
ಮುಂಬೈ(ಜು.22) ಮಹಿಳೆಯರ ಮುಂದೆ ಅಸಭ್ಯ ವರ್ತನೆ, ಹಸ್ತಮೈಥುನ ಮಾಡಿ ವೀರ್ಯ ಸ್ಖಲನ ಮಾಡಿದ ಹಲವು ಪ್ರಕರಣಗಳು ವರದಿಯಾಗಿದೆ. ಇದೀಗ ನಗರ ಪ್ರಮುಖ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆ ಮುಂದೆ ಧರಿಸಿದ್ದ ಡ್ರೆಸ್ ಬಿಚ್ಚಿ ಜನನಾಂಗ ಪ್ರದರ್ಶಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಪ್ರತಿಷ್ಠಿತ ಜುಹುವಿನಲ್ಲಿ ಈ ಘಟನೆ ನಡೆದಿದೆ. ಯುವಕನ ವಿಕೃತಿಯನ್ನು ಮೊಬೈಲ್ ಮೂಲಕ ಸೆರೆ ಹಿಡಿಯುತ್ತಿದ್ದಂತೆ ಕಾಮುಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಘಟನೆ ಕುರಿತು ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಕಹಿ ಘಟನೆ ಹಂಚಿಕೊಂಡಿದ್ದಾರೆ. ಜುಹುವಿನ ಜಾನ್ಕಿ ಕುಟೀರ್ ವಲಯದಲ್ಲಿ ಈ ಘಟನೆ ನಡೆದಿದೆ. ಮಹಿಳೆ ನಡೆದುಕೊಂಡು ಬರುತ್ತಿದ್ದಂತೆ ಕಾಮುಕನೊಬ್ಬ ಮಹಿಳೆಯನ್ನು ಕೂಗುತ್ತಾ ಧರಿಸಿದ್ದ ಚಡ್ಡಿ ಬಿಚ್ಚಿ ಜನನಾಂಗ ಪ್ರದರ್ಶಿಸಿದ್ದಾನೆ. ಹಸ್ತಮೈಥುನಕ್ಕೆ ಪ್ರಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿ ಪೊಲೀಸರಿಗೆ ನೀಡಲು ಮುಂದಾಗಿದ್ದಾಳೆ.
ನಡು ರಸ್ತೆಯಲ್ಲಿ ಯುವತಿಗೆ ಖಾಸಗಿ ಅಂಗ ತೋರಿಸಿ ಹಸ್ತಮೈಥುನ, ಕಾಮುಕನ ಅಸಹ್ಯ ದೃಶ್ಯ ಸೆರೆ!
ವಿಡಿಯೋ ರೆಕಾರ್ಡ್ ಮಾಡುತ್ತಿದ್ದಂತೆ ಕಾಮುಕ ಯುವಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದೇ ರಸ್ತೆಯಲ್ಲಿ ನಡೆದುಕೊಂಡು ಬರುವ ಹಲವು ಮಹಿಳೆಯರಿಗೆ ಈ ರೀತಿಯ ಅನುಭವವಾಗಿದೆ ಎಂದು ವಿಯಾ ದೋಶಿ ಅನ್ನೋ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಈ ಕಹಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ತನಗೆ ಮೂರು ಬಾರಿ ಈ ರೀತಿಯ ಅನುಭವವಾಗಿದೆ. ಈ ರಸ್ತೆಯಲ್ಲಿ ಸಾಗುವ ಹಲವು ಮಹಿಳೆಯರು ಈ ಕುರಿತ ಘಟನೆ ಹೇಳಿದ್ದಾರೆ. ಮುಂಬೈ ಪೊಲೀಸರು ತಕ್ಷಣವೇ ಗಮನಹರಿಸಬೇಕು. ಮಹಿಳೆಯರ ಸುರಕ್ಷತೆಗೆ ಗಮನ ನೀಡಬೇಕು ಎಂದು ಮನವಿ ಮಾಡಿದ್ದರು.
ಮಹಿಳೆ ಮನವಿ ಬೆನ್ನಲ್ಲೇ ಮುಂಬೈ ಪೊಲೀಸರು ಈ ವಲಯದಲ್ಲಿ ಪೊಲೀಸ್ ಪ್ಯಾಟ್ರೋಲ್ ಹಾಕಿದೆ. ಈ ಕುರಿತು ಮಹಿಳೆ ಧನ್ಯವಾದ ತಿಳಿಸಿದ್ದಾರೆ. ಈ ರೀತಿಯ ಹಲವು ಘಟನೆಗಳು ನಡೆದಿದೆ. ಮಹಿಳೆಯರು ಪ್ರಯಾಣಿಸುವಾಗ ರೈಲಿನಲ್ಲಿ, ಬಸ್‌ನಲ್ಲಿ ಹಸ್ತಮೈಥುನ ಮಾಡಿಕೊಂಡು ಸ್ಖಲನ ಮಾಡಿದ ಘಟನೆಗಳು ನಡೆದಿದೆ.
ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿ ಅಪ್ರಾಪ್ತ ಬಾಲಕಿಯ ಮೇಲೆ ಸ್ಖಲಿಸಿದ ವ್ಯಕ್ತಿಯ ಬಂಧನ!
ಕಾಮುಕರ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಮುಂಬೈನ ಜುಹು ವಲಯದಲ್ಲೇ ಈ ರೀತಿ ವಿಕೃತಿ ಘಟನೆಗಳು ನಡೆದಿರುವ ಮಾಹಿತಿ ಬಹಿರಂಗವಾಗಿರುವುದು ಇದೀಗ ಹಲವರ ಆತಂಕಕ್ಕೆ ಕಾರಣವಾಗಿದೆ. ಇತ್ತ ಕಾಲ್ಕಿತ್ತ ಯುವಕನ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ