ಲಾಕ್‌ಡೌನ್‌, ಮಾಸ್ಕ್‌, ಸಾಮಾಜಿಕ ಅಂತರ: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕುಂಠಿತ!

By Suvarna NewsFirst Published Jun 20, 2021, 12:21 PM IST
Highlights

* ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕುಂಠಿತ

* ಲಾಕ್‌ಡೌನ್‌, ಮಾಸ್ಕ್‌, ಸಾಮಾಜಿಕ ಅಂತರದ ಎಫೆಕ್ಟ್

* ಸೋಂಕಿಗೆ ಮಕ್ಕಳು 15 ತಿಂಗಳಿಂದ ತೆರೆದುಕೊಂಡಿಲ್ಲ

* ಹೀಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿ ಆಗಿಲ್ಲ

* ಈಗ ಅನ್‌ಲಾಕ್‌ ವೇಳೆ ಅಪಾಯದ ಸಾಧ್ಯತೆ ಹೆಚ್ಚು: ತಜ್ಞರು

ನವದೆಹಲಿ(ಜೂ.20): ಕೊರೋನಾ 3ನೇ ಅಲೆಯ ವೇಳೆ ಕೊರೋನಾ ವೈರಸ್‌ ಮಕ್ಕಳ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೇ, ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿರುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್‌ನ ಮಕ್ಕಳ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರೋಗನಿರೋಧಕ ಶಕ್ತಿ ಕುಂದಿರುವ ಕಾರಣ ಅವರು ಅನ್‌ಲಾಕ್‌ ಆದ ನಂತರ ಹೊರಗೆ ಸಂಚರಿಸಿದರೆ ಅಸ್ವಾಸ್ಥ್ಯಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

3ನೇ ಅಲೆಯಲ್ಲಿ ರಾಜ್ಯದ 1-1.5 ಲಕ್ಷ ಮಕ್ಕಳಿಗೆ ಸೋಂಕು: ಡಾ|ದೇವಿಶೆಟ್ಟಿ ಸಮಿತಿ ವರದಿ!

ಕಳೆದ 15 ತಿಂಗಳಿಂದ ಲಾಕ್‌ಡೌನ್‌ ಸ್ಥಿತಿ ಇದೆ. ಕೊರೋನಾ ಸಂದರ್ಭದಲ್ಲಿ ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸಿದ್ದರಿಂದ ಮಕ್ಕಳು ಸೋಂಕಿನಿಂದ ದೂರ ಉಳಿದಿದ್ದರು. ಆದರೆ, ಜನಜೀವನ ಸಹಜಸ್ಥಿತಿಗೆ ಬಂದ ಬಳಿಕ ಗುಂಪುಗೂಡುವಿಕೆ ಮತ್ತು ಮಾಸ್ಕ್‌ ಧರಸದೇ ಇರುವ ಕಾರಣಕ್ಕೆ ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಮನವಿಗೆ ಸುಪ್ರೀಂ ಅಸ್ತು, ಆಕ್ಸಿಜನ್ ಪೂರೈಕೆಗಾಗಿ ಟಾಸ್ಕ್​ಫೋರ್ಸ್ ರಚನೆ

ಇದೇ ವೇಳೆ, 1 ವರ್ಷದ ಒಳಗಿನ ಮಕ್ಕಳಲ್ಲಿ ಉಸಿರಾಟ ಸಂಬಂಧಿತ ಸೋಂಕು (ಆರ್‌ಎಸ್‌ವಿ) ಸಾಮಾನ್ಯವಾಗಿ ಮೊದಲು ಕಂಡುಬರುತ್ತಿತ್ತು. ಆದರೆ ಮಕ್ಕಳು ಮನೆಯಲ್ಲೇ 15 ತಿಂಗಳು ಕಾಲ ಕಳೆದ ಕಾರಣ ಈ ಸೋಂಕಿಗೆ ತುತ್ತಾಗಿಲ್ಲ. ಇದರ ಪರಿಣಾಮವಾಗಿ ಅವರ ದೇಹದಲ್ಲಿ ರೋಗಕಾರಕಗಳ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಉತ್ಪತ್ತಿ ಆಗಿಲ್ಲ. ಅನ್‌ಲಾಕ್‌ ಬಳಿಕ ಈ ಸೋಂಕು ಮತ್ತೆ ಹೆಚ್ಚಬಹುದು. ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಏಕೆಂದರೆ 1 ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಲಸಿಕೆ ಇಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!