ಬೀದಿ ಬದಿಯಲ್ಲಿ ಬಿಸಿ ಬಿಸಿ ಪರೋಟ ತಯಾರಿಸಿ ಮಾರಾಟ ಮಾಡುತ್ತಿರುವ ಪರೋಟ ಗರ್ಲ್ ಇದೀಗ ಭಾರಿ ವೈರಲ್ ಆಗಿದ್ದಾಳೆ. ಪರೋಟ್ ಗರ್ಲ್ ಸೌಂದರ್ಯ, ಬಿಸಿ ಬಿಸಿ ರುಚಿಯಾದ ಪರೋಟದಿಂದ ವ್ಯಾಪಾರ ಡಬಲ್ ಆಗಿದೆ.
ನವದೆಹಲಿ(ಜು.22) ವಡಾಪಾವ್ ಗರ್ಲ್ ಎಂದೇ ಜನಪ್ರಿಯವಾಗಿರುವ ಚಂದ್ರಿಕಾ ದಿಕ್ಷಿತ್ ಇತ್ತೀಚೆಗೆ ಬಿಗ್‌ಬಾಸ್ ಕ್ಷೇತ್ರಕ್ಕೂ ಎಂಟ್ರಿಕೊಟ್ಟು ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಬೀದಿ ಬದಿಯಲ್ಲಿ ಪರೋಟ ತಯಾರಿಸಿ ಮಾರಾಟ ಮಾಡುತ್ತಿರುವ ಪರೋಟ ಗರ್ಲ್ ಭಾರಿ ವೈರಲ್ ಆಗಿದ್ದಾಳೆ. ಬನಾನ ಪರೋಟಾ, ಮೊಟ್ಟೆ ಪರೋಟ, ಜ್ಯೂಸ್ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ರುಚಿ ರುಚಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದಾಳೆ. ದೆಹಲಿಯ ಬೀದಿ ಬದಿಯಲ್ಲಿ ಪರೋಟ ಮಾರಾಟ ಮಾಡುತ್ತಿರುವ ಈಕೆ ಇದೀಗ ಹೊಸ ಸೆನ್ಸೇಶನ್. ಈ ಸುಂದರಿ ಯುವತಿಯ ವಿಡಿಯೋಗಳು ಬಾರಿ ವೈರಲ್ ಆಗಿದೆ.
Puy ಪರೋಟ ಗರ್ಲ್ ಎಂದೇ ಈಕೆ ಖ್ಯಾತಿಗೊಂಡಿದ್ದಾಳೆ. ಪಯ್ ರೋಟಿ ಲೇಡಿ ಅನ್ನೋ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲೂ ಭಾರಿ ಸಕ್ರಿಯವಾಗಿದ್ದಾಳೆ. ಈಕೆಯ ಪರೋಟೋ ಗಾಡಿ ವಿಡಿಯೋಗಳು ಲಕ್ಷ ಲಕ್ಷ ವೀಕ್ಷಣೆ ಕಂಡಿದೆ. ವಿಶೇಷ ಅಂದರೆ ಪಯ್ ರೋಟಿ ಲೇಡಿ ಮೂಲತಃ ಥಾಯ್ಲೆಂಡ್ ದೇಶದವಳು. ದೆಹಲಿಯಲ್ಲಿ ಪರೋಟಾ ಗಾಡಿ ಇಟ್ಟು ವ್ಯಾಪಾರ ಮಾಡುತ್ತಿದ್ದಾಳೆ.
1 ಕೋಟಿ ರೂ ಫೋರ್ಡ್ ಮಸ್ತಾಂಗ್ ಕಾರು ಖರೀದಿಸಿದ್ರಾ ವಡಾ ಪಾವ್ ಹುಡುಗಿ? ವಿಡಿಯೋ ವೈರಲ್!
ಇಬ್ಬರು ಸಹೋದರಿಯರ ಜೊತೆ ಈ ಪರೋಟ ಗರ್ಲ್ ವ್ಯಾಪಾರ ನಡೆಸುತ್ತಿದ್ದಾಳೆ. ಹೀಗಾಗಿ ಥಾಯ್ಲೆಂಡ್ ಮೂಲದ ಆಹಾರ ಖಾದ್ಯಗಳು ಪಯ್ ರೋಟಿ ಲೇಡಿ ಬಳಿ ಸಿಗುತ್ತಿದೆ. ಈ ಪೈಕಿ ಬಾಳೆ ಹಣ್ಣಿನ ಪರೋಟ, ಮೊಟ್ಟೆ ಪೊರೋಟಾ ಭಾರಿ ಜನಪ್ರಿಯವಾಗಿದೆ. ಥಾಯ್ಲೆಂಡ್ ಮೂಲದ ಆಹಾರ ಸವಿಯಲು ಇದೀಗ ಈ ಪರೋಟ್ ಗರ್ಲ್ ಗಾಡಿ ಬಳಿ ಜನ ಸೇರುತ್ತಿದ್ದಾರೆ. ಇದೇ ವೇಳೆ ಥಾಯ್ಲೆಂಡ್ ಮೂಲದ ಹಲವು ಉದ್ಯೋಗಿಗಳು ಬೀದಿ ಬದಿಯ ಈ ಪರೋಟ್ ಗರ್ಲ್ ಬಳಿ ಆಹಾರ ಸವಿಯಲು ಆಗಮಿಸುತ್ತಿದ್ದಾರೆ.
ಪರೋಟ ಗರ್ಲ್ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈಕೆ ಮೊಟ್ಟೆ ಪರೋಟ ಮಾಡುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಳು. ಈ ವಿಡಿಯೋ ಮೊದಲ ಒಂದು ಗಂಟೆಯಲ್ಲಿ 4.75 ಲಕ್ಷ ವೀಕ್ಷಣೆ ಕಂಡಿದೆ. ಪರೋಟ್ ಗರ್ಲ್ ವ್ಯಾಪಾರ ಕುರಿತು ಹಲವರು ಕಮೆಂಟ್ ಮಾಡಿದ್ದಾರೆ. ಈಕೆಗೆ ಕ್ವೀನ್ ಆಫ್ ಕುಕ್ ಬಿರುದು ನೀಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
ಪರೋಟಾ ಗರ್ಲ್‌ಗೂ ಮೊದಲು ದೆಹಲಿಯಲ್ಲಿ ವಡಾ ಪಾವ್ ಗರ್ಲ್ ಭಾರಿ ವೈರಲ್ ಆಗಿದ್ದಾಳೆ. ಮುಂಬೈನ ಜನಪ್ರಿಯ ವಡಾಪಾವ್ ಖಾದ್ಯವನ್ನು ದೆಹಲಿ ಬೀದಿ ಬದಿಯಲ್ಲಿ ಮಾರಾಟ ಮಾಡಿ ಭಾರಿ ಜನಪ್ರಿಯವಾಗಿದ್ದಾಳೆ. ಈಕೆಯ ಜನಪ್ರಿಯತೆ ಬಿಗ್ ಬಾಸ್ ಅಂಗಳಲ್ಲೂ ತಲುಪಿದೆ. ಈ ಬಾರಿಯ ಒಟಿಟಿ ಬಿಗ್‌ಬಾಸ್ ವೇದಿಕೆಯಲ್ಲೂ ದೆಹಲಿಯ ವಡಾಪಾವ್ ಗರ್ಲ್ ಚಂದ್ರಿಕಾ ಗೇರ್ ದೀಕ್ಷಿತ್ ಕಾಣಿಸಿಕೊಂಡಿದ್ದರು.
Street Food: ದೆಹಲಿಯ ವಡಾ ಪಾವ್ ಹುಡುಗಿ; ಯಾರೀಕೆ ಚಂದ್ರಿಕಾ ದೀಕ್ಷಿತ್?