ಅಪ್ಪಂದಿರ ದಿನಕ್ಕೆ ಪುತ್ರಿ ಜೊತೆ ಕಳೆಯಲು ಡ್ಯೂಟಿ ಬದಲಿಸಿದ ಅಧಿಕಾರಿ ರೈಲು ಅಪಘಾತದಲ್ಲಿ ಸಾವು!

By Chethan Kumar  |  First Published Jun 18, 2024, 10:28 PM IST

ಬೇಡಿಕೆಯಂತೆ ಅಪ್ಪಂದಿರ ದಿನ  ಮಗಳ ಜೊತೆ ಕಳೆಯಲು ತನ್ನ ಡ್ಯೂಟಿಯನ್ನೇ ಬದಲಿಸಿದ ಅಧಿಕಾರಿ ಕಾಂಚನಜುಂಗಾ ರೈಲು ಅಪಘಾತದಲ್ಲಿ ಮೃತಪಟ್ಟ ಮನಕಲುಕುವ ಘಟನೆ ನಡೆದಿದೆ.  
 


ಸಿಲ್ಗುರಿ(ಜೂ.18) ಕಾಂಚನಜುಂಗ ಎಕ್ಸ್‌ಪ್ರೆಸ್ ರೈಲು ಹಾಗೂ ಗೂಡ್ಸ್ ರೈಲು ಅಪಘಾತದಲ್ಲಿ 10 ಮಂದಿ ಮೃತಪಟ್ಟರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಲ್‌ಪೈಗುರಿ ಸಮೀಪ ನಡೆದ ಭೀಕರ ಅಪಘಾತಕ್ಕೆ ಭಾರತವೇ ಬೆಚ್ಚಿ ಬಿದ್ದಿದೆ. ಈ ಮೃತಪಟ್ಟವರ ಪೈಕಿ ರೈಲ್ವೇ ಗಾರ್ಡ್ ಆಶಿಶ್ ದೆ ಕೂಡ ಸೇರಿದ್ದಾರೆ. ಅಪ್ಪಂದಿರ ದಿನಾಚರಣೆಗೆ ಮಗಳ ಜೊತೆ ಕಳೆಯಲು ತನ್ನ ಡ್ಯೂಟಿಯನ್ನೇ ಬದಲಿಸಿ ಮನೆಗೆ ಆಗಮಿಸಿದ ಆಶಿಶ್ ದೆ ಈ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಸಿಲ್ಗುರಿ ಮುನ್ಸಿಪಲ್ ಕಾರ್ಪೋರೇಶನ್ ವಲಯದ ವಾರ್ಡನ್ ನಂ 32ರ ನಿವಾಸಿಯಾಗಿರುವ ಅಶಿಶ್ ದೇ, ರೈಲ್ವೇಯಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿಗದಿತ ಡ್ಯೂಟಿ ಪ್ರಕಾರ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗಾರ್ಡ್ ಆಗಿ ತೆರಳಬೇಕಿತ್ತು. ಆದರೆ ಕೋಲ್ಕತಾದಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವ ಮಗಳ ಬೇಡಿಕೆ ಮುಂದಿಟ್ಟಿದ್ದಾಳೆ. ಅಪ್ಪಂದಿರ ದಿನಾಚರಣೆ ತಾನು ಮನೆಗೆ ಆಗಮಿಸುತ್ತಿದ್ದೇನೆ. ನಾನು ಅಪ್ಪನ ಜೊತೆ ಕಳಯಬೇಕು. ಹೀಗಾಗಿ ರಜೆ ಪಡೆದು ಮನಗೆ ಆಗಮಿಸುಲ ಸೂಚಿಸಿದ್ದಾಳೆ.

Tap to resize

Latest Videos

ರೈಲು ಪ್ರಯಾಣಿಕರೇ ಗಮನಿಸಿ, ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತದಿಂದ 19 ಟ್ರೈನ್ ರದ್ದು!

ಮಗಳ ಬೇಡಿಕೆಯಿಂದ ಭಾನುವರ ಶತಾಬ್ದಾರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗಾರ್ಡ್ ಆಗಿ ತೆರಳಬೇಕಿದ್ದ ಆಶಿಶ್ ದೇ, ಡ್ಯೂಟಿಯನ್ನು ಮತ್ತೊಬ್ಬರ ಜೊತೆ ಬದಲಿಸಿದ್ದಾರೆ. ಜೂನ್ 16ರ ಅಪ್ಪಂದಿರ ದಿನಾಚರಣೆಯಂದು ಮಗಳು ಹಾಗೂ ಕುಟುಂಬದ ಜೊತೆ ಕಳೆದ ಅಶಿಶ್ ದೆ, ಮರುದಿನ ಅಂದರೆ ಜೂನ್ 17 ರಂದು ಸಿಲುಗ್ರಿ ರೈಲು ನಿಲ್ದಾಣಕ್ಕೆ ಬಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕರ್ತವ್ಯಕ್ಕೆ ಹಾಜರಾದ ಬಳಿಕ ಬಂದ ಕಾಂಚನಜುಂಗ ಎಕ್ಸ್‌ಪ್ರೆಸ್ ರೈಲಿನಲ್ಲಿ ಗಾರ್ಡ್ ಆಗಿ ತೆರಳಿದ್ದಾರೆ. ಆದರೆ ರೈಲು ಹತ್ತಿದ ಒಂದೂವರೆ ಗಂಟೆಯಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಅಶಿಶ್ ದೇ ಮೃತಪಟ್ಟಿದ್ದಾರೆ. ಈ ಮಾಹಿತಿ ಕೇಳಿ ಆಶಿಶ್ ದೇ ಪತ್ನಿ ಹಾಗೂ ಪುತ್ರಿ ಇಬ್ಬರು ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಕೆಲ ಹೊತ್ತಿನ ಬಳಿಕ ಸುಧಾರಿಸಿಕೊಂಡು ಆಸ್ಪತ್ರೆ ದೌಡಾಯಿಸಿದ ಕುಟುಂಬಸ್ಥರು ಮತ್ತೆ ಅಸ್ವಸ್ಥಗೊಂಡಿದ್ದಾರೆ.

ತಂದೆಯ ಸಾವಿನಿಂದ ಪುತ್ರಿ ಆಘಾತಗೊಂಡಿದ್ದಾಳೆ. ಪತ್ನಿ ಜರ್ಝರಿತವಾಗಿದ್ದಾರೆ. ಅಪ್ಪಂದಿರ ದಿನಕ್ಕಾಗಿ ಒತ್ತಾಯಿಸಿ ಡ್ಯೂಟಿ ಬದಲಿಸಿದ ತಂದೆ ಮೃತಪಟ್ಟಿದ್ದಾರೆ. ನಾನು ಒತ್ತಾಯಿಸಿದ್ದರೆ ನನಗೆ ಪ್ರತಿ ದಿನ ತಂದೆ ಸಿಗುತ್ತಿದ್ದರೂ ಎಂದು ಪುತ್ರಿ ಆಕ್ರಂದನ ಮುಗಿಲು ಮುಟ್ಟಿದೆ.

WB Train Accident Update: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ಟ್ರೈನ್ ಡಿಕ್ಕಿ: ಮೃತರ ಸಂಖ್ಯೆ 15ಕ್ಕೆ ಏರಿಕೆ
 

click me!