ಕಾಂಗ್ರೆಸ್‌ಗೆ ನೀಡಿರುವ ಹೊಸ ತೆರಿಗೆ ನೋಟಿಸ್‌ನಲ್ಲಿ, 2017-18 ರಿಂದ 2020-21 ರ ಮೌಲ್ಯಮಾಪನ ವರ್ಷಗಳಿಗೆ ಮತ್ತು ದಂಡ ಮತ್ತು ಬಡ್ಡಿಯನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ (ಮಾ.29): ತೆರಿಗೆ ನೋಟಿಸ್‌ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಒಂದು ದಿನದ ನಂತರ ಕಾಂಗ್ರೆಸ್ ಆದಾಯ ತೆರಿಗೆ ಇಲಾಖೆಯಿಂದ ₹ 1,700 ಕೋಟಿ ನೋಟಿಸ್ ಸ್ವೀಕರಿಸಿದೆ. ಹೊಸ ನೋಟಿಸ್, 2017-18 ರಿಂದ 2020-21 ರವರೆಗಿನ ಮೌಲ್ಯಮಾಪನ ವರ್ಷಗಳಿಗೆ ಮತ್ತು ದಂಡ ಮತ್ತು ಬಡ್ಡಿಯನ್ನು ಒಳಗೊಂಡಿದೆ. ಇದರ ಬೆನ್ನಲ್ಲಿಯೇ ಶುಕ್ರವಾರ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ತೆರಿಗೆ ಭಯೋತ್ಪಾದನೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ. ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಈಗಾಗಲೇ ಹಣದ ಕೊರತೆ ಎದುರಿಸುತ್ತಿದೆ. ಆದಾಯ ತೆರಿಗೆ ಅಧಿಕಾರಿಗಳು ಈಗಾಗಲೇ ಕಾಂಗ್ರೆಸ್ ಪಕ್ಷವು ತನ್ನ ಖಾತೆಯಲ್ಲಿರುವ 200 ಕೋಟಿ ರೂಪಾಯಿ ಮೊತ್ತವನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳಬಾರದು ಎಂದು ಹೇಳಿದೆ. ಈ ಕುರಿತಾಗಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಿಂದಲೂ ಯಾವುದೇ ಪರಿಹಾರ ಸಿಗದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕುವ ಸಾಧ್ಯತೆ ಇದೆ. ಅದರ ನಡುವೆ ಹೊಸ ನೋಟಿಸ್‌ನಲ್ಲಿ 1700 ಕೋಟಿ ಬಾಕಿ ಮೊತ್ತವನ್ನು ಕೇಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಮುಖಂಡ ಜೈರಾಮ್ ರಮೇಶ್, ಚುನಾವಣಾ ಬಾಂಡ್ ಮೂಲಕ, ಬಿಜೆಪಿ 8,200 ಕೋಟಿ ಹಣ ಸಂಗ್ರಹಿಸಿದೆ. ಕಾಂಗ್ರೆಸ್ ಮೇಲೆ ತೆರಿಗೆ ಭಯೋತ್ಪಾದನಾ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 'ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಮೇಲೆ ಅಸ್ತ್ರ ಪ್ರಯೋಗ ಮಾಡುತ್ತಿದೆ. ಬಿಜೆಪಿಯ ಮೇಲೆ ಏನು ಮಾಡುತ್ತಿಲ್ಲ. ಬಿಜೆಪಿ ಗೆ ಹಣ ನೀಡಿದವರ ಬಗ್ಗೆ ಯಾರು? ಏನು ? ಅನ್ನುವ ಮಾಹಿತಿ ಸಿಗುತ್ತಿಲ್ಲ. 42 ಕೋಟಿ ಇಂಥ ಹಣ ಬಿಜೆಪಿ ಗೆ ನೀಡಿರುವ ಬಗ್ಗೆ ವೆಬ್ ಸೈಟ್ ನಲ್ಲಿದೆ. 92 ಮಂದಿ ಹೆಸರಿಲ್ಲ. 1370 ಮಂದಿಯ ವಿಳಾಸವಿಲ್ಲ. ಆದರೆ, ಬಿಜೆಪಿ ಮೇಲೆ ಐ ಟಿ ಇಲಾಖೆ ಸುಮ್ಮನೇ ಕಣ್ಣು ಮುಚ್ಚಿಕೊಂಡು ಕೂತಿದೆ' ಎಂದು ಮತ್ತೊಬ್ಬ ಹಿರಿಯ ನಾಯಕ ಅಜಯ್ ಮಾಕೆನ್ ಹೇಳಿದ್ದಾರೆ.
ಇಂಥ ಕಾನೂನು ಉಲ್ಲಂಘನೆಗಳಿಗೆ, 4600 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣವನ್ನು ಬಿಜೆಪಿಗೆ ದಂಡವಾಗಿಯೇ ವಿಧಿಸಬೇಕಾಗುತ್ತದೆ. ಆದಾಯ ಇಲಾಖೆ ಯಾಕೆ ವಸೂಲಿ ಮಾಡುತ್ತಿಲ್ಲ. ಆದರೆ, ಕಾಂಗ್ರೆಸ್ ಗೆ ಸೀತಾರಾಮ್ ಕೇಸರಿ ಕಾಲಕ್ಕೆ ಸಂಬಂಧಪಟ್ಟಂತೆ ನೋಟಿಸ್ ನೀಡಲಾಗುತ್ತಿದೆ. ಬಂಗಾರು ಲಕ್ಷ್ಮಣ್ ಅವರ ಡೈರಿ ಬಗ್ಗೆ, ಯಡಿಯೂರಪ್ಪ ಡೈರಿ, ಜೈನ್ ಡೈರಿ ಬಗ್ಗೆ, ಸಹರಾ ಡೈರಿ ಬಗ್ಗೆ ಯಾಕೆ ಆದಾಯ ತೆರಿಗೆ ಇಲಾಖೆ ಏಕೆ ನೋಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಸರ್ಕಾರ ಸರಿಯಾಗಿ ಲೋಕಸಭೆ ಚುನಾವಣೆಯ ಸಮಯ ನೋಡಿಕೊಂಡೇ ನೋಟಿಸ್ ಕೊಟ್ಟು ನಮ್ಮ ಖಾತೆಗಳನ್ನು ಬಂದ್ ಮಾಡಿದೆ. ಐದು ವರ್ಷ ಯಾಕೆ ಈ ಕೆಲಸ ಮಾಡಿಲ್ಲ. ಈಗ ಯಾಕೆ ಬಂದ್ ಮಾಡಿದೆ' ಎಂದು ಕೇಳಿದ್ದಾರೆ.
ಬಿಜೆಪಿ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿದೆ. ಪಕ್ಷಕ್ಕೆ ಬಂದ ಹಣದ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಬೇಕು. ಅದು ಯಾರು? ಎಷ್ಟು ಹಣ ? ಅವರ ವಿಳಾಸ ಎಲ್ಲವೂ ನೀಡಬೇಕು. ಆದರೆ, ಇದೇ ಹೊತ್ತಲ್ಲಿ ಬಿಜೆಪಿ 42 ಕೋಟಿ ಹಣ ಪಡೆದಿದೆ. ಇದರ ಬಗ್ಗೆ ಆದಾಯ ತೆರಿಗೆ ಇಲಾಖೆ ಚಕಾರ ಎತ್ತುತ್ತಿಲ್ಲ ಕಾಂಗ್ರೆಸ್ ಪಕ್ಷಕ್ಕೆ ವಿಧಿಸಿದಂತೆ ದಂಡ ವಿಧಿಸಿದರೆ, ಬಿಜೆಪಿ ಯ ಮೇಲೆ 4200 ಕೋಟಿ ದಂಡ ವಿಧಿಸಬೇಕಾಗುತ್ತದೆ ಎಂದು ಮಾಕೆನ್ ಹೇಳಿದ್ದಾರೆ.
ದೆಹಲಿ ಹೈಕೋರ್ಟ್ ಅರ್ಜಿ ತಿರಸ್ಕರಿಸಿದ ಬೆನ್ನಲ್ಲಿಯೇ ಕಾಂಗ್ರೆಸ್‌ಗೆ 1700 ಕೋಟಿ ರೂಪಾಯಿ ಐಟಿ ನೋಟಿಸ್!
ರಾಜಕೀಯ ಪಕ್ಷಕ್ಕೆ ಬರುವ ದೇಣಿಗೆ ಬಗ್ಗೆ ಐಟಿ ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು. ಈ ಮಾಹಿತಿಯನ್ನು ಆಯೋಗ ತನ್ನ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡುತ್ತದೆ. ಕಾಂಗ್ರೆಸ್ ನೀಡಿದ ಮಾಹಿತಿ ವೆಬ್‌ಸೈಟ್ ನಲ್ಲಿ ಲಭ್ಯವಿದೆ. ಆದರೆ ಬಿಜೆಪಿ ಈ ಮಾಹಿತಿಯನ್ನು ಸಂಪೂರ್ಣವಾಗಿ ನೀಡಿಲ್ಲ. ದೇಣಿಗೆ ನೀಡಿದವರು ಹಾಗೂ ದೇಣಿಗೆ ಪಡೆದವರ ಹೆಸರು ಇರಬೇಕು . 2019 ರಲ್ಲಿ ಬಂದಿರುವ ದೇಣಿಗೆ ಮಾಹಿತಿ ನೀಡಿಲ್ಲ. 92 ಮಂದಿ ದೇಣಿಗೆ ನೀಡಿದವರ ಹೆಸರು ಹಂಚಿಕೊಂಡಿಲ್ಲ. 1980 ಜನರ ವಿಳಾಸವೂ ಇಲ್ಲ, ಹಣ ಯಾರು ಹೇಗೆ ನೀಡಿದರು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
15 ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್!
ಈ ಹಣಕ್ಕೆ ಯಾರ ಹೆಸರು ಇಲ್ಲಾ, ಯಾರು ನೀಡಿದ್ದಾರೆ ಅಂತಲೂ ಇಲ್ಲ. ಆದರೆ, ದುಡ್ಡು ಮಾತ್ರ ಬಿಜೆಪಿ ಪಕ್ಷಕ್ಕೆ ಬಂದಿದೆ. ಐಟಿ ಅಧಿಕಾರಿಗಳು ಬಿಜೆಪಿಗೂ ಸಹ ಹಣ ಎಲ್ಲಿಂದ ಬಂತು ಅಂತ ಕೇಳಬೇಕು. ಕಾಂಗ್ರೆಸ್ ಗೆ 14 ಲಕ್ಷ ಹಣ ದ ರೂಪದಲ್ಲಿ ಬಂದಿದ್ದಕ್ಕೆ ದಂಡ ಹಾಕಿದ್ದಾರೆ. ಅದೇ ರೀತಿ ಬಿಜೆಪಿಗೂ ಸಹ 4600 ಕೋಟಿ ದಂಡ ವಿಧಿಸಬೇಕು. ಕಾಂಗ್ರೆಸ್ ಗೆ ಪಾಲಿಸಿದ ನಿಯಮ ಪಾಲಿಸಿದರೆ, 4600 ಕೋಟಿ ದಂಡ ಬಿಜೆಪಿಗೆ ಆಗುತ್ತದೆ. ಐಟಿ ಈವರೆಗೂ ಈ ಬಗ್ಗೆ ಧ್ವನಿ ಎತ್ತಿಲ್ಲ. ಕಾಂಗ್ರೆಸ್ ನ ಮಾತ್ರ ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಇದು ಚುನಾವಣೆಯ ಸಮಾನ ಹೋರಾಟ ಹೇಗಾಗಿಲಿದೆ. ಡಿ.ಕೆ ಶಿವಕುಮಾರ್ ಡೈರಿ ಮೇಲೆ ತನಿಖೆ ನಡೆಸೋದಾದರೆ, ಯಡಿಯೂರಪ್ಪ ಡೈರಿ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಸಹರಾ ಬಿರ್ಲಾ ಡೈರಿಯಲ್ಲಿ ಮೋದಿ ಹೆಸರು ಇದೆ. ಯಡಿಯೂರಪ್ಪ ಡೈರಿಯಲ್ಲಿ ಬಿಜೆಪಿ ನಾಯಕರಿಗೆ ನೀಡಿದ ಹಣದ ಮಾಹಿತಿ ಇದೆ. ಆದರೂ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಐಟಿಗೆ ಬಿಜೆಪಿಯ ಯಾವುದೇ ತಪ್ಪು ಕಾಣಿಸುತ್ತಿಲ್ಲ ಎಂದು ದೂರಿದ್ದಾರೆ.