ಅತಿ ಮೊಬೈಲ್‌ ಬಳಕೆಯಿಂದ ವೈವಾಹಿಕ ಸಂಬಂಧಕ್ಕೆ ಧಕ್ಕೆ!

By Kannadaprabha News  |  First Published Dec 13, 2022, 7:55 PM IST
  • ಅತಿ ಮೊಬೈಲ್‌ ಬಳಕೆಯಿಂದ ವೈವಾಹಿಕ ಸಂಬಂಧಕ್ಕೆ ಧಕ್ಕೆ!
  • ಶೇ.88 ವಿವಾಹಿತ ಭಾರತೀಯರ ಅಭಿಪ್ರಾಯ
  • ಬೆಂಗಳೂರು ಸೇರಿ 8 ನಗರಗಳಲ್ಲಿ ಅಧ್ಯಯನ

ಪಿಟಿಐ ನವದೆಹಲಿ (ಡಿ.13) : ಅತಿಯಾದ ಸ್ಮಾರ್ಚ್‌ಫೋನ್‌ ಬಳಕೆಯು ಗಂಡ-ಹೆಂಡಿರ ವೈವಾಹಿಕ ಸಂಬಂಧವನ್ನೇ ಹಾಳು ಮಾಡುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಶೇ.88 ವಿವಾಹಿತ ಭಾರತೀಯರು ಮಿತಿಮೀರಿದ ಸ್ಮಾರ್ಟ್ ಫೋನ್‌ ಬಳಕೆ ತಮ್ಮ ಸಂಬಂಧಕ್ಕೆ ಧಕ್ಕೆ ತಂದಿದೆ ಎಂದು ಒಪ್ಪಿಕೊಂಡಿದ್ದಾರೆ.

ಖ್ಯಾತ ಸ್ಮಾರ್ಟ್ ಫೋನ್‌ ಉತ್ಪಾದಕ ‘ವಿವೋ’, ‘ಸ್ಮಾರ್ಟ್ ಫೋನ್‌ ಗಳು ಮತ್ತು ಮಾನವ ಸಂಬಂಧಗಳ ಮೇಲೆ ಅವುಗಳ ಪ್ರಭಾವ 2022’ ಎಂಬ ವಿಷಯದ ಮೇಲೆ ‘ಸ್ವಿಚ್‌ ಆಫ್‌’ ಹೆಸರಿನ ಅಧ್ಯಯನ ನಡೆಸಿದೆ. ಬೆಂಗಳೂರು ಸೇರಿದಂತೆ ದೇಶದ 8 ಪ್ರಮುಖ ನಗರಗಳಲ್ಲಿ 1,000 ಗ್ರಾಹಕರ ಸಮೀಕ್ಷೆಯನ್ನು ಆಧರಿಸಿ ಈ ಅಧ್ಯಯನವನ್ನು ನಡೆಸಲಾಗಿದೆ.

Latest Videos

undefined

ಅತಿಯಾಗಿ ಸ್ಮಾರ್ಟ್‌ಫೋನ್ ಬಳಸಿದ್ರೆ ಅಪಾಯ ತಪ್ಪಿದ್ದಲ್ಲ, ಎಚ್ಚರವಿರಲಿ

ಇದರಲ್ಲಿ ಶೇ.67 ಜನರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುತ್ತಿರುವಾಗಲೂ ತಮ್ಮ ಜತೆಗೆ ಫೋನ್‌ ಇರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಶೇ.89ರಷ್ಟುಜನರು, ಸ್ಮಾರ್ಟ್ ಫೋನ್‌ ಪ್ರಭಾವದಿಂದ ಅಂದುಕೊಂಡಿದ್ದಕ್ಕಿಂತ ಕಡಿಮೆ ಸಮಯವನ್ನು ಸಂಗಾತಿಗಳ ಜತೆ ಕಳೆಯುತ್ತೇವೆ ಎಂದಿದ್ದಾರೆ.

ಶೇ.84ರಷ್ಟುಜನರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಆದರೆ, ಶೇ.88 ಜನರು ಸ್ಮಾರ್ಟ್ ಫೋನ್‌ ಗಳ ಹೆಚ್ಚಿನ ಬಳಕೆಯು ತಮ್ಮ ಸಂಗಾತಿಯೊಂದಿಗಿನ ಸಂಬಂಧಕ್ಕೆ ಧಕ್ಕೆ ಬರುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಅಧ್ಯಯನ ಹೇಳಿದೆ.

ಶೇ.90ರಷ್ಟುಜನರು ತಮ್ಮ ಸಂಗಾತಿಯೊಂದಿಗೆ ಅರ್ಥಪೂರ್ಣ ಸಂಭಾಷಣೆಗಳಿಗೆ ಹೆಚ್ಚು ವಿರಾಮ ಸಮಯವನ್ನು ವಿನಿಯೋಗಿಸಲು ಬಯಸುತ್ತಾರೆ. ಆದರೆ ಅವರು ದಿನಕ್ಕೆ ಸರಾಸರಿ 4.7 ಗಂಟೆಗಳನ್ನು ಸ್ಮಾರ್ಟ್ ಫೋನ್‌ ನಲ್ಲಿ ಕಳೆಯುತ್ತಾರೆ. ಶೇ.73 ಜನರು, ತಮ್ಮ ಸಂಗಾತಿಯು ತಮ್ಮೊಂದಿಗೆ ಸಮಯ ಕಳೆಯುವ ಬದಲು ಫೋನ್‌ನಲ್ಲಿ ತಮ್ಮ ಅತಿಯಾದ ಆಸಕ್ತಿಯ ಹೊಂದಿರುತ್ತಾರೆ ಎಂದು ದೂರು ನೀಡಿದ್ದಾರೆ.

ಸ್ಮಾರ್ಟ್ ಫೋನ್‌ ನಲ್ಲಿ ಮುಳುಗಿರುವಾಗ ಸಂಗಾತಿಯು ಏನನ್ನಾದರೂ ಕೇಳಿದರೆÜ ಶೇ.70ರಷ್ಟುಕಿರಿಕಿರಿ ಅನುಭವಿಸುತ್ತಾರೆ. ಶೇ.66ರಷ್ಟುಜನರು ಸ್ಮಾರ್ಟ್ ಫೋನ್‌ ಗಳ ಅತಿಯಾದ ಬಳಕೆಯು ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ದುರ್ಬಲಗೊಳಿಸಿದೆ ಎಂದು ಭಾವಿಸುತ್ತಾರೆ

ಶೇ.88 ರಷ್ಟುಜನರು ತಮ್ಮ ಬಿಡುವಿನ ಸಮಯವನ್ನು ಸ್ಮಾರ್ಟ್ ಫೋನ್‌ ನಲ್ಲಿ ಕಳೆಯುತ್ತಾರೆ, ಇದು ಅವರ ನಡವಳಿಕೆಯ ಭಾಗ. ಶೇ.90ರಷ್ಟುಜನರು ಸ್ಮಾರ್ಚ್‌ಫೋನು, ವಿಶ್ರಾಂತಿಗೆ ಹೆಚ್ಚು ಆದ್ಯತೆ ನೀಡುವ ಮಾರ್ಗವಾಗಿದೆ ಎಂದು ಭಾವಿಸಿದ್ದಾರೆ.

ಅತಿಯಾಗಿ ಮೊಬೈಲ್ ಬಳಸುತ್ತಿದ್ದದಕ್ಕೆ ಪಾಸ್‌ವರ್ಡ್ ಹಾಕಿದ ತಮ್ಮ, ಮನನೊಂದ ಅಕ್ಕ ನೇಣಿಗೆ ಶರಣು!

ಸರಾಸರಿಯಾಗಿ, ಪ್ರತಿ ಸ್ಮಾರ್ಟ್ ಫೋನ್‌ ಬಳಕೆದಾರರಿಗೆ ದಿನಕ್ಕೆ 1.5 ಗಂಟೆಗಳ ವಿರಾಮ ಸಮಯವಿದೆ. ಅವರಲ್ಲಿ ಹೆಚ್ಚಿನವರು ತಮ್ಮ ಬಿಡುವಿನ ವೇಳೆಯನ್ನು ಕುಟುಂಬದೊಂದಿಗೆ ಕಳೆಯಲು ಇಷ್ಟಪಡುತ್ತಾರೆ. ಆದಾಗ್ಯೂ, ಅವರು ಕುಟುಂಬದೊಂದಿಗೆ ಸಮಯ ಕಳೆಯುವಾಗ ತಮ್ಮ ಸ್ಮಾರ್ಟ್ ಫೋನ್‌ ಒಯ್ಯುತ್ತಾರೆ.

click me!