ರಸ್ತೆಯಲ್ಲಿ ಚೆಲ್ಲಿದ ಕಾಳು ಹೆಕ್ಕಲು ವೃದ್ಧನಿಗೆ ನೆರವಾದ ಪೊಲೀಸರು: ವಿಡಿಯೋ ವೈರಲ್

By Anusha KbFirst Published Apr 3, 2023, 1:57 PM IST
Highlights

ರಸ್ತೆಯಲ್ಲಿ ವೃದ್ಧರೊಬ್ಬರ ಕೈಯಲ್ಲಿದ್ದ ಬೇಳೆ ಕಾಳುಗಳ ಚೀಲವೊಂದು ಬಿದ್ದಿದ್ದು, ಪರಿಣಾಮ ಕಾಳುಗಳೆಲ್ಲಾ ರಸ್ತೆಯಲ್ಲಿ ಚೆಲ್ಲಿ ಬಿದ್ದಿವೆ. ಈ ವೇಳೆ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದು,  ವೃದ್ಧ ಕಾಳುಗಳನ್ನು ಹೆಕ್ಕಿ ಸಂಗ್ರಹಿಸಿಕೊಳ್ಳಲು ಹೆಣಗಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ರೈತನ ನೆರವಿಗೆ ಬಂದಿದ್ದಾರೆ.

ಲಕ್ನೋ: ಪೊಲೀಸರೆಂದರೆ ಅನೇಕರಿಗೆ ಒಳ್ಳೆಯ ಅಭಿಪ್ರಾಯ ಇಲ್ಲ, ಕೆಲ ಪೊಲೀಸರ ವರ್ತನೆ ಅದಕ್ಕೆ ಕಾರಣ, ಆದರೆ ಪೊಲೀಸ್‌ ಇಲಾಖೆಯಲ್ಲೂ ಮಾನವೀಯ ಮನಸ್ಸಿನ  ವ್ಯಕ್ತಿಗಳಿದ್ದಾರೆ ಎಂಬುದಕ್ಕೆ ಈಗಾಗಲೇ ಹಲವು ಘಟನೆಗಳು ನಿದರ್ಶನಗಳಾಗಿವೆ. ಅದೇ ರೀತಿ ಈಗ ಪೊಲೀಸರ ಮಾನವೀಯ ಕಾರ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ರಸ್ತೆಯಲ್ಲಿ ವೃದ್ಧರೊಬ್ಬರ ಕೈಯಲ್ಲಿದ್ದ ಬೇಳೆ ಕಾಳುಗಳ ಚೀಲವೊಂದು ಬಿದ್ದಿದ್ದು, ಪರಿಣಾಮ ಕಾಳುಗಳೆಲ್ಲಾ ರಸ್ತೆಯಲ್ಲಿ ಚೆಲ್ಲಿ ಬಿದ್ದಿವೆ. ಈ ವೇಳೆ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದು,  ವೃದ್ಧ ಕಾಳುಗಳನ್ನು ಹೆಕ್ಕಿ ಸಂಗ್ರಹಿಸಿಕೊಳ್ಳಲು ಹೆಣಗಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ರೈತನ ನೆರವಿಗೆ ಬಂದಿದ್ದಾರೆ.  ಕೆಲ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ಕಾಳುಗಳ ಮೇಲೆ ಸಾಗದಂತೆ ತಡೆದರೆ, ಮತ್ತೆ ಕೆಲವು ಪೊಲೀಸರು ಕಾಳುಗಳನ್ನು ಹೆಕ್ಕಲು ವೃದ್ಧನಿಗೆ ನೆರವಾಗಿದ್ದಾರೆ. ಈ ವಿಡಿಯೋವನ್ನು ಉತ್ತರಪ್ರದೇಶ ಪೊಲೀಸರ UP POLICE ಎಂಬ ಅಧಿಕೃತ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಪೋಸ್ಟ್ ಮಾಡಿದ್ದಾರೆ. 

ಪುಟ್ಟ ಮಕ್ಕಳ ಮೊಗದಲ್ಲಿ ನಗು ತಂದ ಬಸ್ ಚಾಲಕ: ಭಾವುಕ ವಿಡಿಯೋ

ವೀಡಿಯೋದಲ್ಲಿ ಕಾಣಿಸುವಂತೆ ರಸ್ತೆಯಲ್ಲಿ ವಾಹನಗಳು ಬಿರುಸಿನಿಂದ ಓಡಾಡುತ್ತಿದ್ದರೆ, ಪೊಲೀಸರು ಅಡ್ಡನಿಂತು ವಾಹನಗಳು ಮುಂದೆ ಕಾಳಿನ ಮೇಲೆ ಹೋಗದಂತೆ  ತಡೆದಿದ್ದಾರೆ. ಈ ವೇಳೆ ವೃದ್ಧ ಕಾಳನ್ನು ರಾಶಿ ಮಾಡುತ್ತಿದ್ದು, ಮತ್ತಿಬ್ಬರು ಪೊಲೀಸರು ಆತನಿಗೆ ನೆರವಾಗಿದ್ದಾರೆ.  ಮೀರತ್ ಪೊಲೀಸರ ಮಾನವೀಯ ಕಾರ್ಯ, ವೃದ್ಧರೊಬ್ಬರ ಕೈಯಿಂದ  ಆಕಸ್ಮಿಕವಾಗಿ ರಸ್ತೆಯಲ್ಲಿ ಕಾಳಿನ ಚೀಲ ಬಿದ್ದಿದ್ದು, ಇದರಿಂದ ರಸ್ತೆಗೆ ಬಿದ್ದ ಕಾಳನ್ನು ಹೆಕ್ಕಲು ಅವರಿಗೆ ಪೊಲೀಸರು ನೆರವಾಗಿದ್ದಾರೆ ಕೇವಲ ಆತನಿಗೆ ಸಹಾಯ ಮಾಡಿದ್ದಲ್ಲದೇ ಆತ ಸುರಕ್ಷಿತವಾಗಿ ಮನೆ ತಲುಪಲು ಪೊಲೀಸರು ನೆರವಾಗಿದ್ದಾರೆ ಎಂದು ಇನ್ಸ್ಟಾ ಪೇಜ್‌ನಲ್ಲಿ ಬರೆಯಲಾಗಿದೆ. 

Viral Video: ಉಸಿರು ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಕೋತಿಯ ಜೀವ ಉಳಿಸಿದ ಆಟೋ ಚಾಲಕ

ಈ ವಿಡಿಯೋವನ್ನು 7 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ವೀಡಿಯೋ ನೋಡಿದ ಅನೇಕರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.  ಅನೇಕರು ಇದೇ ರೀತಿಯ ಜನ ಈ ಪ್ರಪಂಚಕ್ಕೆ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇವರೇ ನಮ್ಮ ಹೀರೋಗಳು ಎಂದು ಕಾಮೆಂಟ್ ಮಾಡಿದ್ದಾರೆ. ಒಳ್ಳೆಯ ಕೆಲಸ ನಮಗೆ ಇಂತಹ ಪೊಲೀಸರ ಅಗತ್ಯವಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಹೃದಯ ಮುಟ್ಟುವ ಘಟನೆ  ಇವರು ಹೀರೋಗಳಿಗೆ ನಿಜವಾದ ವ್ಯಾಖ್ಯಾನ ಎಂದು ಕಾಮೆಂಟ್ ಮಾಡಿದ್ದಾರೆ.  

 
 
 
 
 
 
 
 
 
 
 
 
 
 
 

A post shared by UP POLICE (@uppolic

 

click me!