
ಸಾಮಾನ್ಯವಾಗಿ ನಾವು ಮತ ಹಾಕಿದ ಜನಪ್ರತಿನಿಧಿ ಗೆದ್ದು ಬಂದರೆ ಅವರ ಬಳಿ ನಾವು ಕೇಳುವುದು ಕ್ಷೇತ್ರದ ಅಭಿವೃದ್ಧಿ ಮಾಡಿ ಎಂದು, ಚರಂಡಿ, ನೀರಿನ ವ್ಯವಸ್ಥೆ ಮೂಲ ಸೌಕರ್ಯ, ರಸ್ತೆಗಳನ್ನು ಸರಿಪಡಿಸಿ ಎಂಬುದೇ ಬಹುತೇಕ ಜನರ ಬೇಡಿಕೆ. ಆದರೆ ಉತ್ತರ ಪ್ರದೇಶದ ಮಹೋಬಾದ ಯುವಕನೋರ್ವ ಅಲ್ಲಿನ ಶಾಸಕರ ಬಳಿ ತನಗೆ ಮದುವೆ ಮಾಡಿಸುವಂತೆ ಕೇಳಿದ್ದಾನೆ. ನಾನು ನಿಮಗೆ ವೋಟು ಹಾಕಿದ್ದೇನೆ. ಹೀಗಾಗಿ ನೀವು ನನಗೆ ಮದುವೆ ಮಾಡಿಸಬೇಕು ಎಂದು ಆತ ಶಾಸಕ ಬ್ರಿಜ್ ಭೂಷಣ್ ರಾಜಪೂತ್ ಅವರ ಬಳಿ ಮನವಿ ಮಾಡಿದ್ದಾನೆ. ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಚರಖಾರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬ್ರಿಜ್ ಭೂಷಣ್ ರಜಪೂತ್ ಅವರು ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವುದಕ್ಕಾಗಿ ಮಹೋಬಾದ ಪೆಟ್ರೋಲ್ ಬಂಕ್‌ಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್‌ಗೆ ಬಂದ ಶಾಸಕರನ್ನು ನೋಡಿದ ಅಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಶಾಸಕರ ಬಳಿ ಈ ವಿಚಿತ್ರ ಮನವಿ ಮಾಡಿದ್ದಾನೆ. ಶಾಸಕರೇ ನಾನು ನಿಮಗೆ ಮತ ಹಾಕಿದ್ದೇನೆ, ಅದಕ್ಕೆ ಪ್ರತಿಯಾಗಿ ಈಗ ನೀವು ನನಗೆ ಮದುವೆ ಮಾಡಿಸಬೇಕು, ನನಗೆ ಮದುವೆಯಾಗದೇ ಇರುವುದರಿಂದ ಬೇಸರವಾಗಿದೆ. ನಿಮ್ಮ ವಿರುದ್ಧ ಸ್ಪರ್ಧಿಸಿದ ಗೋಸ್ವಾಮಿ ಅವರ ಬಳಿಯೂ ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದೆ ಎಂದು ಯುವಕ ಶಾಸಕ ರಜಪೂತ್ ಬಳಿ ಕೇಳಿಕೊಂಡಿದ್ದಾನೆ.
ಅವಿವಾಹಿತ ಸಿಂಗಲ್ ಹುಡುಗರ ಕೆರಳುವಂತೆ ಮಾಡಿದ ಮೀಸೆ ಚಿಗುರದ ಮಕ್ಕಳ ಕಾರುಬಾರು
ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಈ ವಿಚಿತ್ರ ಬೇಡಿಕೆಯಿಂದ ಕೆಲ ಕಾಲ ಗಾಬರಿಯಾದಂತದ ಶಾಸಕರು ಸವರಿಸಿಕೊಂಡು ಆತನಿಗೆ ಹುಡುಗ ಹುಡುಕಿ ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ. ನಂತರ ಯುವಕನ ಸಂಬಳದ ಬಗ್ಗೆ ಶಾಸಕರು ಕೇಳಿದ್ದಾರೆ. ಈ ವೇಳೆ ತನಗೆ ತಿಂಗಳಿಗೆ 5 ಸಾವಿರ ಸಂಬಳ ಬರುತ್ತಿದ್ದು, ಮನೆ ಕಡೆ ಸ್ವಲ್ಪ ಭೂಮಿ ಇದೆ ಎಂದು ಹೇಳಿದ್ದಾನೆ. ಈ ವೇಳೆ ಮಾತನಾಡಿದ ಶಾಸಕರು, ನಿಮಗೆ ಶೀಘ್ರವೇ ಮದುವೆಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ನನಗೆ ಮತ ಹಾಕಿರುವುದರಿಂದ ಹುಡುಗಿ ಹುಡುಕಿ ಮದುವೆ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ