ಕಿತ್ತು ತಿನ್ನುವ ಬಡತನ, ಅನಾರೋಗ್ಯದ ಮಗನ ಬದುಕಿಸಲು ಕೊಲೆ ಮಾಡಿ ದುಡ್ಡು ತಂದ ಅಪ್ಪ!

By Chethan Kumar  |  First Published Sep 2, 2024, 5:11 PM IST

ಹೃದಯವಿದ್ರಾಕ ಘಟನೆಯೊಂದು ನಡೆದಿದೆ. ಮಗನಿಗೆ ತೀವ್ರ ಅನಾರೋಗ್ಯ. ಕಟುಂಬಸ್ಥರು, ಸ್ನೇಹಿತರ ಬಳಿ ದುಡ್ಡು ಕೇಳಿದರೂ ಸಿಗಲಿಲ್ಲ. ಕೇವಲ 1,500 ರೂಪಾಯಿಗಾಗಿ ಹೂ ಮಾರುವ ಮಹಿಳೆ ಕೊಲೆ ಮಾಡಿದ ಘಟನೆ ನಡೆದಿದೆ.
 


ಅಹಮ್ಮದಾಬಾದ್(ಸೆ.02) ಒಂದೆಡೆ ಮಗನ ಕ್ಷೀಣಿಸುತ್ತಿರುವ ಆರೋಗ್ಯದ ಚಿಕಿತ್ಸೆ, ಮತ್ತೊಂದೆಡೆ ಹಣ ಹೊಂದಿಸಲು ಹೆಣಗಾಡುತ್ತಿರುವ ಅಪ್ಪ. ಕುಟುಂಬಸ್ಥರು, ಸ್ನೇಹಿತರು ಎಲ್ಲರ ಬಳಿ ಅಂಗಲಾಚಿದರೂ ದುಡ್ಡು ಸಿಗಲಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ದುಡ್ಡು ನೀಡದೆ ಚಿಕಿತ್ಸೆ ಮುಂದುವರಿಯುವುದಿಲ್ಲ. ದಾರಿ ಕಾಣದ ಅಪ್ಪ, ದೇವಸ್ಥಾನ ಹೊರಭಾಗದಲ್ಲಿ ಹೂವು ಮಾರುವ ಮಹಿಳೆಯನ್ನು ಹತ್ಯೆ ಮಾಡಿದ ವಿಚಿತ್ರ ಘಟನೆ ಗುಜರಾತ್‌ನ ಪಠಾಣ್ ಜಿಲ್ಲೆಯಲ್ಲಿ ನಡೆದಿದೆ. ಮಗನ ಚೇತರಿಸಿ ಬಂದ ಬೆನ್ನಲ್ಲೇ ಅಪ್ಪ ಜೈಲು ಸೇರಿದ್ದಾನೆ.

ಲುಖಾಸನ ಗ್ರಾಮದಲ್ಲಿ ಜುಲೈ 20 ರಂದು ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹ ವಶಕ್ಕೆ ಪಡೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ತನಿಖೆ ಆರಂಭಿಸಿದ್ದಾರೆ.ತನಿಖೆ ವೇಳೆ ಮಹಿಳೆ ಹತ್ಯೆಯಾಗಿರುವುದು ಸ್ಪಷ್ಟವಾಗಿದೆ. ಹೂವು ಮಾರುವ ಮಹಿಳೆಯ ಕೊಲೆ ಮಾಡಿದ್ದು ಯಾರು? ಎಂದು ಪೊಲೀಸರ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. 

Tap to resize

Latest Videos

ಕುಟುಂಬ ಸಮೇತ ಬದುಕು ಅಂತ್ಯಗೊಳಿಸಿದ ಕಾಂಗ್ರೆಸ್ ನಾಯಕ, ಪತ್ನಿ ಇಬ್ಬರು ಪುತ್ರರೂ ಸಾವು!

ಬರೋಬ್ಬರಿ 800 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಲ್ಪೇಶ್ ಮಾಲ್ಮೀಕಿ ಹೆಸರು ಪೊಲೀಸರಿಗೆ ಪತ್ತೆಯಾಗಿದೆ. ಜಾಡು ಹಿಡಿದು ಹೊರಟ ಪೊಲೀಸರು ಕಲ್ಪೇಶ್ ವಾಲ್ಮಿಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಕೇವಲ 1,500 ರೂಪಾಯಿಗೆ ಈ ಹತ್ಯೆ ನಡೆದಿತ್ತು. ಹೂವು ಮಾರಿ 1,500 ರೂಪಾಯಿ ಸಂಪಾದಿಸಿದ್ದ ಮಹಿಳೆಯನ್ನು ಹತ್ಯೆ ಮಾಡಿ ಈ ಹಣವನ್ನು ಖಾಸಗಿ ಆಸ್ಪತ್ರೆಯಲ್ಲಿ ಮಗನ ಚಿಕಿತ್ಸೆಗೆ ನೀಡಲಾಗಿತ್ತು.

ವಿಚಾರಣೆ ವೇಳೆ ಕಲ್ಪೇಶ್ ವಾಲ್ಮೀಕಿ ಈ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ. ಮಗ ತೀವ್ರ ಅಸ್ವಸ್ಥನಾಗಿದ್ದ. ಸರ್ಕಾರಿ ಆಸ್ಪತ್ರೆಗೆ ತೆರಳಿದರೂ ಪ್ರಯೋಜನವಾಗಿಲ್ಲ. ಬಳಿಕ ಎಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದರು. ಮಗನ ಬದುಕಿಸಬೇಕಿತ್ತು. ಆದರೆ ನನ್ನ ಬಳಿ ಹಣ ಇರಲಿಲ್ಲ. ಹೀಗಾಗಿ ದೇವಸ್ಥಾನದ ಬಳಿ ಹೂ ಮಾರುತ್ತಿದ್ದ ಮಹಿಳೆಯಿಂದ ಹಣ ಕದಿಯಲು ಮುಂದಾಗಿದ್ದೆ. ಆದರೆ ಹಣ ಕದಿಯುವಾಗ ಆಕೆಗೆ ಗೊತ್ತಾಗಿತ್ತು. ಆಕೆ ಗದ್ದಲ ಸೃಷ್ಟಿಸಿದರೆ ಎಲ್ಲರೂ ಸೇರಿ ನನ್ನ ಹೊಡೆದು ಪೊಲೀಸರ ಕೈಗೆ ಒಪ್ಪಿಸುತ್ತಾರೆ. ಇತ್ತ ನನ್ನ ಮಗನ ಆರೋಗ್ಯ ಮತ್ತಷ್ಟು ಹದಗೆಡಲಿದೆ. ಹೀಗಾಗಿ ಹತ್ಯೆ ಮಾಡಿದೆ ಎಂದಿದ್ದಾರೆ. ಇದೀಗ ಮಗನ ಚೇತರಿಸಿಕೊಂಡಿದ್ದಾನೆ. ಆದರೆ ಮಗನಿಗಾಗಿ ಕೊಲೆ ಮಾಡಿ ದುಡ್ಡು ತಂದ ತಂದೆ ಜೈಲು ಸೇರಿದ್ದಾನೆ.

ಛತ್ತೀಸ್‌ಗಢದಲ್ಲಿ ನದಿ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆ 20 ಕೀ.ಮೀ ಕೊಚ್ಚಿ ಹೋಗಿ ಒಡಿಶಾದಲ್ಲಿ ರಕ್ಷಣೆ!
 

click me!