗುಲದ ಆನೆಗಳ ಮೇಲುಸ್ತುವಾರಿಯನ್ನು ಮೊದಲ ಬಾರಿಗೆ ಮಹಿಳೆಯೊಬ್ಬರು ವಹಿಸಿಕೊಂಡಿದ್ದಾರೆ. ಗುರುವಾಯೂರು ಶ್ರೀಕೃಷ್ಣನ (Lord Sree Krishna of Guruvayur)ಕಟ್ಟಾ ಭಕ್ತೆಯಾಗಿರುವ ಸಿಆರ್ ಲೆಜುಮೋಲ್ ಅವರೇ ದೇಗುಲದ ಆನೆಗಳ ಮಾಲೀಕತ್ವ ವಹಿಸಿಕೊಂಡವರು.

ಕೊಚ್ಚಿ: ಗುರುವಾಯೂರಿನ ಶ್ರೀಕೃಷ್ಣ ದೇಗುಲದ ಆನೆಗಳ ಮೇಲುಸ್ತುವಾರಿಯನ್ನು ಮೊದಲ ಬಾರಿಗೆ ಮಹಿಳೆಯೊಬ್ಬರು ವಹಿಸಿಕೊಂಡಿದ್ದಾರೆ. ಗುರುವಾಯೂರು ಶ್ರೀಕೃಷ್ಣನ (Lord Sree Krishna of Guruvayur)ಕಟ್ಟಾ ಭಕ್ತೆಯಾಗಿರುವ ಸಿಆರ್ ಲೆಜುಮೋಲ್ ಅವರೇ ದೇಗುಲದ ಆನೆಗಳ ಮಾಲೀಕತ್ವ ವಹಿಸಿಕೊಂಡವರು. ಇವರು ದೇವಸ್ಥಾನದ ಆನೆಗಳಿಗೆ ಯಾವತ್ತೂ ಹೆದರುವುದಿಲ್ಲ. ಮಾವುತರ ಕುಟುಂಬದಲ್ಲಿ ಜನಿಸಿದ ಲೆಜುಮೋಲ್ ಅವರು ಬಾಲ್ಯದಿಂದಲೂ ಆನೆಗಳ ಜೊತೆ ಒಡನಾಟವನ್ನು ಹೊಂದಿದ್ದರು. ಅವುಗಳಿಗೆ ಆಹಾರವನ್ನು ನೀಡಲು ಇಷ್ಟಪಡುತ್ತಿದ್ದರು. ಈಗ ಅವರಿಗೆ ಆನೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಯೋಗ ಬಂದಿದ್ದು, ಇದು ಭಗವಂತನ ಆಶೀರ್ವಾದ ಎಂದು  ಗುರುವಾಯೂರ್ ದೇವಸ್ಥಾನದ ಪುನ್ನತ್ತೂರು ಕೊಟ್ಟಾದ ಉಸ್ತುವಾರಿ ವಹಿಸಿಕೊಂಡ ನಂತರ ಲೆಜುಮೋಲ್ (Lejumol) ಹೇಳಿದ್ದಾರೆ. ಆನೆ ಶಿಬಿರದ 47 ವರ್ಷಗಳ ಇತಿಹಾಸದಲ್ಲಿಯೇ ಲೆಜುಮೋಲ್ ಅವರು ಮೊದಲ ಮಹಿಳಾ ನಿರ್ವಾಹಕರಾಗಿದ್ದಾರೆ.

ಪುನ್ನತ್ತೂರು ಕೊಟ್ಟಾ (Punnathur Kotta) ಆನೆ ಶಿಬಿರವೂ  44 ಆನೆಗಳನ್ನು ಹೊಂದಿದೆ. ಇವುಗಳನ್ನು ಭಕ್ತರು ವಿವಿಧ ಕಾಲಗಳಲ್ಲಿ ದಾನವಾಗಿ ನೀಡಿದ್ದಾರೆ. ಲೆಜುಮೋಲ್ ಆನೆಗಳ ಪಾಲನೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಪುನ್ನತ್ತೂರು ಕೊಟ್ಟಾ ಸ್ಥಳೀಯ ಆಡಳಿತಗಾರರ ಒಡೆತನದ ಕೋಟೆಯಾಗಿದ್ದು, ದೇವಾಲಯದ ಆನೆಗಳನ್ನು ಇರಿಸಿಕೊಳ್ಳಲು ಗುರುವಾಯೂರ್ ದೇವಸ್ವಂ 1975 ರಲ್ಲಿ ಇದನ್ನು ಖರೀದಿಸಿತು. ಈ ಶಿಬಿರವು 10 ಎಕರೆಗಳಷ್ಟು ವಿಸ್ತಾರವಾದ ಹಸಿರು ಪ್ರದೇಶವನ್ನು ಹೊಂದಿದೆ. 

ಆನೆ ಮರಿಯ ತುಂಟಾಟ: ಯುವತಿಯ ಲಂಗ ಎಳೆದಾಡಿ ಆಟ

ಅವಳು ಮಾವುತರು ಸೇರಿದಂತೆ 150 ಸಿಬ್ಬಂದಿಯ ಜೊತೆ ಸಮನ್ವಯ ಸಾಧಿಸಬೇಕು ಮತ್ತು ಆನೆಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಬೇಕು ಎಂದು ದೇವಸ್ಥಾನದ ಆಡಳಿತಾಧಿಕಾರಿ ಕೆ ಪಿ ವಿನಯನ್ (K P Vinayan) ಹೇಳಿದ್ದಾರೆ. ಲೆಜುಮೋಲ್ ಅವರ ತಂದೆ ರವೀಂದ್ರನ್ ನಾಯರ್ (Ravindran Nair) ಮತ್ತು ಮಾವ ಶಂಕರ ನಾರಾಯಣನ್ (Sankara Narayanan)ಅವರು ದೇವಸ್ವಂನ ಮಾವುತರಾಗಿ ವರ್ಷಗಟ್ಟಲೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರ ಪತಿ ಪ್ರಸಾದ್ ಕೂಡ ಮಾವುತರಾಗಿದ್ದರು.

1996ರಲ್ಲಿ ಗುರುವಾಯೂರು ದೇವಸ್ವಂನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ್ದ ಲೆಜುಮೋಳ್ ಅವರು ಕೊಟ್ಟದ ಜವಾಬ್ದಾರಿ ವಹಿಸುವ ಮುನ್ನ ಕಾಮಗಾರಿ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದರು. ಗುರುವಾಯೂರಪ್ಪನವರ ಆನೆಗಳನ್ನು ಇಂತಹ ಅಧಿಕೃತ ಸಾಮರ್ಥ್ಯದಲ್ಲಿ ನೋಡಿಕೊಳ್ಳುವುದು ಒಂದು ದೊಡ್ಡ ಸೌಭಾಗ್ಯ. ಇಲ್ಲಿ 44 ಆನೆಗಳಿದ್ದು, ಮಾವುತರು ಸೇರಿದಂತೆ 150 ಸಿಬ್ಬಂದಿ ಇದ್ದಾರೆ. ಆನೆಗಳಿಗೆ ತಾಳೆ ಎಲೆ, ಹುಲ್ಲು, ಬಾಳೆ ಕಾಂಡ ಪೂರೈಕೆಗೆ ದೇವಸ್ವಂ ಗುತ್ತಿಗೆ ನೀಡಿದೆ. ಪ್ರತಿ ಆನೆಗೆ ಆಹಾರದ ಪ್ರಮಾಣವನ್ನು ಪಶುವೈದ್ಯರು ನಿರ್ಧರಿಸುತ್ತಾರೆ. ಮುಂದಿನ ತಿಂಗಳು ಆನೆಗಳಿಗೆ ಆಯುರ್ವೇದ ನವ ಯೌವನ ಪಡೆಯುವ ಚಿಕಿತ್ಸೆ ನೀಡಲಾಗುವುದು ಎಂದು ಲೆಜುಮೋಲ್ ತಿಳಿಸಿದರು.

ಚಿತೆ ಮೇಲಿದ್ದ ಮಹಿಳೆಯ ಶವ ಎತ್ತಿ ನೆಲಕ್ಕೆ ಬಡಿದು, ಕಾಲಿನಿಂದ ತುಳಿದ ಕಾಡಾನೆ!
 

ದೇವಾಲಯದಲ್ಲಿ ದೈನಂದಿನ ಆಚರಣೆಗಳಿಗೆ ಆನೆಗಳನ್ನು ನಿಯೋಜಿಸುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಹಬ್ಬ ಹರಿದಿನಗಳಲ್ಲಿ ಸುಮಾರು 20 ಆನೆಗಳನ್ನು ಬೇರೆ ದೇವಸ್ಥಾನಗಳಿಗೆ ಕಳುಹಿಸುತ್ತೇವೆ. ಆನೆಗಳು ಮಸ್ತಿಯಲ್ಲಿದ್ದಾಗ, ನಾವು ಅವರಿಗೆ ವಿಶ್ರಾಂತಿ ನೀಡಬೇಕು ಮತ್ತು ವೈದ್ಯಕೀಯ ತಪಾಸಣೆ ನಡೆಸಿದ ನಂತರ ಇತರ ಆನೆಗಳನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು. ಲೆಜುಮೋಲ್ ಅವರ ಮಕ್ಕಳಾದ ಅಕ್ಷಯ್ ಕೃಷ್ಣನ್ (Akshay Krishnan) ಮತ್ತು ಅನಂತಕೃಷ್ಣನ್ (Ananthakrishnan) ಕೂಡ ತಮ್ಮ ತಾಯಿಯ ಹೊಸ ಕೆಲಸದ ಬಗ್ಗೆ ಥ್ರಿಲ್ ಆಗಿದ್ದಾರೆ.

click me!