ನೀತಾ ಅಂಬಾನಿಯ 500 ಕೋಟಿಯ ಪಚ್ಚೆ ಹಾರವನ್ನು ಈಗ ಯಾರು ಬೇಕಾದರೂ ಧರಿಸಬಹುದು. ಏಕೆಂದರೆ ಇದರ ನಕಲು ಕೇವಲ 178 ರೂ.ಗೆ ಮಾರಾಟವಾಗುತ್ತಿದ್ದು- ಅದರ ವಿಡಿಯೋ ವೈರಲ್ ಆಗಿದೆ.
ಜೈಪುರದ ಆಭರಣ ವ್ಯಾಪಾರಿಯೊಬ್ಬರು ನೀತಾ ಅಂಬಾನಿ ಅವರ 500 ಕೋಟಿ ರೂ.ಗಳ ಪಚ್ಚೆ ಹಾರವನ್ನು ಕೇವಲ 178 ರೂ.ಗೆ ಮಾರಾಟ ಮಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಗಮನ ಸೆಳೆದಿದೆ.
ಹೌದು, ನೀತಾ ಅಂಬಾನಿಯವರ 500 ಕೋಟಿ ರೂಪಾಯಿಗಳ ಪಚ್ಚೆ ಹಾರದ ಪ್ರತಿಕೃತಿಯನ್ನು ಕೇವಲ 178 ರೂಪಾಯಿಗಳಿಗೆ ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ವಿಪರೀತ ಪ್ರತಿಕ್ರಿಯೆ ಪಡೆಯುತ್ತಿದೆ.
ಜಾಮ್‌ನಗರದಲ್ಲಿ ತನ್ನ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವದ ಸಮಾರಂಭಗಳ ಸಂದರ್ಭದಲ್ಲಿ ನೀತಾ ಅಂಬಾನಿ ಧರಿಸಿದ್ದ ಈ ನೆಕ್ಲೇಸ್, ಈಗ ಕೆಂಪು, ಹಸಿರು, ಬಿಳಿ ಮತ್ತು ಕಪ್ಪು ವಿವಿಧ ಬಣ್ಣಗಳಲ್ಲಿ ರೆಪ್ಲಿಕಾವಾಗಿ ಸೃಷ್ಟಿಯಾಗಿದ್ದು, ಕೈಗೆಟುಕುವ ದರದಲ್ಲಿ ಸೇಲ್ ಆಗುತ್ತಿದೆ.
ವೀಡಿಯೊದಲ್ಲಿ, ಆಭರಣ ವ್ಯಾಪಾರಿಯು ಈ ಪ್ರತಿಕೃತಿಗಳನ್ನು ಉತ್ಸಾಹದಿಂದ ಮಾರುಕಟ್ಟೆಗೆ ತಂದು ತೋರಿಸುತ್ತಾ, 'ನೀತಾ ಅಂಬಾನಿ ಜಿ ಅವರ ನೆಕ್ಲೇಸ್ ಕೇವಲ 178 ರೂಗಳಲ್ಲಿ ಲಭ್ಯವಿದೆ. ಹೋಲ್ಸೇಲ್ ಮಾತ್ರ, ಚಿಲ್ಲರೆ ಇಲ್ಲ' ಎನ್ನುತ್ತಿದ್ದಾರೆ. ಈ ಪ್ರಾಮಾಣಿಕ ಪ್ರಚಾರದ ಪ್ರಯತ್ನವು ಪ್ರಮುಖ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಸೇರಿದಂತೆ ಅನೇಕರ ಗಮನವನ್ನು ತ್ವರಿತವಾಗಿ ಸೆಳೆದಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವೀಡಿಯೊಗೆ ಪ್ರತಿಕ್ರಿಯಿಸಿದ ಗೋಯೆಂಕಾ, 'ಅಬ್ ಕ್ಯಾ ಬೊಲೂನ್! #ಮಾರ್ಕೆಟಿಂಗ್' ಎಂದು ತಮ್ಮ ಆಶ್ಚರ್ಯವನ್ನು ಸಂಕ್ಷಿಪ್ತವಾಗಿ ವ್ಯಕ್ತಪಡಿಸಿದ್ದಾರೆ. ಅವರ ಪ್ರತಿಕ್ರಿಯೆಯು ನೆಟಿಜನ್‌ಗಳ ನಡುವೆ ಚರ್ಚೆಗಳಿಗೆ ಮತ್ತಷ್ಟು ಉತ್ತೇಜನ ನೀಡಿತು, ಇದು 3.15 ಮಿಲಿಯನ್ ವೀಕ್ಷಣೆಗಳಿಗೆ ಮತ್ತು ಕಾಮೆಂಟ್‌ಗಳ ಕೋಲಾಹಲಕ್ಕೆ ಕಾರಣವಾಯಿತು.
ಮಹಿಳೆಯನ್ನು ಮೂಡ್‌ಗೆ ತರಲು ಸಂಗಾತಿ ಮಾಡಬೇಕೇನು?
ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರತಿಕ್ರಿಯೆಗಳು ವಿನೋದದಿಂದ ಟೀಕೆಗಳವರೆಗೆ ಹರಡಿವೆ. ಐಷಾರಾಮಿ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಸೃಷ್ಟಿ ಮಾಡುವಲ್ಲಿ ಭಾರತೀಯರ ಕೌಶಲ್ಯವನ್ನು ಎತ್ತಿ ತೋರಿಸುತ್ತಾ, 'ನಕಲು ಮಾಡುವಲ್ಲಿ ಭಾರತವು ಅತ್ಯುತ್ತಮ ದೇಶವಾಗಿದೆ' ಎಂದು ಒಬ್ಬ ಬಳಕೆದಾರರು ಟೀಕಿಸಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ, 'ಎಕ್ಸಾಂನಲ್ಲಿ ಉತ್ತರ ನಕಲು ಮಾಡುವುದರೊಂದಿಗೆ ಈ ನಕಲು ಮಾಡುವ ಚಟ ಶುರುವಾಗುತ್ತದೆ' ಎಂದಿದ್ದಾರೆ. ಮತ್ತೆ ಕೆಲವರು, 'ಇದರಲ್ಲಿ ತಪ್ಪೇನಿದೆ, ಪ್ರತಿಯೊಬ್ಬರೂ ತಮಗಿಷ್ಟ ಬಂದಂಥ ಫ್ಯಾಶನ್ ಮಾಡಲು ಅರ್ಹರು. ಅದಕ್ಕೆ ಹಣ ಅಡ್ಡಗಾಲಾಗಬಾರದು' ಎಂದಿದ್ದಾರೆ.
ಇನ್ನೊಬ್ಬರು, 'ಥ್ಯಾಂಕ್ಯೂ ಈ ಕೆಲಸಕ್ಕಾಗಿ, ನನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಖಡಿಮೆ ಖರ್ಚಿನಲ್ಲಿ ದುಬಾರಿಯದರಂತೆ ಕಾಣುವ ಉಡುಗೊರೆ ನೀಡುವೆ' ಎಂದಿದ್ದಾರೆ.