ತಮ್ಮ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವುದನ್ನು ರದ್ದುಗೊಳಿಸಲು ಕಾಂಗ್ರೆಸ್ ಮಾಜಿ ಅಧ್ಯಕ್ಷ ದೋಷಾರೋಪಣೆಗೆ ಮಧ್ಯಂತರ ತಡೆಯನ್ನು ಕೋರಲಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಹಿರಿಯ ವಕೀಲ ಆರ್.ಎಸ್ ಚೀಮಾ ಅವರು ಪ್ರತಿನಿಧಿಸಲಿದ್ದಾರೆ.
ನವದೆಹಲಿ/ಸೂರತ್ (ಏಪ್ರಿಲ್ 3, 2023): ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ ತಮಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ 2019 ರ ಸ್ಥಳೀಯ ಮ್ಯಾಜಿಸ್ಪ್ರೇಟ್ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮೇಲ್ಮನವಿ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಅವರು ದೆಹಲಿಯ ತಮ್ಮ ನಿವಾಸದಿಂದ ಗುಜರಾತ್‌ನ ಸೂರತ್ ಕೋರ್ಟ್‌ಗೆ ಹೊರಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಿದ ಹೇಳಿಕೆಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಘೋಷಿಸಿರುವ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ರಾಹುಲ್ ಗಾಂಧಿ ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ತಮ್ಮ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವುದನ್ನು ರದ್ದುಗೊಳಿಸಲು ಕಾಂಗ್ರೆಸ್ ಮಾಜಿ ಅಧ್ಯಕ್ಷ ದೋಷಾರೋಪಣೆಗೆ ಮಧ್ಯಂತರ ತಡೆಯನ್ನು ಕೋರಲಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಹಿರಿಯ ವಕೀಲ ಆರ್.ಎಸ್ ಚೀಮಾ ಅವರು ಪ್ರತಿನಿಧಿಸಲಿದ್ದಾರೆ. ಇನ್ನು, ರಾಹುಲ್ ಗಾಂಧಿ ಮಾತ್ರವಲ್ಲದೆ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕಾಂಗ್ರೆಸ್ ಆಡಳಿತದ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹೋಗಲಿದ್ದಾರೆ. ಅಂದರೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಮತ್ತು ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು ಹಾಗೂ ರಾಜ್ಯಸಭಾ ಸಂಸದ ಅಭಿಷೇಕ್ ಮನು ಸಿಂಘ್ವಿ ಸಹ ಗುಜರಾತ್‌ನ ಸೂರತ್ ಕೋರ್ಟ್‌ಗೆ ಹೊರಟಿದ್ದಾರೆ. ಈ ಮಧ್ಯೆ, ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು.
ಇದನ್ನು ಓದಿ: 2 ವರ್ಷ ಜೈಲು ಶಿಕ್ಷೆ ಪ್ರಶ್ನಿಸಿ ಇಂದು ರಾಹುಲ್ ಗಾಂಧಿ ಮೇಲ್ಮನವಿ: ಸೂರತ್ ಸೆಶನ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ
ಬಾಲಿಶ ಪ್ರಯತ್ನ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟೀಕೆ
ಇನ್ನು, ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಹಾಗೂ ಕೆಲವು ಪಕ್ಷದ ನಾಯಕರೊಂದಿಗೆ ಸೂರತ್ ಕೋರ್ಟ್‌ಗೆ ಹೋಗುತ್ತಿರುವುದು ನ್ಯಾಯಾಲಯದ ಮೇಲೆ ಒತ್ತಡ ಹೇರುವ "ಬಾಲಿಶ ಪ್ರಯತ್ನ" ಎಂದು ಬಿಜೆಪಿ ಬಣ್ಣಿಸಿದೆ. ಅಲ್ಲದೆ, ಅವರು ವೈಯಕ್ತಿಕವಾಗಿ ಕೋರ್ಟ್‌ಗೆ ಹೋಗುವ ಅವಶ್ಯಕತೆಯೂ ಇಲ್ಲ ಎಂದೂ ಹೇಳಿದೆ.
."ರಾಹುಲ್ ಗಾಂಧಿಯವರು ಮೇಲ್ಮನವಿ ಸಲ್ಲಿಸಲು ಸೂರತ್‌ಗೆ ಹೋಗುತ್ತಿರಬಹುದು. ಅಪರಾಧಿಯು ಮೇಲ್ಮನವಿ ಸಲ್ಲಿಸಲು ಖುದ್ದಾಗಿ ಹೋಗಬೇಕಾಗಿಲ್ಲ. ಸಾಮಾನ್ಯವಾಗಿ, ಯಾವುದೇ ಅಪರಾಧಿ ವೈಯಕ್ತಿಕವಾಗಿ ಹೋಗುವುದಿಲ್ಲ. ಅವರ ಜೊತೆಯಲ್ಲಿರುವ ನಾಯಕರು ಮತ್ತು ಸಹಾಯಕರ ಗುಂಪಿನೊಂದಿಗೆ ಅವರು ವೈಯಕ್ತಿಕವಾಗಿ ಹೋಗುತ್ತಿರುವುದು ಒಂದು ನಾಟಕವಷ್ಟೇ." ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನ '48,20,69,00,00,000 ರೂ. ಭ್ರಷ್ಟಾಚಾರ’ದ ಬಗ್ಗೆ ವಿಡಿಯೋ ರಿಲೀಸ್ ಮಾಡಿದ ಬಿಜೆಪಿ
ಹಾಗೂ, ರಾಹುಲ್ ಗಾಂಧಿಯವರು ಮಾಡುತ್ತಿರುವುದು ಮೇಲ್ಮನವಿ ನ್ಯಾಯಾಲಯದ ಮೇಲೆ ಒತ್ತಡ ತರುವ ಬಾಲಿಶ ಪ್ರಯತ್ನವಾಗಿದೆ. ದೇಶದ ಎಲ್ಲಾ ನ್ಯಾಯಾಲಯಗಳು ಇಂತಹ ತಂತ್ರಗಳಿಂದ ಮುಕ್ತವಾಗಿವೆ" ಎಂದೂ ಕಿರಣ್ ರಿಜಿಜು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
What Rahul Gandhi is doing is also a childish attempt to bring pressure on the appellate court. All courts in the country are immune from such tactics.
Do listen in to BJP National Spokesperson call out the Congress tactics. https://t.co/wUpBRppR4b
ಆದರೆ, ಇದನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ಪಕ್ಷದ ನಾಯಕರು ನೈತಿಕ ಬೆಂಬಲಕ್ಕಾಗಿ ಸೂರತ್‌ಗೆ ರಾಹುಲ್ ಗಾಂಧಿಯೊಂದಿಗೆ ಹೋಗುತ್ತಿದ್ದಾರೆ ಮತ್ತು ಈ ಭೇಟಿ ಶಕ್ತಿ ಪ್ರದರ್ಶನ ಅಲ್ಲ ಎಂದು ಹೇಳಿಕೊಂಡಿದೆ. ಇದು ಶಕ್ತಿ ಪ್ರದರ್ಶನವಲ್ಲ, ಅವರು ದೇಶಕ್ಕಾಗಿ ಹೋರಾಡುತ್ತಿದ್ದಾರೆ, ಅವರ ಹೋರಾಟಕ್ಕೆ ಬೆಂಬಲ ನೀಡಲು ರಾಹುಲ್ ಗಾಂಧಿಯೊಂದಿಗೆ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಶಿಕ್ಷೆ ಪ್ರಶ್ನಿಸಲು ರಾಹುಲ್ ಗಾಂಧಿ ರೆಡಿ: ಮೋದಿ ಉಪನಾಮ ಟೀಕೆ ಕೇಸಲ್ಲಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ
2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ, ಕಳ್ಳರೆಲ್ಲಾ ಮೋದಿ ಎಂಬ ಹೆಸರನ್ನೇ ಏಕೆ ಇಟ್ಟುಕೊಂಡಿರುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆ ವಿರುದ್ಧ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾರ್ಚ್ 23ರಂದು ನೀಡಿದ ತನ್ನ ತೀರ್ಪಿನಲ್ಲಿ ರಾಹುಲ್ ಗಾಂಧಿಯನ್ನು ದೋಷಿಯೆಂದು ಘೋಷಿಸಿ 2 ವರ್ಷ ಜೈಲು ಶಿಕ್ಷೆ ಮತ್ತು 15000 ರೂ. ದಂಡ ವಿಧಿಸಿತ್ತು. ಆದರೆ ತಕ್ಷಣವೇ ರಾಹುಲ್‌ಗೆ ಜಾಮೀನು ನೀಡುವುದರ ಜೊತೆಗೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ಶಿಕ್ಷೆ ಜಾರಿಯನ್ನು 30 ದಿನ ಅಮಾನತು ಮಾಡಿತ್ತು. ಅದರ ಬೆನ್ನಲ್ಲೇ ಮಾರ್ಚ್ 24ರಂದು ಜನಪ್ರತಿನಿಧಿ ಕಾಯ್ದೆಯಡಿ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಲೋಕಸಭೆಯ ಸ್ಪೀಕರ್ ಅನರ್ಹಗೊಳಿಸಿದ್ದರು.