ಭಾರತದ ಅತ್ಯಂತ ವಾಸಯೋಗ್ಯ ನಗರ ಬೆಂಗಳೂರು, ಚೆನ್ನೈಗೆ 2ನೇ ಸ್ಥಾನ!

By Suvarna NewsFirst Published Jun 20, 2021, 11:56 AM IST
Highlights

* ವಾಸಿಸಲು ಅತ್ಯಂತ ಯೋಗ್ಯ ನಗರ, ಬೆಂಗಳೂರು ದೇಶದಲ್ಲೇ ಟಾಪ್

* ಜ್ಞಾನ ಹಾಗೂ ಪರಿಸರ ಕೇಂದ್ರ ಬಿಡುಗಡೆ ಮಾಡಿರುವ 'ಈಸ್ ಆಫ್ ಲಿವಿಂಗ್ ಇಂಡೆಕ್ಸ್ 2020'

* ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ತಮಿಳುನಾಡಿನ ಚೆನ್ನೈ

ಬೆಂಗಳೂರು(ಜೂ.20): ರಾಜ್ಯ ರಾಜಧಾನಿ ಬೆಂಗಳೂರು... ದಿನ ಬೆಳಗಾದಂತೆ ಸಿಗುವ ಟ್ರಾಫಿಕ್, ಹೊಗೆ, ಧೂಳು, ಕಾಂಕ್ರೀಟ್ ಕಾಡು ಹೀಗೆಂದು ಅನೇಕರು ದೂರುತ್ತಾರೆ. ಆದರೀಗ ಇದೇ ಬೆಂಗಳೂರು ದೇಶದಲ್ಲಿ ವಾಸಿಸಲು ಅತ್ಯಂತ ಯೋಗ್ಯವಾದ ರಾಜ್ಯ ರಾಜಧಾನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂಬುವುದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಚಾರ.

ಕೋಲಾರದಿಂದ 250 ಟನ್ ಮಾವು ಹೊತ್ತು ದೆಹಲಿಗೆ ತೆರಳಿದ ಕರ್ನಾಟಕದ ಮೊದಲ ಕಿಸಾನ್ ರೈಲು!

ಹೌದು ವಿಜ್ಞಾನ ಹಾಗೂ ಪರಿಸರ ಕೇಂದ್ರ ಬಿಡುಗಡೆ ಮಾಡಿರುವ 'ಈಸ್ ಆಫ್ ಲಿವಿಂಗ್ ಇಂಡೆಕ್ಸ್ 2020' ಅನ್ವಯ, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಭಾರತದಲ್ಲಿ ಅತ್ಯಂತ ವಾಸಿಸಲು ಯೋಗ್ಯ(ಜೀವನಯೋಗ್ಯ) ನಗರ ಎಂಬ ಹೆಗ್ಗಳಿಕೆ ಗಳಿಸಿದೆ. ಈ ಪಟ್ಟಿಯಲ್ಲಿ ತಮಿಳುನಾಡಿನ ಚೆನ್ನೈ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಮೂರನೇ, ಒಡಿಶಾ ರಾಜಧಾನಿ ಭುವನೇಶ್ವರ ನಾಲ್ಕನೇ ಹಾಗೂ ಮಹಾರಾಷ್ಟ್ರ ರಾಜಧಾನಿ ಮುಂಬೈ ಐದನೇ ಸ್ಥಾನದಲ್ಲಿದೆ.

ಸಿಎಸ್‌ಇ ನಡೆಸಿದ ಈ ಸಮೀಕ್ಷೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಆರನೇ ಸ್ಥಾನದಲ್ಲಿದೆ. ಅಲ್ಲದೇ ಆರ್ಥಿಕ ಸಾಮರ್ಥ್ಯದಲ್ಲೂ ದೆಹಲಿ ಕಳಪೆ ಸಾಧನೆ ಹೊಂದಿದೆ. 

ಐದು ವಿಭಾಗಗಳಲ್ಲಿ ನಗರಗಳ ಸಮೀಕ್ಷೆ

ಒಟ್ಟು ಐದು ವಿಭಾಗಗಳಲ್ಲಿ ನಗರಗಳ ಸಮೀಕ್ಷೆಗೆ ನಡೆದಿತ್ತು. ಇದರಲ್ಲಿ ಅತ್ಯಂತ ವಾಸಿಸಲು ಯೋಗ್ಯವಾದ ಸೂಚ್ಯಂಕದಲ್ಲಿ ಬೆಂಗಳೂರು 66.7 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಚೆನ್ನೈ 62.61 ಅಂಕ ಪಡೆದಿದೆ. ಇನ್ನು ಜೀವನ ಗುಣಮಟ್ಟ ವಿಚಾರದಲ್ಲಿ 60.84 ಅಂಕಗಳೊಂದಿಗೆ ಚೆನ್ನೈ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು 55.67 ಅಂಕ ಪಡೆದು ಎರಡನೇ ಹಾಗೂ ಭೋಪಾಲ್ ಮೂರನೇ ಸ್ಥಾನದಲ್ಲಿದೆ. 

ಅಶ್ಲೀಲ ಭಾಷೆ ಬಳಸಿ ಲೈವ್ ಕಾಮೆಂಟರಿ; ಯೂಟ್ಯೂಬರ್ ದಂಪತಿ ಅರೆಸ್ಟ್

ಆರ್ಥಿಕತೆಯ ಸಾಮರ್ಥ್ಯದಲ್ಲೂ ಟಾಪ್

ಇನ್ನು ಆರ್ಥಿಕತೆಯ ಸಾಮರ್ಥ್ಯದಲ್ಲೂ ಬೆಂಗಳೂರು 100ಕ್ಕೆ 78.82 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಈ ವಿಚಾರದಲ್ಲಿ ಬೇರೆ ಯಾವ ರಾಜಧಾನಿಯೂ ಬೆಂಗಳೂರಿನ ಆಸುಪಾಸಿಲ್ಲ. 50.73 ಅಂಕಗಳನ್ನು ಪಡೆದಿರುವ ದೆಹಲಿ ಎರಡನೇ ಸ್ಥಾನದಲ್ಲಿದೆ.

click me!