ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಲೆ ಮಾಡಿದ್ದೀರಿ, ಲೋಕಸಭೆಯಲ್ಲಿ ರಾಹುಲ್ ಕೆಂಡ!
ಕೇಂದ್ರ ಸರ್ಕಾರ ಮಣಿಪುರದಲ್ಲಿ ಭಾರತ ಮಾತೆಯನ್ನು ಹತ್ಯೆ ಮಾಡಿದೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿಯ ಮಾತಿಗೆ ಸ್ವತಃ ಸ್ಪೀಕರ್ ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಆ.9): ಮಣಿಪುರದಲ್ಲಿ ಭಾರತ ಮಾತೆಯನ್ನು ಕೇಂದ್ರ ಸರ್ಕಾರ ಹತ್ಯೆ ಮಾಡಿದೆ. ಅಲ್ಲಿ ಹತ್ಯೆಯಾಗಿರುವುದು ಮಣಿಪುರದ ಅಸ್ಮಿತೆಯಲ್ಲಿ ಅಲ್ಲಿ ಹತ್ಯೆಯಾಗಿರುವುದು ಭಾರತ ಮಾತೆ. ಅವರ ರಾಜಕೀಯ ಮಣಿಪುರವನ್ನು ಕೊಂದಿಲ್ಲ, ಆದರೆ ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದೆ. ಕೇಂದ್ರ ಸರ್ಕಾರ ಮಣಿಪುರದಲ್ಲಿ ಭಾರತವನ್ನು ಹತ್ಯೆ ಮಾಡಿದ್ದಾರೆ. ನೀವು ದೇಶಭಕ್ತರಲ್ಲ, ದೇಶದ್ರೋಹಿಗಳು ಎಂದು ರಾಹುಲ್ ಗಾಂದಿ ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ ವಾಕ್‌ಪ್ರಹಾರ ಮಾಡಿದ್ದಾರೆ. ಭಾರತ ಮಾತೆಯನ್ನು ಹತ್ಯೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ ಮಾತಿಗೆ ಸ್ವತಃ ಸ್ಪೀಕರ್ ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ದೇಶದ ಸಂಸತ್ತು. ಇಲ್ಲಿ ಭಾರತ ಮಾತೆಯನ್ನು ಹತ್ಯೆ ಮಾಡಿದ್ದಾರೆ. ಎನ್ನುವ ಪದಗಳನ್ನೆಲ್ಲಾ ಬಳಸಬಾರದು. ನೀವು ಹಿರಿಯ ಸಂಸದರಾಗಿದ್ದೀರಿ ಇದರ ಬಗ್ಗೆ ಎಚ್ಚರಿಕೆ ಇರಲಿ ಎಂದು ಹೇಳಿದ್ದಾರೆ.
ಇವರು ಮಣಿಪುರದಲ್ಲಿ ಕೇವಲ ಮಣಿಪುರದ ಹತ್ಯೆ ಮಾಡಿಲ್ಲ. ಅವರು ಇಡೀ ಹಿಂದುಸ್ತಾನ್‌ನ ಹತ್ಯೆ ಮಾಡಿದ್ದಾರೆ. ಭಾರತ ಎನ್ನುವುದು ನಮ್ಮ ದನಿಯಾಗಿದೆ. ಭಾರತ ನಮ್ಮ ಜನರ ದನಿ, ಹೃದಯದ ಶಬ್ದವಾಗಿದೆ. ಮಣಿಪುರದಲ್ಲಿ ಇದೇ ದನಿಯನ್ನು ನೀವು ಹತ್ಯೆ ಮಾಡಿದ್ದೀರಿ. ಇದರ ಅರ್ಥ ಏನೆಂದರೆ, ನೀವು ಮಣಿಪುರದಲ್ಲಿ ಹತ್ಯೆ ಮಾಡಿರುವುದು ಭಾರತ ಮಾತೆಯನ್ನು. ಮಣಿಪುರದ ಜನರನ್ನು ಕೊಲೆ ಮಾಡುವ ಮೂಲಕ ನೀವು ಭಾರತ ಮಾತೆಯನ್ನು ಹತ್ಯೆ ಮಾಡಿದ್ದೀರಿ. ನೀವು ದೇಶದ್ರೋಹಿಗಳು. ನೀವೆಂದೂ ದೇಶಭಕ್ತರಾಗಲು ಸಾಧ್ಯವಿಲ್ಲ. ನೀವು ಮಣಿಪುರದಲ್ಲಿ ದೇಶದ ಹತ್ಯೆ ಮಾಡಿದ್ದೀರಿ ಎಂದು ಹೇಳಿದ್ದಾರೆ.
ರಾಹುಲ್‌ಗೆ ಮರಳಿ ಸಂಸತ್ ಸದಸ್ಯತ್ವ: ಇಂದು ನಿರ್ಧಾರ, ತಪ್ಪಿದಲ್ಲಿ ಕಾಂಗ್ರೆಸ್ ಸುಪ್ರೀಂಗೆ ಮೊರೆ?
ಇನ್ನು ರಾಹುಲ್ ಗಾಂಧಿ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾರತ ಮಾತೆಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳುತ್ತಿದ್ದರೆ, ಇಡೀ ವಿಪಕ್ಷಗಳ ಸಂಸದರು ಅದನ್ನು ಮೇಜು ಕುಟ್ಟಿ ಸ್ವಾಗತಿಸಿದ್ದಾರೆ. ಭಾರತ ಮಾತೆಗೆ ಅವರು ತೋರುವ ಗೌರವ ಇದರಲ್ಲಿ ಗೊತ್ತಾಗುತ್ತಿದೆ ಎಂದಿದ್ದಾರೆ. 'ನೀವು ಎಂದಿಗೂ ಭಾರತವಾಗಲು ಸಾಧ್ಯವಿಲ್ಲ. ನಿಮ್ಮ ಪಾಲಿಗೆ ಭಾರತ ಅನ್ನೋದು ಭ್ರಷ್ಟಾಚಾರ. ಭಾರತ ಎನ್ನುವುದು ಅರ್ಹತೆ, ನಿಮ್ಮಂಥ ಕುಟುಂಬ ರಾಜಕಾರಣ ಮಾಡುಬವವರಿಗೆ ಬ್ರಿಟಿಷರಿಗೆ ಭಾರತೀಯರು ಹೇಳಿದ್ದ ಕ್ವಿಟ್ ಇಂಡಿಯಾ ಮಾತನ್ನೇ ಹೇಳಬೇಕಾಗುತ್ತದೆ. ಕರಪ್ಶನ್ ಕ್ಷಿಟ್ ಇಂಡಿಯಾ, ಡೈನಾಸ್ಟಿ ಕ್ಷಿಟ್ ಇಂಡಿಯಾ. ಇಂಡಿಯಾದಲ್ಲಿ ಇಂದು ಅರ್ಹರಿಗೆ ಮಾತ್ರವೇ ಬೆಲೆ ಎಂದು ಹೇಳಿದ್ದಾರೆ.
ಸುಪ್ರೀಂನಿಂದ ಬಿಗ್ ರಿಲೀಫ್: ರಾಹುಲ್ ಗಾಂಧಿಗೆ ಭರ್ಜರಿ ಬಾಡೂಟ ಮಾಡಿ ಬಡಿಸಿದ ಲಾಲೂ ಪ್ರಸಾದ್