
ಇಂದೋರ್: ದಿನ ಬೆಳಗಾದ್ರೆ ಕ್ರೈಂ ಸುದ್ದಿಗಳೇ ಮನಸ್ಸು ಹಾಳು ಮಾಡುತ್ತಿರುವ ಸಮಯದಲ್ಲಿ ಮಾನವೀಯತೆ ಇನ್ನೂ ಉಳಿದಿದೆ ಎಂಬುದನ್ನು ತೋರಿಸುವಂಥ ಸುದ್ದಿಗಳು ಮನಸ್ಸಿಗೆ ಮುದ ನೀಡುತ್ತವೆ. ಈ ವ್ಯಕ್ತಿ ನೋಡಿ, ಗುರುತೇ ಇಲ್ಲದ, ಮುಂದೂ ಸಂಬಂಧವೇ ಇರದಂತ ಮಹಿಳೆಯೊಬ್ಬರ ಜೀವ ಉಳಿಸಲು ಬರೋಬ್ಬರಿ 440 ಕಿಲೋಮೀಟರ್ ದೂರ ಸಾಗಿ ರಕ್ತ ನೀಡಿದ್ದಾರೆ.
ಹೌದು, ತೀವ್ರ ಅಸ್ವಸ್ಥರಾಗಿದ್ದ 30 ವರ್ಷದ ಮಹಿಳೆಯೊಬ್ಬರ ಜೀವ ಉಳಿಸಲು ಅಪರೂಪದ 'ಬಾಂಬೆ' ರಕ್ತದ ಗುಂಪನ್ನು ಹೊಂದಿದ್ದ ಹೂವಿನ ವ್ಯಾಪಾರಿ 36 ವರ್ಷದ ರವೀಂದ್ರ ಅಷ್ಟೇಕರ್ ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಶಿರಡಿಯಲ್ಲಿ ಸಗಟು ಹೂವಿನ ವ್ಯಾಪಾರ ನಡೆಸುತ್ತಿರುವ ರವೀಂದ್ರ, ಮೇ 25ರಂದು ಇಂದೋರ್ ತಲುಪಿ ಮಹಿಳೆಗೆ ರಕ್ತದಾನ ಮಾಡಿ, ಅವರ ಜೀವ ಉಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ವಾಟ್ಸಾಪ್‌ನಲ್ಲಿ ರಕ್ತದಾನಿಗಳ ಗುಂಪಿನ ಮೂಲಕ ಈ ಮಹಿಳೆಯ ಗಂಭೀರ ಸ್ಥಿತಿಯ ಬಗ್ಗೆ ನನಗೆ ತಿಳಿದಾಗ, ನಾನು ನನ್ನ ಕಡೆಯಿಂದ ನಾನು ಸ್ವಲ್ಪ ಕೊಡುಗೆ ನೀಡಬಹುದೆಂಬ ಕಾರಣದಿಂದ 440 ಕಿಲೋಮೀಟರ್ ಪ್ರಯಾಣಿಸಲು ನಿರ್ಧರಿಸಿದೆ' ಎನ್ನುತ್ತಾರೆ ರವೀಂದ್ರ.
ಕಳೆದ 10 ವರ್ಷಗಳಲ್ಲಿ ಅವರು ತಮ್ಮ ತವರು ರಾಜ್ಯ ಮಹಾರಾಷ್ಟ್ರ ಸೇರಿದಂತೆ, ಗುಜರಾತ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ವಿವಿಧ ನಗರಗಳಲ್ಲಿ ಎಂಟು ಬಾರಿ ರೋಗಿಗಳಿಗೆ ರಕ್ತದಾನ ಮಾಡಿದ್ದಾರೆ.
ಇಂದೋರ್‌ನ ಸರ್ಕಾರಿ ಸ್ವಾಮ್ಯದ ಮಹಾರಾಜ ಯಶವಂತರಾವ್ ಆಸ್ಪತ್ರೆಯ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ ಅಶೋಕ್ ಯಾದವ್ ಅವರು ಮಂಗಳವಾರ ಮತ್ತೊಂದು ಆಸ್ಪತ್ರೆಯಲ್ಲಿ ಪ್ರಸೂತಿ ಕಾಯಿಲೆಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಹಿಳೆಗೆ ಆಕಸ್ಮಿಕವಾಗಿ 'ಒ' ಪಾಸಿಟಿವ್ ಗುಂಪಿನ ರಕ್ತವನ್ನು ನೀಡಲಾಯಿತು. ಇದರಿಂದ ಆಕೆಯ ಸ್ಥಿತಿ ಹದಗೆಟ್ಟಿದ್ದು, ಮೂತ್ರಪಿಂಡಗಳಿಗೂ ತೊಂದರೆಯಾಗಿತ್ತು ಎಂದು ತಿಳಿಸಿದ್ದಾರೆ.
ಮಹಿಳೆಯ ಸ್ಥಿತಿ ಹದಗೆಟ್ಟ ನಂತರ ಇಂದೋರ್‌ನ ರಾಬರ್ಟ್ಸ್ ನರ್ಸಿಂಗ್ ಹೋಮ್‌ಗೆ ಕಳುಹಿಸಿದಾಗ, ಆಕೆಯ ಹಿಮೋಗ್ಲೋಬಿನ್ ಮಟ್ಟವು ಪ್ರತಿ ಡೆಸಿಲೀಟರ್‌ಗೆ ಸುಮಾರು 4 ಗ್ರಾಂಗೆ ಕುಸಿದಿದೆ, ಆದರೆ ಆರೋಗ್ಯವಂತ ಮಹಿಳೆಯ ಹಿಮೋಗ್ಲೋಬಿನ್ ಮಟ್ಟವು ಪ್ರತಿ ಡೆಸಿಲೀಟರ್‌ಗೆ 12 ರಿಂದ 15 ಗ್ರಾಂ ಇರಬೇಕು ಎಂದು ಅವರು ಹೇಳಿದರು.
ನಾಲ್ಕು ಯೂನಿಟ್ 'ಬಾಂಬೆ' ರಕ್ತವನ್ನು ನೀಡಿದ ನಂತರ, ಮಹಿಳೆಯ ಸ್ಥಿತಿ ಸುಧಾರಿಸಿದೆ ಎಂದು ಯಾದವ್ ತಿಳಿಸಿದ್ದಾರೆ.
ಬಾಂಬೆ ಬ್ಲಡ್ ಗ್ರೂಪ್
1952ರಲ್ಲಿ ಕಂಡುಹಿಡಿಯಲಾದ 'ಬಾಂಬೆ' ರಕ್ತದ ಗುಂಪು ಅಪರೂಪವಾಗಿದೆ, ಇದರಲ್ಲಿ H ಪ್ರತಿಜನಕದ ಅನುಪಸ್ಥಿತಿ ಮತ್ತು H ವಿರೋಧಿ ಪ್ರತಿಕಾಯಗಳ ಉಪಸ್ಥಿತಿ ಇರುತ್ತದೆ. ಈ ರಕ್ತವನ್ನು ಹೊಂದಿರುವ ರೋಗಿಗಳು ಈ ಗುಂಪಿನೊಳಗಿನ ವ್ಯಕ್ತಿಯಿಂದ ಮಾತ್ರ ರಕ್ತ ವರ್ಗಾವಣೆಯನ್ನು ಪಡೆಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ