
ತನ್ನ ಆರು ವರ್ಷದ ಮಗಳ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ತನ್ನ ಸಲಿಂಗಿ ಸಂಗಾತಿಯ ಮರ್ಮಾಂಗಕ್ಕೆ ಇರಿದಂತಹ ಘಟನೆ ಉತ್ತರ ಪ್ರದೇಶದ ದಿಯೋರಿಯಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಆರು ವರ್ಷದ ಮಗಳ ಜೊತೆ ತನ್ನ ಸಲಿಂಗಿ ಸಂಗಾತಿ ಜೊತೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಆದರೆ ಆತ ತನ್ನ ಸಂಗಾತಿಯ ಪುಟ್ಟ ಮಗಳ ಮೇಲೆಯೇ ಕಣ್ಣು ಹಾಕಿ ಆಕೆಯ ಮೇಲೆ ಬಲತ್ಕಾರಕ್ಕೆ ಮುಂದಾಗಿದ್ದು, ಇದನ್ನು ಕಣ್ಣಾರೆ ಕಂಡ ಮಗುವಿನ ತಂದೆ ಆರೋಪಿಯ ಮರ್ಮಾಂಗಕ್ಕೆ ಇರಿದಿದ್ದಾನೆ. ರಾತ್ರಿ ಮಲಗಿದ್ದ ವೇಳೆ ಮಗಳ ಅಳು ಕೇಳಿ ಎದ್ದು ನೋಡಿದಾಗ ತನ್ನ ಸಲಿಂಗಿ ಸಂಗಾತಿ ತನ್ನ ಮಗಳ ಮೇಲೆ ಅತ್ಯಾ*ಚಾರ ಮಾಡುತ್ತಿರುವುದನ್ನು ನೋಡಿ ಆತನ ಮರ್ಮಾಂಗಕ್ಕೆ ಇರಿದಿದ್ದಾನೆ.
ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಉತ್ತರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಆರು ವರ್ಷದ ಮಗಳ ಮೇಲೆ ಅತ್ಯಾ*ಚಾರ ಮಾಡುತ್ತಿದ್ದ ತನ್ನ ಸಲಿಂಗಕಾಮಿ ಸಂಗಾತಿಯನ್ನು ಹಿಡಿದ ವ್ಯಕ್ತಿಯೊಬ್ಬ ಆತನ ಜನನಾಂಗಕ್ಕೆ ಇರಿದ ಘಟನೆ ಸ್ಥಳೀಯರಿಗೆ ಆಘಾತವನ್ನುಂಟು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಯ ತಂದೆ ಮತ್ತು ಆತನ ಸಲಿಂಗಕಾಮಿ ಸಂಗಾತಿ ಲೈಂಗಿಕ ಆದ್ಯತೆಗಳಿಗಾಗಿ ಹುಡುಗಿಯ ತಾಯಿಯಿಂದ ಬೇರ್ಪಟ್ಟ ನಂತರ ಸ್ವಲ್ಪ ಸಮಯದಿಂದ ಒಟ್ಟಿಗೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಮಂಗಳವಾರ ರಾತ್ರಿ ಈ ಕ್ರೂರ ಘಟನೆ ನಡೆದಿದ್ದು, ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ಒಂದೇ ಸ್ಥಳದಲ್ಲಿ ವಾಸಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆ ನಡೆದ ದಿನ ರಾತ್ರಿ ತಂದೆ ತನ್ನ ಮಗಳ ಅಳುವಿನ ಸದ್ದು ಕೇಳಿ ಎಚ್ಚರಗೊಂಡಿದ್ದಾರೆ. ನಂತರ ಕೋಣೆಯ ಸುತ್ತಲೂ ನೋಡಿದಾಗ ತನ್ನ ಸಲಿಂಗಕಾಮಿ ಸಂಗಾತಿ ರಾಮ್ ಬಾಬು ಯಾದವ್ ಎಂಬಾತ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾ*ಚಾರ ಮಾಡುತ್ತಿದ್ದುದನ್ನು ನೋಡಿದ್ದಾರೆ. ಮರುಕ್ಷಣವೇ ಕೋಪಗೊಂಡ ಹುಡುಗಿಯ ತಂದೆ ಕೋಪದಿಂದ ಯಾದವ್‌ನ ಜನನಾಂಗಕ್ಕೆ ಹಲವು ಬಾರಿ ಇರಿದಿದ್ದಾರೆ. ಹುಡುಗಿಯ ತಂದೆ ದೂರು ದಾಖಲಿಸಿದ ನಂತರವೇ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ನಂತರ ರಾಮ್ ಬಾಬು ಯಾದವ್‌ನನ್ನು ವಶಕ್ಕೆ ಪಡೆದು ತಮ್ಮ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಈ ಘಟನೆಯಲ್ಲಿ ಬದುಕುಳಿದ ಮಗುವನ್ನು ಕೂಡ ತನಿಖೆಯ ಭಾಗವಾಗಿ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.
ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾ*ಚಾರ ನಡೆದಿದೆ ಎಂದು ದೂರುದಾರರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಮೇರೆಗೆ, ಖುಖುಂಡು ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು, ತಂದೆಯ ದೂರಿನ ಆಧಾರದ ಮೇಲೆ, ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಮಗುವಿನ ತಂದೆ ಮತ್ತು ಆರೋಪಿ ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು ಮತ್ತು ಒಟ್ಟಿಗೆ ವಾಸಿಸುತ್ತಿದ್ದರು. ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ತಂದೆಯ ಜೊತೆ ವಾಸ ಮಾಡಲು ಬಂದಿದ್ದ ಬಾಲಕಿ
ಪೊಲೀಸರ ಪ್ರಕಾರ ರಾಮ್ ಬಾಬು ಯಾದವ್ ಒಬ್ಬ ಕಾರ್ಮಿಕನಾಗಿದ್ದು, ಅವನ ಸಂಗಾತಿಯಾದ ಹುಡುಗಿಯ ತಂದೆ ಸ್ಥಳೀಯ ಆರ್ಕೆಸ್ಟ್ರಾದಲ್ಲಿ ನರ್ತಕನಾಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದರು ಮತ್ತು ಒಟ್ಟಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಲತ್ಕಾರಕ್ಕೊಳಕಾದ ಮಗುವಿನ ತಾಯಿ, ತನ್ನ ಪತಿಯ ಸಲಿಂಗಕಾಮಿ ಸಂಬಂಧದಿಂದಾಗಿ ಗಂಡನಿಂದ ಬೇರ್ಪಟ್ಟಿದ್ದರು ಮತ್ತು ಹುಡುಗಿ ಇತ್ತೀಚೆಗಷ್ಟೇ ತನ್ನ ತಂದೆಯೊಂದಿಗೆ ವಾಸಿಸಲು ಬಂದಿದ್ದಳು.
ಆರೋಪಿಯು ಇಬ್ಬರ ನಡುವಿನ ಸಲಿಂಗಕಾಮ ಸಂಬಂಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ರಾಮ್ ಬಾಬು ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅಗತ್ಯ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಸಾಂಪ್ರದಾಯಿಕವಲ್ಲದ ಈ ರೀತಿಯ ಕುಟುಂಬ ಪರಿಸರದಲ್ಲಿ ಮಕ್ಕಳ ಎಷ್ಟು ಸುರಕ್ಷಾ ಎಂಬ ಬಗ್ಗೆ ಸಮುದಾಯದ ಸದಸ್ಯರು ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂದರ್ಶನದ ವೇಳೆ ಒಳ್ಳೆಯ ಅಭ್ಯರ್ಥಿಯಾಗಿದ್ರೂ ತಿರಸ್ಕರಿಸಿದ್ದಕ್ಕೆ ಕಾರಣ ಹೇಳಿದ ಮ್ಯಾನೇಜರ್ ಪೋಸ್ಟ್ ವೈರಲ್
ಇದನ್ನೂ ಓದಿ: ಬೆಂಗಳೂರು ಟೆಕ್ಕಿಗಳ ಡಬಲ್ ಸಂಪಾದನೆ: ಹಗಲು ಇಂಜಿನಿಯರ್‌ಗಳು ರಾತ್ರಿ..?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ