ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತದಿಂದ ವಾಹನಗಳು ಜಖಂ, ಜಿಲ್ಲಾಡಳಿತದಿಂದ ಹೈ ಅಲರ್ಟ್!

By Suvarna NewsFirst Published Mar 29, 2024, 4:06 PM IST
Highlights

ಏರುತ್ತಿರುವ ತಾಪಮಾನ ಸೇರಿದಂತೆ ಹಲವು ಹವಾಮಾನ ವೈಪರಿತ್ಯದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತ ಸಂಭವಿಸಿದೆ. ಸೋನ್ಮಾರ್ಗ್ ಬಳಿ ಸಂಭವಿಸಿದ ಹಿಮಪಾತ ರಸ್ತೆಗೆ ಅಪ್ಪಳಿಸಿದೆ. ಇದರ ಬೆನ್ನಲ್ಲೇ ಮುಂದಿನ 24 ಗಂಟೆ ಭಾರಿ ಹಿಮಾಪಾತದ ಅಲರ್ಟ್ ನೀಡಲಾಗಿದೆ. ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
 

ಶ್ರೀನಗರ(ಮಾ.29) ಜಾಗತಿಕ ತಾಪಮಾನ, ಹವಾಮಾನದಲ್ಲಿ ಆಗುತ್ತಿರುವ ವೈಪರಿತ್ಯ ನೇರವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತಟ್ಟಿದೆ. ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಹಿಮಾಪಾತ ಸಂಭವಿಸಿದೆ. ಸೋನ್ಮಾರ್ಗ್ ಬಳಿ ಸಂಭವಿಸಿದ ಹಿಮಾಪಾತ ರಸ್ತೆಗೆ ಅಪ್ಪಳಿಸಿದೆ. ಪ್ರಮುಖ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರ ವಹಿಸುವಂತೆ ಸ್ಥಳೀಯ ಜಿಲ್ಲಾಡಳಿತ ಸೂಚನೆ ನೀಡಿದೆ.

ಸೋನ್ಮಾರ್ಗ್ ಬಳಿ ಇರುವ ಪರ್ವತದ ಮೇಲಿನ ಹಿಮಗಳು ಏಕಾಏಕಿ ಕರಗುತ್ತಿದೆ. ತೀವ್ರ ತಾಪಮಾನದ ಪರಿಣಾಮ ಹಿಮಗಳು ಕರಗಳು ಆರಂಭಿಸಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಹಿಮಗಳು ಪರ್ವತದ ಮೇಲಿಂದ ಜಾರಿ ರಸ್ತೆಗೆ ಅಪ್ಪಳಿಸಿದೆ. ಸೋನ್ಮಾರ್ಗ್ ರಸ್ತೆಗಳು ಸಂಪೂರ್ಣ ಬಂದ್ ಆಗಿದೆ. ವಾಹನಗಳು ಜಖಂಗೊಂಡಿದೆ. ಇದೇ ವೇಳೆ ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕರು ವಾಹನ ನಿಲ್ಲಿಸಿ ಓಡಿದ್ದಾರೆ. ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಾಯುವ ಸ್ಥಿತಿಯಲ್ಲಿದ್ದ ಶೆರ್ಪಾನ ಮಾರ್ಗಮಧ್ಯೆಯೇ ಬಿಟ್ಟು ತೆರಳಿದ ಪರ್ವತಾರೋಹಿ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ, ಬಂಡಿಪೊರಾ, ಗಂಡೇರ್ಬಾಲ್ ಹಾಗೂ ಬಾರಾಮುಲ್ಲಾದ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರಿ ಪ್ರಮಾಣದಲ್ಲಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಇತ್ತ ಸ್ಥಳೀಯರು ಪರ್ವತ ಪ್ರದೇಶ, ಹಿಮಾಪತ ಹೆಚ್ಚಿರುವ ಎತ್ತರ ಪ್ರದೇಶಗಳತ್ತ ತೆರಳದಂತೆ ಸೂಚಿಸಲಾಗಿದೆ. ಈ ಮಾರ್ಗದಲ್ಲಿ ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗದಲ್ಲಿ ಮಂಜಿನ ಮಳೆಯಾಗುತ್ತಿದೆ. ಹೀಗಾಗಿ ಮತ್ತಷ್ಟು ಹಿಮಪಾತವಾಗುವ ಸಾಧ್ಯತೆಯನ್ನು ಅಧಿಕಾರಿಗಳು ಸೂಚಿಸಿದ್ದಾರೆ. ಯಾವುದೇ ಕ್ಷಣದಲ್ಲೂ ತುರ್ತ ಅಗತ್ಯಕ್ಕೆ 112 ಕರೆ ಮಾಡಲು ನಾಲ್ಕು ಜಿಲ್ಲೆಗಳ ಜನತೆಗೆ ಮನವಿ ಮಾಡಲಾಗಿದೆ. ರಕ್ಷಣಾ ಸಿಬ್ಬಂಧಿಗಳನ್ನು ನಿಯೋಜಿಸಲಾಗಿದೆ. 

 

A massive avalanche struck the Hung area of Sonamarg in Ganderbal district on Friday afternoon. Fortunately, there were no reports of casualties in the incident. pic.twitter.com/lhps20YyMQ

— Kashmir Weather (@Kashmir_Weather)

 

ಸದ್ಯ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದ್ದರೂ ಸಾವು ನೋವು ಸಂಭವಿಸಿಲ್ಲ. ಆದರೆ ಮುಂದಿನ 24 ಗಂಟೆ ಕಾಲ ಹಿಮಾಪಾತ ಸಾಧ್ಯತೆಯನ್ನು ಸೂಚಿಸಲಾಗಿದೆ. ಹೀಗಾಗಿ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಹಲವು ಭಾರಿ ಹಿಮಪಾತಕ್ಕೆ ಸಾವು ನೋವುಗಳು ಸಂಭವಿಸಿದೆ. 1978ರಲ್ಲಿ ಪುಲ್ವಾಮ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತ ಕಣಿವೆ ರಾಜ್ಯದ ಅತ್ಯಂತ ಭೀಕರ ಹಿಮಪಾತ ಎಂದು ಗುರುತಿಸಲಾಗಿದೆ. ಈ ಹಿಮಪಾತದಲ್ಲಿ 200 ಮಂದಿ ಮೃತಪಟ್ಟಿದ್ದರು.

ಸಿಕ್ಕಿಂ ನಾಥುಲಾ ಪಾಸ್ ಬಳಿ ಹಿಮಾಪಾತ, 7 ಪ್ರವಾಸಿಗರ ಸಾವು

1986ರಲ್ಲಿ ಸೋನ್ಮಾರ್ಗ್‌ದಲ್ಲಿ ನಡೆದ ಹಿಮಪಾತದಲ್ಲಿ 15 ಮಂದಿ ಮೃತಪಟ್ಟಿದ್ದರು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ಹಿಮಪಾತವಾಗಿತ್ತು. ಈ ಹಿಮಪಾತದಲ್ಲಿ ಭಾರತೀಯ ಸೇನೆಯ ಹಲವು ಯೋಧರು ಹುತಾತ್ಮರಾಗಿದ್ದರು. 2005ರಲ್ಲು ಗುಲ್ಮಾರ್ಗ್‌ದಲ್ಲಿ ಸಂಭವಿಸಿದ ಹಿಮಪಾತದಲ್ಲಿ 15 ಮಂದಿ ಮೃತಪಟ್ಟಿದ್ದರು. 2017ರಲ್ಲಿ ಪಹಲ್ಗಮ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ 16 ಮಂದಿ ಮೃತಪಟ್ಟಿದ್ದಾರೆ.
 

click me!