ಧೂಳು ಹಿಡಿಯುತ್ತಿದೆ ವೆಂಟಿಲೇಟರ್; ಮಾಧ್ಯಮ ವರದಿ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ!

By Suvarna News  |  First Published May 13, 2021, 9:57 PM IST
  • ವೆಂಟಿಲೇಟರ್ ತಾಂತ್ರಿಕ ಧೋಷ ಕುರಿತ ಮಾಧ್ಯಮ ವರದಿ
  • ಪಿಎಂ ಕೇರ್ಸ್ ಅಡಿಯಲ್ಲಿ ರವಾನಿಸಿದ ವೆಂಟಿಲೇಟರ್ ಕುರಿತು ಸ್ಪಷ್ಟನೆ

ನವದೆಹಲಿ(ಮೇ13): ಕೊರೋನಾ ವಕ್ಕರಿಸಿದ ಬಳಿಕ ಕೇಂದ್ರ ಸರ್ಕಾರ ದೇಶದ ಆಸ್ಪತ್ರೆ ಮೂಲ ಸೌಕರ್ಯ, ಅತ್ಯಾಧುನಿಕ ಸಲಕರಣೆಗಳ ಹೆಚ್ಚಿಸುವಿಕೆಯತ್ತ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಪಂಜಾಬ್‌ನ ಫರೀದ್‌ಕೋಟ್‌ನ ಜಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೇಂದ್ರ ಸರ್ಕಾರ ಕಳಹಿಸಿರುವ ವೆಂಟಿಲೇಟರ್ ತಾಂತ್ರಿಕ ದೋಷ ಕಾರಣ ಧೂಳು ಹಿಡಿಯುತ್ತಿವೆ ಅನ್ನೋ ಮಾಧ್ಯಮ ವರದಿ ಭಾರಿ ಸದ್ದು ಮಾಡಿದೆ. ಇದೀಗ ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಧೂಳು ಹಿಡಿಯುತ್ತಿವೆ ಪಿಎಂ ಕೇರ್ಸ್‌ ಫಂಡ್‌ನಿಂದ ಖರೀದಿಸಿದ 251 ವೆಂಟಿಲೇಟರ್ಸ್‌!.

Tap to resize

Latest Videos

ಕಳೆದ ವರ್ಷ ಸಾಂಕ್ರಾಮಿಕ ರೋಗದ ಆರಂಭದಲ್ಲಿ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೊರತೆ ಕಾಡಿತ್ತು. ಇನ್ನು ವಿದೇಶದಿಂದ ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿ ಆಗಲಿಲ್ಲ. ಈ ವೇಳೆ  ಮೇಕ್ ಇನ್ ಇಂಡಿಯಾ  ವೆಂಟಿಲೇಟರ್‌ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿತ್ತು.  ಹಲವರು ಮೊದಲ ಬಾರಿಗೆ ವೆಂಟಿಲೇಟರ್‌ಗಳ ತಯಾರಕರಾಗಿದ್ದರು.  ಸೀಮಿತ ಸಮಯದಲ್ಲಿ ತಾಂತ್ರಿಕ ಪ್ರದರ್ಶನ ಮತ್ತು ಕ್ಲಿನಿಕಲ್  ಪ್ರಕ್ರಿಯೆ ನಡೆಸಿ ವೆಂಟಿಲೇಟರ್ ಉತ್ಪಾದಿಸಲಾಗಿತ್ತು.

ಕೇಂದ್ರ ಸರ್ಕಾರ ರವಾನಿಸಿದ ವೆಂಟಿಲೇಟರ್ ಅಳವಡಿಸಿದ 7 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಏಪ್ರಿಲ್ 11, 2021ರಂದು ಪತ್ರ ಬರೆದಿದ್ದಾರೆ. ಶೀಘ್ರದಲ್ಲಿ ವೆಂಟಿಲೇಟರ್ ಬಳಕೆ ಮಾಡುವಂತೆ ಪತ್ರದಲ್ಲಿ ಕೋರಲಾಗಿತ್ತು.  ಫರಿದ್‌ಕೋಟ್‌ ಆಸ್ಪತ್ರೆಗೆ ಕಳುಹಿಸಲಾದ ವೆಂಟಿಲೇಟರ್ ಪೈಕಿ, 88 ವೆಂಟಿಲೇಟರ್‌ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)  ಕಳುಹಿಸಿದೆ. ಇನ್ನು 200 ವೆಂಟಿಲೇಟರ್‌ಗಳನ್ನು ಸಿವಿ ಕಂಪನಿ ಕಳುಹಿಸಿದೆ.

ನಾಲ್ವರ ಸಾವಿನ ಬೆನ್ನಲ್ಲೇ ವೆಂಟಿಲೇಟರ್‌ ಖರೀದಿಗೆ ಮುಂದಾದ ಗದಗ ಜಿಲ್ಲಾಡಳಿತ

ಕೆಲ ವೆಂಟಿಲೇಟರ್‌ನಲ್ಲಿದ್ದ ತಾಂತ್ರಿಕ ದೋಷಗಳನ್ನು ಬಿಇಎಲ್ ಎಂಜಿನೀಯರ್ ಆಸ್ಪತ್ರೆಗೆ ತೆರಳಿ ಸರಿಪಡಿಸಿದ್ದಾರೆ. ಆದರೆ ಸರಿಯಾದ ಬಳಕೆ, ಗ್ಯಾಸ್ ಪ್ರೆಶರ್  ಸೇರೇದಂತೆ ಹಲವು ತಾಂತ್ರಿಕ ವಿಚಾರಗಳನ್ನು ಆಸ್ಪತ್ರೆ ನಿರ್ಲಕ್ಷ್ಯ ವಹಿಸುತ್ತಿದೆ. ಜೊತೆಗೆ ಹಲವರಿಗೆ ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲದಿರುವುದು ಇದಕ್ಕೆ ಕಾರಣವಾಗುತ್ತಿದೆ. 

ವೆಂಟಿಲೇಟರ್ ಬಳಕೆ ಹಾಗೂ ನಿರ್ವಹಣೆ ಕುರಿತು ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಪಂಜಾಬ್‌ನ ಅನೇಕ ಆಸ್ಪತ್ರೆಗಳು ಇದನ್ನು ಪಾಲಿಸಿಲ್ಲ. ಹೀಗಾಗಿ ವೆಂಟಿಲೇಟರ್ ಕಾರ್ಯನಿರ್ವಹಿಸದಿರುವ ಸಂದರ್ಭ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ವೆಂಟಿಲೇಟರ್ ಅಗತ್ಯವನ್ನು ಪೂರೈಸುವಲ್ಲಿ ರಾಜ್ಯಕ್ಕೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಬೆಂಬಲವನ್ನು ಬಿಇಎಲ್ ಮುಂದುವರಿಸಲಿದೆ . 

ಕೇಂದ್ರ ಆರೋಗ್ಯ ಸಚಿವಾಲಯವು ಮೇ 9, 21 ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ವೆಂಟಿಲೇಟರ್ ಉತ್ಪಾದಕರ ಸಹಾಯವಾಣಿ ಸಂಖ್ಯೆಗಳನ್ನು ದಾಖಲಿಸಿದೆ.   ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಕಂಡುಬಂದಲ್ಲಿ ಅದನ್ನ ಪರಿಹರಿಸಲು ನೊಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೇಂದ್ರ ಸರ್ಕಾರ ಪ್ರತಿ ವೈದ್ಯಕೀಯ ಸಲಕರಣೆಯ ಶೇಕಜಾ 100 ರಷ್ಟು ಪ್ರಯೋಜನ ಪಡೆದುಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

click me!