ಕೋವಿಡ್ ವಾರ್‌ ರೂಂಗೆ ವೈದ್ಯರ ನೇಮಕ; ಕೊರೋನಾ ಕಾರ್ಯಸೂಚಿ ವಿವರಿಸಿದ ಲಿಂಬಾವಳಿ!

By Suvarna NewsFirst Published May 13, 2021, 6:51 PM IST
Highlights
  • ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗೆ ಯಾವುದೇ ಅಡ್ಡಿ ಇಲ್ಲ
  • ಆತಂಕ ಬೇಡ, ವಿಳಾಸ ಸರಿಯಾಗಿ ನಮೂದಿಸಬೇಕು ಎಂದು ಮನವಿ
  • ಸಿಎಂ ಯಡಿಯೂರಪ್ಪ ಸುದ್ಧಿಗೋಷ್ಠಿಯಲ್ಲಿ ಅರವಿಂದ ಲಿಂಬಾವಳಿ ಮಾತು

ಬೆಂಗಳೂರು(ಮೇ.13):  ಕೊರೋನಾ ವೈರಸ್ ನಿಯಂತ್ರಣ ಹಾಗೂ ರಾಜ್ಯದಲ್ಲಿ ಉದ್ಭವಿಸಿದ್ದ ಬೆಡ್ ಬ್ಲಾಕಿಂಗ್ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಇಂದು(ಮೇ.13) ಸಿಎಂ ಬಿಎಸ್ ಯಡಿಯೂರಪ್ಪ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಲಿಂಬಾವಳಿ, ಯಾರೂ ಆತಂಕ ಪಡುವ ಅಗತ್ಯವಿಲ್ಲ, ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ. 

"

18 ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ ಬ್ರೇಕ್; ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಡ್ ಬ್ಲಾಕ್ ದಂಧೆಗೆ ಬ್ರೇಕ್ ಹಾಕಲಾಗಿದೆ ಸೋಂಕಿತರಿಗೆ ಮೆಸೇಜ್ ರವಾನಿಸುವ ವ್ಯವಸ್ಥೆ ಮಾಡಲಾಗಿದೆ. ಇಂತಹ ಆಸ್ಪತ್ರೆಯಲ್ಲಿ ಬೆಡ್ ಇದೆ ಎಂದು ತಿಳಿಸುವ ಕೆಲಸ ಮಾಡಲಾಗಿದೆ. ಸೋಂಕಿತರನ್ನು ತಕ್ಷಣವೇ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಚಟುವಟಿಕೆ ನಡೆಯುವ ಕೋವಿಡ್ ವಾರ್‌ರೂಂನಲ್ಲಿ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಲಿಂಬಾವಳಿ ಹೇಳಿದ್ದಾರೆ.

ಸೋಂಕಿತರಿಗೆ ವೈದ್ಯರೇ ಸಲಹೆ ನೀಡಲಿದ್ದಾರೆ. ಇದಕ್ಕಾಗಿ ಕಾಲ್‌ಸೆಂಟರ್ ತೆರೆಯಲಾಗಿದೆ. 1921 ಕಾಲ್ ಸೆಂಟರ್ ಸೋಂಕಿತರಿಗೆ ನೆರವಾಗುತ್ತಿದೆ.  28 ಕ್ಷೇತ್ರದಲ್ಲಿ ಸಮಿತಿ ರಚನೆ ಮಾಡಲಾಗಿದೆ.  ಉಳಿದ ವಾರ್ಡ್‌ಗಳಲ್ಲೂ ಈ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಇನ್ನುಳಿದ 10 ಮಹಾನಗರಗಳಲ್ಲಿ ಇದೇ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.

ಜಿಲ್ಲೆಯಲ್ಲೂ ಬೆಡ್ ಅಲಾಟ್‌ಮೆಂಟ್ ಸಿಸ್ಟಮ್ ತರುವ ಪ್ರಯತ್ನಗಳು ನಡೆಯುತ್ತಿದೆ.  ಇದೇ ವೇಳೆ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವವರಲ್ಲಿ ಲಿಂಬಾವಳಿ ಮನವಿ ಮಾಡಿದ್ದಾರೆ. ಟೆಸ್ಟ್ ಮಾಡಿಸುವವರು ಸಂಪೂರ್ಣ ವಿಳಾಸ ನೀಡುತ್ತಿಲ್ಲ. ಬದಲಾಗಿ ಸಂಪೂರ್ಣ ವಿಳಾಸ ನೀಡಬೇಕು, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡದೆ ಸಹಕರಿಸಬೇಕು ಎಂದು ಲಿಂಬಾವಳಿ ಹೇಳಿದ್ದಾರೆ.

ಕೊರೋನಾ ಪಾಸಿಟೀವ್ ಇದ್ದರೆ ಆರೈಕೆ ಮಾಡತ್ತೇವೆ. ಯಾವುದೇ ಕಾರಣಕ್ಕೂ ಆತಂಕ ಬೇಡ ಎಂದರು. ಪರೀಕ್ಷೆ ಫಲಿತಾಶಂ ಪಾಸಿಟೀವ್ ಇದ್ದರೆ ಒಂದೇ ದಿನದಲ್ಲಿ ಕೈಸೇರಲಿದೆ ಎಂದು ಲಿಂಬಾವಳಿ ಹೇಳಿದ್ದಾರೆ. 

click me!