ಇದು ತಲೆತಗ್ಗಿಸುವ ಘಟನೆ, ಮಣಿಪುರ ಹಿಂಸಾಚಾರ ಕುರಿತು ಸದನದಲ್ಲಿ ಅಮಿತ್ ಶಾ ಉತ್ತರ!

Published : Aug 09, 2023, 07:21 PM ISTUpdated : Aug 09, 2023, 07:26 PM IST
ಇದು ತಲೆತಗ್ಗಿಸುವ ಘಟನೆ, ಮಣಿಪುರ ಹಿಂಸಾಚಾರ ಕುರಿತು ಸದನದಲ್ಲಿ ಅಮಿತ್ ಶಾ ಉತ್ತರ!

ಸಾರಾಂಶ

ಮಣಿಪುರದ ಘಟನೆ ಕುರಿತು ಪ್ರಧಾನಿ ಮೋದಿ ಮೌನವಹಿಸಿದ್ದಾರೆ ಎಂದು ಭಾರಿ ಪ್ರತಿಭಟನೆ, ಅವಿಶ್ವಾಸ ನಿರ್ಣಯ ಮಂಡಿಸಿದ ಪ್ರತಿಪಕ್ಷಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಿದ್ದಾರೆ. ಸದನದಲ್ಲಿ ಮಣಿಪುರ ಘಟನೆ ಹಾಗೂ ಶಾಂತಿ ಸ್ಥಾಪನೆ ಕ್ರಮಗಳನ್ನು ವಿವರಿಸಿದರು. ಇದೇ ವೇಳೆ ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಹಿಂಸಾಚಾರ ಹಾಗೂ ಸರ್ಕಾರದ ನಿರುತ್ತರವನ್ನು ನೆನಪಿಸಿದ್ದಾರೆ.  

ನವದೆಹಲಿ(ಆ.09) ದೇಶವನ್ನೇ ಬೆಚ್ಚಿ ಬೀಳಿಸಿದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿ ಮಣಿಪುರದ ಘಟನೆ ಕುರಿತು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಇದೇ ವಿಚಾರವಾಗಿ ಸಂಸತ್ತಿನಲ್ಲಿ ಗದ್ದಲವೇ ಎದ್ದಿತ್ತು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ವಿಪಕ್ಷಗಳು ಮಾಡಿತ್ತು. ಆರೋಪ, ಪ್ರತ್ಯಾರೋಪಗಳ ನಡುವೆ ಅಮಿತ್ ಶಾ, ಮಣಿಪುರ ಘಟನೆ ಕುರಿತು ಮಾತನಾಡಿದ್ದಾರೆ. ಮಣಿಪುರದಲ್ಲಿ ನಡೆದಿರುವ ಹಿಂಸಾಚಾರ ಘಟನೆ ಎಲ್ಲರೂ ತಲೆ ತಗ್ಗಿಸುವ ಘಟನೆಯಾಗಿದೆ.  ಈ ಘಟನೆಗೆ ಯಾರ ಸಹಮತವೂ ಇಲ್ಲ. ಮಣಿಪುರ ಘಟನೆಗೆ ನಾವು ಸಿದ್ದರಿದ್ದೇವು. ಆದರೆ ವಿಪಕ್ಷಗಳು ಗದ್ದಲದಲ್ಲೇ ಕಾಲ ಕಳೆಯಿತು. ಮೊದಲು ನಾನು ಉತ್ತರ ಕೊಡುತ್ತಿದ್ದೆ, ಸಮಾಧಾನ ಆಗದಿದ್ದರೆ, ಪ್ರಧಾನಿ ಕೊಡುತ್ತಿದ್ದರು ಎಂದು ಅಮಿತ್ ಶಾ ಹೇಳಿದ್ದರು.

ಮಣಿಪುರದಲ್ಲಿ ಕಳೆದ 6 ವರ್ಷಗಳಿಂದ ಬಿಜೆಪಿ ಸರ್ಕಾರ ಇದೆ. ಒಂದೇ ಒಂದು ದಿನ ಕರ್ಫ್ಯೂ ಹಾಕಿಲ್ಲ. ಬಂದ್ ಮಾಡಿಲ್ಲ. ಹಿಂಸಾಚಾರ ನೆಡೆದಿಲ್ಲ. ಆದರೆ ಪಕ್ಕದಲ್ಲಿ ಮ್ಯಾನ್ಮರ್‌ನಲ್ಲಿ ಮಿಲಿಟರಿ ಆಡಳಿತವಿದೆ. ಹೀಗಾಗಿ ಮ್ಯಾನ್ಮಾರ್ ಗಡಿಯಿಂದ ಜನರು ನುಸುಳಿ ಭಾರತಕ್ಕೆ ಬಂದು ದಂಗೆ ಎಬ್ಬಿಸುತ್ತಿದ್ದಾರೆ. ಒಂದು ಆದೇಶದ ವಿರುದ್ಧ ಆರಂಭಗೊಂಡ ಪ್ರತಿಭಟನೆ, ಗಲಭೆಯಾಗಿ ಹಿಂಸಾಚಾರ ಜೋರಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮಲ್ಲಿಕಾರ್ಜುನ್‌ ಖರ್ಗೆ ಬಳಿಕ ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ರಾಹುಲ್‌ ಗಾಂಧಿ!

ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿ ಹತ್ತು ಹಲವು ಘಟನೆಗಳು ನಡೆದಿದೆ. ಹಿಂಸೆ ಆಗಿದೆ. ಆದರೆ ಒಂದೇ ಒಂದು ಬಾರಿ ಗೃಹ ಸಚಿವರು ಉತ್ತರ ಕೊಟ್ಟಿಲ್ಲ. ಈಗ ಪ್ರಧಾನಿ ಬದಲು ನಾನೇ ಕೊಡುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.  ಮಣಿಪುರ ಹಿಂಸಾಚಾರ ನಿಯಂತ್ರಣಕ್ಕೆ ತಕ್ಷಣವೇ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಡಿಜಿಪಿ, ಮುಖ್ಯ ಕಾರ್ಯದರ್ಶಿ ಬದಲಾಯಿಸಿದ್ದೇವೆ. ಈ ಪರಿಸ್ಥಿತಿಯಲ್ಲಿ ರಾಜಕಾರಣ ಉತ್ತಮವಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಮಣಿಪುರ ಮಹಿಳೆಯ ವಿವಸ್ತ್ರ ಮೆರವಣಿ ವಿಚಾರ ಅತ್ಯಂತ ಕೆಟ್ಟ ಘಟನೆ. ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು. ಆದರೆ ಅಧಿವೇಶನಕ್ಕೆ ಎರಡು ದಿನ ಮುಂಚೆ ಈ ವಿಡಿಯೋ ಹೇಗೆ ಹೊರಗೆ ಬಂತು. ಇಂತಹ ವಿಡಿಯೋಗಳಿದ್ದರೆ, ಪೊಲೀಸರಿಗೆ ಕೊಡಬೇಕೋ ಬೇಡವೋ? ಇದೀಗ ಪ್ರತಿ ದಿನ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದ್ದೇನೆ.  ಇದೀಗ ಹಿಂಸೆ ಕಡಿಮೆಯಾಗಿದೆ. ಶಾಲೆಗಳು ಆರಂಭಗೊಂಡಿದೆ. ಮೆಡಿಕಲ್, ಆಹಾರ ಪದಾರ್ಥ ತಲುಪುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.  

ಮಣಿಪುರದ ಮೈತೇಯಿ ಮತ್ತು ಕುಕ್ಕಿ ಸೇರಿ ಕೂತು ಶಾಂತಿ ಮಾತುಕತೆ ನಡೆಸಬೇಕಿದೆ. ಹಿಂಸೆಗೆ ಹಿಂಸೆ ಉತ್ತರವಲ್ಲ. ಶಾಂತಿಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರರ ಕಂಡುಕೊಳ್ಳಲು ಸಾಧ್ಯವಿದೆ. ಶಾಂತಿ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಎಲ್ಲಾ ಪ್ರಯತ್ನ ಮಾಡಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

 

ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಲೆ ಮಾಡಿದ್ದೀರಿ, ಲೋಕಸಭೆಯಲ್ಲಿ ರಾಹುಲ್‌ ಕೆಂಡ!

ಕೋಮು ಸಂಘರ್ಷ, ಹಿಂಸಾಚಾರಗಳು ಅತೀ ಹೆಚ್ಚು ನಡೆದಿರುವುದು ಕಾಂಗ್ರೆಸ್ ಆಡಳಿತ ಅವಧಿಯಲ್ಲಿ. ಬಿಜೆಪಿ ದೇಶದ ಮೂಲೆ ಮೂಲೆಗೆ ಮೂಲಸೌಕರ್ಯ ಒದಗಿಸಿ ಗ್ರಾಮ ಗ್ರಾಮಗಳನ್ನು ಭಾರತದ ಮುಖ್ಯವಾಹನಿಗೆ ತರುವ ಪ್ರಯತ್ನ ಮಾಡಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮೋದಿ ಸರ್ಕಾರ ಬಂದ ಮೇಲೆ ದೇಶಕ್ಕೆ ಶುದ್ದ ಕುಡಿಯುವ ನೀರು, ಶೌಚಾಲಯ, ಡಿಬಿಟಿ ಮೂಲಕ ಫಲಾನುಭವಿಗಳಿಗೆ ನೇರ ಹಣ ನೀಡಿದ್ದೇವೆ. ರೈತರ ಬಗ್ಗೆ ಮಾತಾಡುವ ಕಾಂಗ್ರೆಸ್ ಬರೀ 70 ಸಾವಿರ ಕೋಟಿ ಸಾಲ ಮನ್ನ ಮಾಡಿ ಲಾಲಿಪಪ್ ನೀಡಿದೆ ಎಂದು ಆರೋಪಿಸಿದರು. ಆದರೆ ಮೋದಿ ಸರ್ಕಾರ ಅವರ ಖಾತೆಗಳಿಗೆ 2.40 ಲಕ್ಷ ಹಣ ಅವರ ಖಾತೆಗೆ ನೇರ ಹಣ ಹಾಕಿ ಋಣಮುಕ್ತರಾಗಿಸಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!