ಶಿವರಾತ್ರಿ ಮುಂಚೆ ಚುನಾವಣೆ ನಡೆದ್ರೆ ಮಾತ್ರ ಮೋದಿ ಪ್ರಧಾನಿ, ಇಲ್ದಿದ್ರೆ ಮಹಿಳೆಗೆ ಪ್ರಧಾನಿ ಪಟ್ಟ!

Published : Aug 09, 2023, 06:12 PM ISTUpdated : Aug 10, 2023, 10:23 AM IST
ಶಿವರಾತ್ರಿ ಮುಂಚೆ ಚುನಾವಣೆ ನಡೆದ್ರೆ ಮಾತ್ರ ಮೋದಿ ಪ್ರಧಾನಿ, ಇಲ್ದಿದ್ರೆ ಮಹಿಳೆಗೆ ಪ್ರಧಾನಿ ಪಟ್ಟ!

ಸಾರಾಂಶ

ಮುಂದಿನ ಶಿವರಾತ್ರಿ ಮುಂದೆ ಲೋಕಸಭೆ ಚುನಾವಣೆ ನಡೆದಲ್ಲಿ ಮಾತ್ರವೇ ಪ್ರಧಾನಿ ನರೇಂದ್ರ ಮೋದಿ ಅಧಿಕಾರವನ್ನು ಉಳಿಸಿಕೊಳ್ಳುತ್ತಾರೆ. ಇಲ್ಲದೇ ಇದ್ದಲ್ಲಿ ಮಹಿಳೆಗೆ ಪ್ರಧಾನಿ ಪಟ್ಟ ಸಿಕಲಿದೆ ಎಂದು ಶನೇಶ್ವರ ದೇವಸ್ಥಾನದ ಧರ್ಮದರ್ಶಿ ಯಶವಂತ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ.  

ತುಮಕೂರು (ಆ.9): ಕರ್ನಾಟಕದಲ್ಲಿ ಬಿಎಸ್‌ವೈ, ಬಿಜೆಪಿಯ ಕುಸಿತ ಹಾಗೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ಬರಲಿದೆ ಎನ್ನುವ ಮಹಾ ಭವಿಷ್ಯ ನುಡಿದಿದ್ದ ಶನೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ. ಯಶವಂತ್‌ ಗುರೂಜಿ  ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲ ಮೂಡಿಸುವಂಥ ಕಾಲಜ್ಞಾನ ನುಡಿದಿದ್ದಾರೆ. ಅವರು ಹೇಳಿರುವ ಪ್ರಕಾರ ಮುಂದಿನ ಶಿವರಾತ್ರಿಯ ಒಳಗಾಗಿ ಲೋಕಸಭೆ ಚುನಾವಣೆ ನಡೆದಲ್ಲಿ ಮಾತ್ರವೇ ಪ್ರಧಾನಿ ನರೇಂದ್ರ ಮೋದಿ ಅಧಿಕಾರವನ್ನು ಉಳಿಸಿಕೊಂಡು ಮೂರನೇ ಬಾರಿಗೆ ಅಧಿಕಾರ ಹಿಡಿಯಲಿದ್ದಾರೆ. ಹಾಗೇನಾದರೂ, ಶಿವರಾತ್ರಿ ನಂತರ ಲೋಕಸಭೆ ಚುನಾವಣೆ ನಡೆದಲ್ಲಿ ದೇಶದ ಪ್ರಧಾನಿ ಮಹಿಳೆ ಆಗಿರಲಿದ್ದಾರೆ ಎಂದು ಯಶವಂತ ಗುರೂಜಿ ಭವಿಷ್ಯ ನುಡಿಸಿದ್ದಾರೆ. ಕಾಲಜ್ಞಾನ ಪ್ರಕಾರ ಮುಂದಿನ ಪ್ರಧಾನಿ ಆಗೋ ಯೋಗ ಒಬ್ಬ ಮಹಿಳೆಗೆ ಇದೆ ಎಂದು ಕಾಲಜ್ಞಾನಿ ಡಾ. ಯಶವಂತ್‌ ಗುರೂಜಿ ಹೇಳಿದ್ದಾರೆ. ತುಮಕೂರಿನ ನೊಣವಿನಕೆರೆಯಲ್ಲಿ ಯಶವಂತ್‌ ಗುರೂಜಿ ಭವಿಷ್ಯ ನುಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇದೇ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ನಿಜವಾಗಿತ್ತು. ಇದೀಗ ರಾಷ್ಟ್ರ ರಾಜಕಾರಣದ ಬಗ್ಗೆ ಇವರು ಭವಿಷ್ಯ ಹೇಳಿದ್ದಾರೆ.

ಇಂದಿರಾಗಾಂಧಿ ನಂತರ ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನ ಮುಂದಿನ ಬಾರಿ ಮಹಿಳೆ ಹಿಡಿಯಲಿದ್ದಾರೆ. ಮಹಾಶಿವರಾತ್ರಿ ಹಬ್ಬದ ನಂತರ ಒಂದು ಶಕ್ತಿ ಅಂದರೆ ಒಂದು ಸ್ತ್ರೀ ದೇಶವನ್ನ ಆಳಿದ್ದಾರೆ. ಹಾಗೆಂದು ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನ ಹೇಳುತ್ತಿದೆ. 35 ವರ್ಷಗಳ ಹಿಂದಿನ ದಿನಮಾನಗಳಲ್ಲಿ ಒಂದು ಸ್ತ್ರಿ ದೇಶವನ್ನ ಆಳಿರುತ್ತಾಳೆ. ಮಹಾಶಿವರಾತ್ರಿ ನಂತರ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಈ ದೇಶವನ್ನ ಒಂದು ಶಕ್ತಿ ಅಂದರೆ ಒಂದು ಸ್ತ್ರೀ ಮಹಾಶಿವರಾತ್ರಿ ನಂತರ ದೇಶವನ್ನು ಆಳಲಿದ್ದಾರೆ. ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ. ಮಿತ್ರಗಳ ಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತೆ. ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಮಣದ ಹಬ್ಬದಂದು ಹೇಳಲಾಗುತ್ತದೆ ಎಂದಿದ್ದಾರೆ.


ಈಗಿನ ಸಂವತ್ಸರದ ಫಲಾಫಲಗಳನ್ನ ನೋಡಿದಾಗ ಒಬ್ಬ ಸ್ತ್ರೀ ದೇಶ ಆಳಲಿದ್ದಾರೆ. ಮಹಾಶಿವರಾತ್ರಿ ಹಬ್ಬದ ಒಳಗೆ ಲೋಕಸಭೆ ಚುನಾವಣೆ ನಡೆದ್ರೆ ಪ್ರಧಾನಿ ಮೋದಿಗೆ ಅಧಿಕಾರ ಉಳಿಸಿಕೊಳ್ಳುವ ಅವಕಾಶವಿದೆ. ಮಾರ್ಚ್ ನಂತರ ಚುನಾವಣೆ ನಡೆದ್ರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆ ಒಬ್ಬ ಮಹಿಳೆಯೇ ಪ್ರಧಾನಿ ಆಗೋ ಯೋಗವಿದೆ. ಮಹಾಸಿದ್ದರು ಬರೆದ ಕಾಲಜ್ಞಾನದ ಭವಿಷ್ಯ ವಾಣಿಯನ್ನ ನೋಡಿದರೆ,  ಮಹಾಶಿವರಾತ್ರಿ ಹಬ್ಬದ ನಂತರ ಒಂದು ಶಕ್ತಿ ಅಂದರೆ ಸ್ತ್ರೀ ದೇಶ ಆಳಲಿದ್ದಾರೆ. ಶಕ್ತಿ ಎಂದರೆ ಒಂದು ಹೆಣ್ಣು. ಆ ಹೆಣ್ಣು ಈ ದೇಶವನ್ನ ಮುನ್ನಡೆಸಲಿದ್ದಾರೆ. ಇಂತಹದ್ದೇ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂದು ಮಕರ ಸಂಕ್ರಮಣ ಪರ್ವ ಕಾಲದಲ್ಲಿ ಹೇಳಲಾಗುತ್ತದೆ. ಇಂತಹ ಸ್ತ್ರೀನೇ ದೇಶ ಆಳ್ತಾಳೆ ಅಂತಾ ನಿಖರವಾಗಿ ಅಂದು ತಿಳಿಸಲಾಗುತ್ತದೆ.

ಅಪ್ಪನ ಪಿಂಚಣಿಗಾಗಿ 'ಹೆಂಡತಿ'ಯಾದ ಮಗಳು, ಪೊಲೀಸ್‌ಗೆ ಹಿಡಿದುಕೊಟ್ಟ ಗಂಡ!

ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬದ ದಿನದಂದು ಕಾಲಜ್ಞಾನ ನೋಡಲಾಗ್ತದೆ. ಅಂದೇ ಯಾವ ಪಕ್ಷ, ಯಾವ ಮಹಿಳೆ ಅಂತಾ ಸ್ಪಷ್ಟವಾಗಿ ತಿಳಿಸಲಿದ್ದೇವೆ. ಆ ಸ್ತ್ರೀ ಯಾವುದೇ ಪಕ್ಷದವರು ಆಗಿರಬಹುದು. ದೇಶವನ್ನ ಆ ಸ್ತ್ರೀ ದೇಶ ಆಳೋದು ಶತಃ ಸಿದ್ಧ ಎಂದು ತುಮಕೂರಿನ ನೊಣವಿನಕೆರೆಯಲ್ಲಿ ಯಶವಂತ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಎಲ್ಲಾ ವ್ಯವಸ್ಥೆ ಫೇಲ್‌ ಆದರೂ, ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯೋದು ಖಂಡಿತ: ಇಸ್ರೋ ಚೀಫ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಿಂದೂ ಪರ ತೀರ್ಪಿತ್ತ ಜಡ್ಜ್‌ ವಿರುದ್ಧ ಡಿಎಂಕೆ ವಾಗ್ದಂಡನೆ
ವಂದೇ.. ಚರ್ಚೆಯಿಂದ ಹೊಸ ಇತಿಹಾಸ ಸೃಷ್ಟಿಗೆ ಮೋದಿ ಯತ್ನ: ಕಾಂಗ್ರೆಸ್‌