Latest Videos

ಜನರಲ್ ,ವೈಟ್‌ಲಿಸ್ಟ್ ರೈಲು ಟಿಕೆಟ್ ಖರೀದಿಸಿ ರಿಸರ್ವ್ ಬೋಗಿಯಲ್ಲಿ ಪ್ರಯಾಣಿಕ್ಕಿಲ್ಲ ಅವಕಾಶ

By Chethan KumarFirst Published Jun 18, 2024, 9:26 PM IST
Highlights

ಜನರಲ್ ಟಿಕೆಟ್, ವೈಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರು ರಿಸರ್ವ್ ಟಿಕೆಟ್ ಬೋಗಿಯಲ್ಲಿ ಇನ್ಮುಂದೆ ಪ್ರಯಾಣ ಸಾಧ್ಯವಿಲ್ಲ. ಹೀಗೆ ಮಾಡಿದರೆ ನಡು ದಾರಿಯಲ್ಲೇ ಇಳಿಸಿ ಬಿಡುತ್ತಾರೆ.
 

ನವದೆಹಲಿ(ಜೂ.18) ರೈಲು ಪ್ರಯಾಣದ ಹಲವು ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದೆ. ಕಿಕ್ಕಿರಿದು ತುಂಬಿದ ಬೋಗಿಗಳು, ಎಸಿ, ರಿಸರ್ವ್ ಟಿಕೆಟ್ ಬೋಗಿಯಲ್ಲಿ ದಟ್ಟಣೆ, ಟಿಕೆಟ್ ರಿಸರ್ವ್ ಮಾಡಿದರೂ ಸೀಟು ಸಿಗದ ಪರಿಸ್ಥಿತಿಗಳ ಹಲವು ವಿಡಿಯೋಗಳು ಹರಿದಾಡುತ್ತಿದೆ. ಈ ವಿಡಿಯೋಗಳಿಂದ ಕೇಂದ್ರ ಸರ್ಕಾರದ ವಿರುದ್ದ ಸತತ ಟೀಕೆಗಳು ಕೇಳಿಬಂದಿದೆ. ವಿಪಕ್ಷಗಳು ಕೂಡ ಸರ್ಕಾರವನ್ನು ಟೀಕಿಸಿದೆ. ಇದೀಗ ರೈಲ್ವೇ ಸಚಿವಾಲಯ ರೈಲು ಪ್ರಯಾಣ ನಿಯಮ ಕಠಿಣಗೊಳಿಸಿದೆ. ಜನರಲ್ ಟಿಕೆಟ್, ವೈಟ್‌ಲಿಸ್ಟ್‌ನಲ್ಲಿರುವ ಪ್ರಯಾಣಿಕರು ಇನ್ಮುಂದೆ ರಿಸರ್ವ್ ಬೋಗಿಯಲ್ಲಿ ಹತ್ತಿ ಪ್ರಯಾಣ ಮಾಡುವಂತಿಲ್ಲ. 

ಎಸಿ, ಸ್ಲೀಪರ್ ಕೋಚ್ ಸೇರಿದಂತೆ ರಿಸರ್ವ್ ಟಿಕೆಟ್ ಬೋಗಿಯಲ್ಲಿ ಇದೀಗ ಜನರಲ್ ಟಿಕೆಟ್, ವೈಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಟಿಕೆಟ್ ರಿಸರ್ವ್ ಮಾಡಿದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿರುವ ಹಲವು ದೂರುಗಳು ಬಂದಿದೆ.ಜೊತೆಗೆ ವಿಡಿಯೋಗಳು ಹರಿದಾಡಿದೆ. ಹೀಗಾಗಿ ರೈಲ್ವೇ ಸಚಿವಾಲಯ ಇನ್ಮುಂದೆ ರಿಸರ್ವ್ ಬೋಗಿಯಲ್ಲಿ ಟಿಕೆಟ್ ಖಾತ್ರಿ ಪಡಿಸಿಕೊಂಡು ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ. ಜನರಲ್ ಟಿಕೆಟ್ ಖರೀದಿಸಿದವರು ಜನರಲ್ ಬೋಗಿಯಲ್ಲಿ ಮಾತ್ರ ಪ್ರಯಾಣಿಸಬೇಕು. ಇತ್ತ ವೈಟಿಂಗ್ ಲಿಸ್ಟ್ ಪ್ರಯಾಣಿಕರು ಟಿಕೆಟ್ ಖಾತ್ರಿಯಾಗದೆ ಪ್ರಯಾಣಿಸುವಂತಿಲ್ಲ. 

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್; ಇನ್ಮುಂದೆ ವೈಟಿಂಗ್ ಲಿಸ್ಟ್‌ ಇಲ್ಲ, ದಟ್ಟಣೆಯೂ ಇರಲ್ಲ!

ಒಂದು ವೇಳೆ ಎಸಿ, ಸ್ಲೀಪರ್ ಸೇರಿದಂತೆ ರಿಸರ್ವ್ ಬೋಗಿಯಲ್ಲಿ ಜನರಲ್ ಹಾಗೂ ವೈಟಿಂಗ್ ಲಿಸ್ಟ್ ಪ್ರಯಾಣಿಕರು ಪ್ರಯಾಣಿಸದರೆ ರೈಲ್ವೇ ಅಧಿಕಾರಿಗಳು ನಡು ದಾರಿಯಲ್ಲೇ ಇಳಿಸಲಿದ್ದಾರೆ. ದುಬಾರಿ ದಂಡ ಹಾಕಲು ರೈಲ್ವೇ ಇಲಾಖೆ ಮುಂದಾಗಿದೆ. ಈ ಕುರಿತು ಮಹತ್ವದ ಸಭೆ ನಡೆಸಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಖಡಕ್ ಸೂಚನೆ ನೀಡಿದ್ದಾರೆ. ರೈಲ್ವೇ ಪೊಲೀಸ್ ಫೋರ್ಸ್ ಈ ಕುರಿತು ಹೆಚ್ಚಿನ ಗಮನ ಹರಿಸಬೇಕು. ಪ್ರಯಾಣಿಕರಿಗೆ ಸಮಸ್ಯೆಗಳಾಗಬಾರದು ಎಂದಿದ್ದಾರೆ.

ರಿಸರ್ವ್ ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶ ನೀಡಬೇಕು. ರಿಸರ್ವ್ ಬೋಗಿಯಲ್ಲಿ ತಪಾಸಣೆ ನಡೆಸಬೇಕು. ರೈಲ್ವೇ ಅಧಿಕಾರಿಗಳ ಜೊತೆಗೆ ರೈಲ್ವೇ ಪೊಲೀಸರು ಈ ತಪಾಸಲಣೆಯಲ್ಲಿರಬೇಕು ಎಂದು ಸೂಚಿಸಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೇಂದ್ರದ ನಡೆಯನ್ನು ವಿರೋಧಿಸಿದೆ. ಕೇಂದ್ರ ಸರ್ಕಾರ ಜನರಲ್ ಬೋಗಿಯನ್ನು ಕಡಿತಗೊಳಿಸಿ ಎಸಿ, ಸ್ಲೀಪರ್ ಕೋಚ್ ಆಗಿ ಮಾರ್ಪಪಡಿಸಿದೆ. ದುಬಾರಿ ಹಣ ನೀಡಿ ಪ್ರಯಾಣಿಸಲು ಸಾಧ್ಯವಾಗದ ಜನರಿಗೆ ಕೇಂದ್ರ ಯಾವುದೇ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ರಿಸರ್ವ್ ಬೋಗಿಯಲ್ಲಿ ಜನರಲ್ ಟಿಕೆಟ್ ಪ್ರಯಾಣಿಕರಿಗೆ  ಪ್ರಯಾಣಕ್ಕೆ ಅವಕಾಶ ನಿರಾಕರಿಸುವುದು ಸರಿಯಲ್ಲ ಎಂದಿದೆ.

ರೈಲಿನಲ್ಲಿ ಖುಲ್ಲಂ ಖುಲ್ಲಾ ಸೀನ್, ಜೋಡಿಯ ರೋಮ್ಯಾನ್ಸ್‌ಗೆ ಸುಸ್ತಾದ ಪ್ರಯಾಣಿಕರು!
 

click me!